"ಹಿಂದಿಯಲ್ಲಿ ಅಡಿಕೆಗೆ ಸುಪಾರಿ ಅಂತಾರೆ.. ತುಳುವಿನಲ್ಲಿ ಏನಂತಾರೆ?"; ಅಪ್ಪನ ಸುಪಾರಿ ದೂರಿಗೆ ಚೈತ್ರಾ ಕುಂದಾಪುರ ಟಾಂಗ್

ಚೈತ್ರಾ ಕುಂದಾಪುರ ವಿವಾಹವಾಗುತ್ತಿದ್ದಂತೆ ವಿವಾದಗಳು ಕೂಡ ದೊಡ್ಡದಾಗುತ್ತಿವೆ. ಸ್ವಂತ ಬಾಲಕೃಷ್ಣ ನಾಯಕ್ ಮಗಳ ವಿರುದ್ಧವೇ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ "ಮಗಳು ಕಳ್ಳಿ" ಎಂದು ಮಾಧ್ಯಮಗಳ ಮುಂದೆ ಮಾತಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಈಗ ತನ್ನನ್ನು ಕೊಲ್ಲುವುದಕ್ಕೆ ಮಗಳು ಸುಪಾರಿ ಕೊಟ್ಟಿದ್ದಾರೆಂದು ಚೈತ್ರಾ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ಧಾರೆ.

ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯಕ್ ಮಾಡಿದ ಆರೋಪಗಳು ದೊಡ್ಡದಾಗಿ ಸದ್ದು ಮಾಡುತ್ತಿವೆ. ಅತ್ತ ಅಪ್ಪ ಆರೋಪ ಮಾಡುತ್ತಿದ್ದರೆ, ಇತ್ತ ಮಗಳು ತಿರುಗೇಟು ಕೊಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅಪ್ಪ-ಮಗಳ ಆರೋಪ-ಪ್ರತ್ಯಾರೋಪ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿವೆ. ಈಗ ತಂದೆ ತನ್ನ ಹತ್ಯೆಗೆ ಸುಪಾರಿ ನೀಡುವುದಾಗಿ ಚೈತ್ರಾ ಕುಂದಾಪುರ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.

Chaitra Kundapura instagram post went viral after her father Balakrishna Naik filed complaint

ಈ ಆರೋಪದ ಹಿನ್ನೆಲೆಯಲ್ಲೇ ಕುಂದಾಪುರ ಪೊಲೀಸ್ ಠಾಣೆಯಲ್ಲಿ ತಂದೆ ಬಾಲಕೃಷ್ಣ ನಾಯಕ್ ದೂರನ್ನು ದಾಖಲಿಸಿದ್ದಾರೆ. ತನ್ನ ವಿರುದ್ಧ ವಿರುದ್ಧ ದೂರ ದಾಖಲಾಗುತ್ತಿದ್ದಂತೆ ಚೈತ್ರಾ ಕುಂದಾಪುರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಡಿಕೆ ಹಿಡಿದ ಫೋಟೋವನ್ನು ಹಿಡಿದು, ತಂದೆ ಪಂಚಿಂಗ್ ಡೈಲಾಗ್ ಬಿಟ್ಟಿದ್ದಾರೆ. ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಂದೆಯಿಂದ ಸುಪಾರಿ ಕೇಸ್

ಕೆಲವು ದಿನಗಳಿಂದ ತಂದೆ-ಮಗಳ ಕಿತ್ತಾಟ ಬೀದಿ ರಂಪಾಟವಾಗಿದೆ. ಮದುವೆಗೆ ಮಗಳು ಕರೆದಿಲ್ಲ. ಮಗಳು ಕಳ್ಳಿ, ಅವಳ ಮುಖವನ್ನೂ ನೋಡುವುದಿಲ್ಲ ಎಂದು ತಂದೆ ಬಾಲಕೃಷ್ಣ ನಾಯಕ್ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಚೈತ್ರಾ ಕುಂದಾಪುರ ತಾಯಿ ಮೂಲಕ ತಿರುಗೇಟು ಕೊಟ್ಟಿದ್ದರು. ತಂದೆ ಹಾಗೂ ಅಕ್ಕ ಇಬ್ಬರೂ ಸೇರಿ ಆಸ್ತಿಗಾಗಿ ಹೀಗೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಚೈತ್ರಾ ವಿಡಿಯೋದಲ್ಲಿ ಹೇಳಿದ್ದರು. ಈಗ ಬಾಲಕೃಷ್ಣ ನಾಯಕ್ ಮಗಳು ಭೂಗತ ದೊರೆಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಜೀವ ಬೆದರಿಕೆ ಇದೆಯಂದು ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದಾರೆ.

