For Quick Alerts
  ALLOW NOTIFICATIONS  
  For Daily Alerts

  ನಟ ಲವ್ಲಿ ಸ್ಟಾರ್ ಪ್ರೇಮ್ ಮುಡಿಗೆ ಹೊಸ ಬಿರುದು

  By Rajendra
  |

  ನಟ ಪ್ರೇಮ್ ಅವರನ್ನು ಅವರ ಅಭಿಮಾನಿಗಳು ಇಷ್ಟು ದಿನ ಪ್ರೀತಿಯಿಂದ 'ಲವ್ಲಿ ಸ್ಟಾರ್' ಎಂದೇ ಕರೆಯುತ್ತಿದ್ದರು. ಈಗ ಅವರಿಗೆ ಹೊಸ ಬಿರುದು ಸಿಕ್ಕಿದೆ. ಇದನ್ನು ಅವರಿಗೆ ದಯಪಾಲಿಸಿರುವವರು ಅವರ ಅಭಿಮಾನಿಗಳು ಹಾಗೂ ತಾಜ್ ಮಹಲ್ ಹಾಗೂ ಚಾರ್ ಮಿನಾರ್ ಖ್ಯಾತಿಯ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು.

  ಸ್ವತಃ ಈ ಬಗ್ಗೆ ಒನ್ಇಂಡಿಯಾಗೆ ಪ್ರತಿಕ್ರಿಯಿಸಿದ ಪ್ರೇಮ್ ಅವರು, "ಆರ್ ಚಂದ್ರು ಹಾಗೂ ನನ್ನ ಅಭಿಮಾನಿಗಳು ನನ್ನನ್ನು ಇನ್ನು ಮುಂದೆ ಸ್ಟೈಲಿಶ್ ಸ್ಟಾರ್ ಎಂದು ಕರೆಯಲು ಬಯಸಿದ್ದಾರೆ. ಹಾಗಾಗಿ ಇನ್ನು ಮುಂದೆ 'ಲವ್ಲಿ ಸ್ಟಾರ್' ಬದಲಿಗೆ ಹೊಸ ಸ್ಟಾರ್ ತಮ್ಮ ಹೆಸರಿಗೆ ಸೇರ್ಪಡೆಯಾಗಲಿದೆ" ಎಂದರು.

  ಆರ್ ಚಂದ್ರು ಹಾಗೂ ಪ್ರೇಮ್ ಅವರ ಕಾಂಬಿನೇಷನ್ ನಲ್ಲಿ ಬಂದ 'ಚಾರ್ ಮಿನಾರ್' ಚಿತ್ರ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದ್ದು ಗೊತ್ತೇ ಇದೆ. ಈಗ ಚಂದ್ರು ಅವರ ಮಾಜಿ ಸಹಾಯಕ ಶಿವ ತೇಜಸ್ ಅವರು 'ಮಳೆ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

  ಮಳೆ ಚಿತ್ರದ ಮೂಲಕ ಚಾರ್ ಮಿನಾರ್ ತಂಡ ಮತ್ತೊಮ್ಮೆ ಒಂದಾಗುತ್ತಿದೆ. ಈ ಚಿತ್ರವನ್ನು ಆರ್ ಚಂದ್ರು ನಿರ್ಮಿಸುತ್ತಿದ್ದಾರೆ. ಚಂದ್ರು ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳದಿದ್ದರೂ ಅವರ ಸಲಹೆ ಸೂಚನೆಗಳು ಮಾತ್ರ ಇದ್ದೇ ಇರುತ್ತವೆ ಎಂದಿದ್ದಾರೆ ಪ್ರೇಮ್.

  ಆ.10ಕ್ಕೆ ಕಂಠೀರವದಲ್ಲಿ ಸೆಟ್ಟೇರುತ್ತಿರುವ ಚಿತ್ರ

  ಆ.10ಕ್ಕೆ ಕಂಠೀರವದಲ್ಲಿ ಸೆಟ್ಟೇರುತ್ತಿರುವ ಚಿತ್ರ

  'ಮಳೆ' ಚಿತ್ರವು ಆಗಸ್ಟ್ 10ಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರುತ್ತಿದೆ. ಕನ್ನಡ ಚಲನಚಿತ್ರೋದ್ಯಮದ ಗಣ್ಯರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ.

