"ಸೂರಪ್ಪ ಬಾಬುಗೆ ನಮ್ಮ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೊಡುತ್ತೇನೆ": ನಿರ್ಮಾಪಕನ ವಿರುದ್ಧ ಕಿಡಿಕಾರಿದ ಚಂದ್ರಚೂಡ

ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ಬೆಳೆಯುತ್ತಲೇ ಇದೆ. ಈ ಪ್ರಕರಣಕ್ಕೆ ಒಬ್ಬೊಬ್ಬರೇ ಸೇರಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಚಕ್ರವರ್ತಿ ಚಂದ್ರಚೂಡ ಯೂಟ್ಯೂಬ್ ಚಾನೆಲ್‌ನಲ್ಲಿ ಸೂರಪ್ಪ ಬಾಬು ಅವರನ್ನು ಜರಿದಿದ್ದರು. 'ಶಿಖಂಡಿ' ಎಂದು ಹೇಳಿದ್ದರು. ಆ ಬಳಿಕ ರೊಚ್ಚಿಗೆದ್ದು ಸೂರಪ್ಪ ಬಾಬು ಪ್ರತಿಕಾಗೋಷ್ಠಿ ಮಾಡಿ ತಿರುಗೇಟು ನೀಡಿದ್ದರು.

ಚಕ್ರವರ್ತಿ ಚಂದ್ರಚೂಡ ವಿರುದ್ಧ ನಿರ್ಮಾಪಕ ಸೂರಪ್ಪ ಬಾಬು ಆರೋಪಗಳ ಸುರಿಮಳೆಯನ್ನೇ ಮಾಡಿದ್ದರು. ಚಂದ್ರಚೂಡ ಎಷ್ಟೋ ಸಂಸಾರ ಹಾಳು ಮಾಡಿದ್ದಾರೆಂದು ಜರಿದಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಚಕ್ರವರ್ತಿ ಚಂದ್ರಚೂಡ ಮತ್ತೆ ಸೂರಪ್ಪ ಬಾಬು ವಿರುದ್ಧ ಹರಿಹಾಯ್ದಿದ್ದಾರೆ.

Chakravarthy Chandrachuda said he will give security guard job for produce Surappa Babu

ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ನಡುವೆ ಕಿತ್ತಾಟದಲ್ಲಿ ವೀರಕಪುತ್ರ ಶ್ರೀನಿವಾಸ್ ಹಾಗೂ ಚಕ್ರವರ್ತಿ ಚಂದ್ರಚೂಡ ಎಂಟ್ರಿ ಕೊಟ್ಟಿದ್ದರು. ಕಿಚ್ಚ ಸುದೀಪ್ ಪರ ಬ್ಯಾಟ್ ಬೀಸಿದ್ದರು. ಈ ವೇಳೆ ಈ ವಿವಾದದ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ಇದ್ದಾರೆಂದು ಆರೋಪ ಮಾಡಿದ್ದರು.

ಇಂದು (ಜುಲೈ 24) ಚಕ್ರವರ್ತಿ ಚಂದ್ರಚೂಡ ಮತ್ತೆ ಮಾಧ್ಯಮದವರ ಮುಂದೆ ಸೂರಪ್ಪ ಬಾಬು ವಿರುದ್ಧ ಗುಡುಗಿದ್ದಾರೆ. "ನಮ್ಮ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಖಾಲಿಯಿದೆ. ಬೇಕಾದರೆ ಸೂರಪ್ಪ ಬಾಬುಗೆ ಕೊಡುತ್ತೇನೆ" ಎಂದು ಮತ್ತೆ ಸೂರಪ್ಪ ಬಾಬುರನ್ನು ಕೆರಳಿಸಿದ್ದಾರೆ.