ಚೈತ್ರಾ 'ಸುಪಾರಿ' ಟಾಂಗ್

ತಂದೆ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಂತೆ ಚೈತ್ರಾ ಕುಂದಾಪುರ ಹಾಕಿದ ಇನ್‌ಸ್ಟಾಗ್ರಾಂ ಪೋಸ್ಟ್‌ ಸದ್ದು ಮಾಡುತ್ತಿದೆ. ತಮ್ಮ ತೋಟದಲ್ಲಿ ಬಿದ್ದಿದ್ದ ಅಡಿಕೆಯನ್ನು ಹಿಡಿದು ಫೋಟೋಗಳನ್ನು ಹಾಕಿದ್ದಾರೆ. ಆ ಫೋಟೋಗಳಿಗೆ ಕ್ಯಾಪ್ಶನ್ ಅನ್ನೂ ಕೊಟ್ಟಿದ್ದಾರೆ. " ಹೀಗೆ ತೋಟದಲ್ಲಿ ಓಡಾಡುವಾಗ ಒಂದು ಅಡಿಕೆ ಸಿಕ್ಕಿತು ಇದಕ್ಕೆ ಹಿಂದಿಯಲ್ಲಿ "ಸುಪಾರಿ" ಅಂತಾರೆ.. ತುಳುವಿನಲ್ಲಿ ಏನಂತಾರೆ??" ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಬಾರಿ ಚರ್ಚೆಯಾಗುತ್ತಿದೆ.

ನೆಟ್ಟಿಗರ ಕಮೆಂಟ್ ಏನು?

ಚೈತ್ರಾ ಕುಂದಾಪುರ ಪೋಸ್ಟ್‌ಗೆ ನೆಟ್ಟಿಗರು ಕಮೆಂಟ್ ಹಾಕಿದ್ದಾರೆ. "ಇದನ್ನೇ ನೀವು ನಿಮ್ಮ ಅಪ್ಪಾಜಿ ಕೊಟ್ಟಿದ್ದು" ಎಂದಿದ್ದಾರೆ. ಇನ್ನೊಬ್ಬರು "ಕನ್ನಡಲ್ಲಿ ಅದಕ್ಕೆ ಅಡಿಕೆ ಅಂತಾರೆ ಅಕ್ಕಾ" ಎಂದು ಹೇಳಿದ್ದಾರೆ. ಮತ್ತೊಬ್ಬರು "ನೀವು ಮೊದಲು ಟಿವಿ ಶೋಗಳನ್ನ ಬಿಟ್ಟು ಹಿಂದುತ್ವಕ್ಕಾಗಿ ಮಾತಾಡಿ. ಜನರಿಗೆ ಹಿಂದುತ್ವದ ವಿಚಾರಗಳನ್ನು ತಿಳಿಸಿ ದುಡ್ಡು ಈಸ್ಕೊಳ್ಳದೇ ಭಾಷಣ ಮಾಡಿ. ನಮ್ಮ ಜನರನ್ನು ಎಚ್ಚರರನ್ನಾಗಿ ಮಾಡಿ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಇಷ್ಟು ಮುದ್ದಾಗಿ ಕಾಣುತಿದ್ದೀರ ಚೈತ್ರಾ ಅಕ್ಕ" ಕಮೆಂಟ್ ಮಾಡಿದ್ದಾರೆ.

ತಂದೆ ಆರೋಪವೇನು?

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಮದುವೆಯನ್ನು ಬಾಲಕೃಷ್ಣ ನಾಯಕ್ ಒಪ್ಪಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ತನ್ನ ಆಸ್ತಿಯನ್ನು ಹೊಡೆಯುವುದಕ್ಕೆ ಚೈತ್ರಾ ಕುಂದಾಪುರ ಪ್ರಯತ್ನ ಮಾಡುತ್ತಿದ್ದಾಳೆ. ಅಲ್ಲದೆ ಮದುವೆಗೆ ಬಾರದೆ ಇದ್ದರೆ, ಭೂಗತಲೋಕದ ದೊರೆಗಳಿಂದ ಹತ್ಯೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಳು. ಹಣಕ್ಕಾಗಿ ನನ್ನನ್ನು ಕೊಲೆ ಮಾಡಬಹುದು. ಈ ಕಾರಣಕ್ಕೆ ರಕ್ಷಣೆ ಕೊಡಬೇಕೆಂದು ತಂದೆ ಬಾಲಕೃಷ್ಣ ಕುಂದಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

More from Filmibeat

English summary
Chaitra Kundapura instagram post went viral after her father Balakrishna Naik filed complaint;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X