  ಮತ್ತೊಮ್ಮೆ ಸಿಕ್ಸ್ ಪ್ಯಾಕ್ ನಲ್ಲಿ ಪ್ರೇಮ್

  ಮತ್ತೊಮ್ಮೆ ಸಿಕ್ಸ್ ಪ್ಯಾಕ್ ನಲ್ಲಿ ಪ್ರೇಮ್

  ಮಳೆ ಚಿತ್ರಕ್ಕಾಗಿ ಪ್ರೇಮ್ ಈಗಾಗಲೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದಾರೆ. ತಮ್ಮ ದೇಹವನ್ನು ಹುರಿಗಟ್ಟಿಸಿ ಮತ್ತೊಮ್ಮೆ ಸಿಕ್ಸ್ ಪ್ಯಾಕ್ ತೋರಲು ಅಣಿಯಾಗಿದ್ದಾರೆ. ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರೇಮ್ ಈ ಬಾರಿ ಇನ್ನಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಸ್ಟೈಲಿಶ್ ಸ್ಟಾರ್ ಪಾತ್ರಕ್ಕೆ ತಕ್ಕಂತೆ ತಮ್ಮ ಪಾತ್ರ

  ಸ್ಟೈಲಿಶ್ ಸ್ಟಾರ್ ಪಾತ್ರಕ್ಕೆ ತಕ್ಕಂತೆ ತಮ್ಮ ಪಾತ್ರ

  ಮಳೆ ಚಿತ್ರಕ್ಕಾಗಿ ಪ್ರೇಮ್ ತಮ್ಮ ತೂಕವನ್ನೂ ಇಳಿಸಿಕೊಂಡಿದ್ದಾರೆ. ಈಗ ಅವರ ಬಿರುದು ಸ್ಟೈಲಿಶ್ ಸ್ಟಾರ್ ಎಂದಾಗಿರುವ ಕಾರಣ ಅದಕ್ಕೆ ತಕ್ಕಂತೆ ತಮ್ಮ ಪಾತ್ರವನ್ನು ಪೋಷಿಸುತ್ತಿದ್ದಾರೆ.

  ಚಂದ್ರ ನಿರೀಕ್ಷಿಸಿದ ಮಟ್ಟಕ್ಕೆ ಮುಟ್ಟಲಿಲ್ಲ

  ಚಂದ್ರ ನಿರೀಕ್ಷಿಸಿದ ಮಟ್ಟಕ್ಕೆ ಮುಟ್ಟಲಿಲ್ಲ

  ಪ್ರೇಮ್ ಅಭಿನಯದ 'ಚಂದ್ರ' ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಇಲ್ಲಿ ಪ್ರೇಮ್ ಅವರು ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡರೂ ಅದ್ಯಾಕೋ ಏನೋ ಪ್ರೇಕ್ಷಕರು ಆ ಚಿತ್ರವನ್ನು ಸಾರಾಸಗಟಾಗಿ ನಿರಾಕರಿಸಿದರು.

  ಪ್ರೇಮ್ ಸಾಲು ಸಾಲು ಚಿತ್ರಗಳು ತೆರೆಗೆ

  ಪ್ರೇಮ್ ಸಾಲು ಸಾಲು ಚಿತ್ರಗಳು ತೆರೆಗೆ

  ಸದ್ಯಕ್ಕೆ ಪ್ರೇಮ್ ಅವರ ಸಾಲು ಸಾಲು ಚಿತ್ರಗಳು ಬರುತ್ತಿವೆ. ಅವುಗಳಲ್ಲಿ ಶತ್ರು, ಸಿಹಿಮುತ್ತು, ಜನುಮ ಜನುಮದಲ್ಲೂ ಹಾಗೂ ಅತಿ ಅಪರೂಪ ಚಿತ್ರಗಳು ತೆರೆಗೆ ಅಪ್ಪಳಿಸಲು ಸಿದ್ಧವಾಗಿವೆ.

  ಪ್ರೇಮ್ ಜೊತೆ 'ಮಳೆ'ಗೆ ಕೊಡೆ ಹಿಡಿಯುವವರಾರು?

  ಪ್ರೇಮ್ ಜೊತೆ 'ಮಳೆ'ಗೆ ಕೊಡೆ ಹಿಡಿಯುವವರಾರು?

  ಇನ್ನು ಮಳೆ ಚಿತ್ರಕ್ಕೆ ನಾಯಕಿಯಾಗಿ ಅಮೂಲ್ಯಾ ಅಭಿನಯಿಸುವ ಸಾಧ್ಯತೆಗಳಿವೆ. ಒಂದು ವೇಳೆ ಅಮೂಲ್ಯ ಚಾನ್ಸ್ ಮಿಸ್ ಆದರೆ ರಾಧಿಕಾ ಪಂಡಿತ್ ಅವರನ್ನು ಕರೆತರುವ ಬಗ್ಗೆಯೂ ಯೋಚಿಸಲಾಗಿದೆ. 'ಮಳೆ'ಯಲ್ಲಿ ಪ್ರೇಮ್ ಜೊತೆ ಕೊಡೆ ಹಿಡಿಯುವ ಬೆಡಗಿ ಯಾರಾಗುತ್ತಾರೆ ಎಂಬುದನ್ನು ಇನ್ನಷ್ಟೇ ಗೊತ್ತಾಗಬೇಕು.

  English summary
  Actor Prem was called as Lovely Star by his fans all these years. Now, the actor is getting a new name. Well, he is being rechristened as Stylish Star of Kannada films by director-producer R Chandru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X