ಒಂದು ಕಡೆ ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ನಡುವೆ ಸಂಧಾನ ಮಾಡಿಸುವ ಕೆಲಸ ನಡೆಯುತ್ತಿದೆ. ಇತ್ತ ಚಕ್ರವರ್ತಿ ಚಂದ್ರಚೂಡ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಕಿತ್ತಾಡಿಕೊಳ್ಳುತ್ತಿದ್ದಾರೆ. ಸುಖಾಂತ್ಯ ಮಾಡುವುದಕ್ಕೆ ರವಿಚಂದ್ರನ್, ರಾಕ್‌ಲೈನ್ ವೆಂಕಟೇಶ್, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್, ಉಮೇಶ್ ಬಣಕಾರ್ ಸೇರಿದಂತೆ ಹಲವರು ಸೇರಿಕೊಂಡು ಪ್ರಯತ್ನ ಪಡುತ್ತಿದ್ದಾರೆ. ಇತ್ತ ಇವರಿಬ್ಬರು ಕಿತ್ತಾಡಿಕೊಳ್ಳುತ್ತಿದ್ದಾರೆ.

Chakravarthy Chandrachuda said he will give security guard job for produce Surappa Babu

ಎಂಎನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್ ವಿರುದ್ಧ ಮಾತಾಡುತ್ತಿರುವಾಗ ಸೂರಪ್ಪ ಬಾಬು ಫಿಲ್ಮ್ ಚೇಂಬರ್‌ನಲ್ಲೇ ಇದ್ದರು ಎಂದು ಆರೋಪಿಸಿದ್ದರು. ಅಲ್ಲದೇ ಬಾಬು ಮಗಳ ವಿಚಾರವನ್ನು ಎಳೆದು ತಂದಿದ್ದರು. ಇದು ಸೂರಪ್ಪ ಬಾಬು ಅವರನ್ನು ಕೆರಳಿಸಿತ್ತು. ಹೀಗಾಗಿ ನಿನ್ನೆ (ಜುಲೈ 23) ಸೂರಪ್ಪ ಬಾಬು ಪತ್ರಿಕಾಗೋಷ್ಠಿ ಮಾಡಿ ಆಕ್ರೋಶ ಹೊರಹಾಕಿದ್ದರು.

ಅದಕ್ಕೆ ಟಕ್ಕರ್ ಕೊಡುವುದಕ್ಕೆ ಮತ್ತೆ ಚಂದ್ರಚೂಡ ಇಂದು (ಜುಲೈ 24) ಮಾಧ್ಯಮದ ಮುಂದೆ ಬಂದು ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಈ ವಿವಾದ ಬೆಳೆಯುತ್ತಲೇ ಇದೆ. ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ವಿವಾದಕ್ಕೆ ಸೂರಪ್ಪ ಬಾಬು ಎಂಟ್ರಿ ಆಗಿದ್ದು ಸಂಧಾನಕ್ಕೆ ಮತ್ತಷ್ಟು ಜಟಿಲವಾಗುವ ಸಾಧ್ಯತೆಯಿದೆ.

ಇದೇ ವೇಳೆ ಕಿಚ್ಚ ಸುದೀಪ್ ಅವರಿಗೆ ಸೂರಪ್ಪ ಬಾಬು ಆರು ಕೋಟಿ ರೂಪಾಯಿ ನೀಡುವುದು ಬಾಕಿಯಿದೆ. ಹೀಗಾಗಿ ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ. ಕಿಚ್ಚ ಸುದೀಪ್ ಅಭಿಮಾನಿಗಳು ಸುಮ್ಮನಿದ್ದರೂ, ಸುದೀಪ್ ಸುಮ್ಮನಿದ್ದರೂ ನಾನು ಸುಮ್ಮನಿರುವುದಿಲ್ಲ" ಎಂದು ಚಂದ್ರಚೂಡ ಹೇಳಿದ್ದಾರೆ.

More from Filmibeat

English summary
Chakravarthy Chandrachuda and Producer Surappa Babu talk fight
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X