"ಪಕ್ಕದಲ್ಲಿ ಕೂತು ಫ್ರೆಂಡ್ಸ್ ಅನ್ನೋದಲ್ಲ. ಶುಕ್ರವಾರ ಎಲ್ಲರೂ ದುಶ್ಮನ್‌ಗಳೇ" - ದರ್ಶನ್
ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ನೇರ ನುಡಿಗೆ ಹೆಸರು ವಾಸಿ. ತಮಗೆ ಅನಿಸಿದ್ದನ್ನು ನೇರಾ ನೇರ ಹೇಳಿಬಿಡುತ್ತಾರೆ. ಹೀಗೆ ಓಪನ್ ಆಗಿ ಮಾತಾಡಿ ಕೆಲವೊಮ್ಮೆ ದ್ವೇಷ ಕಟ್ಟಿಕೊಂಡಿದ್ದೂ ಇದೆ. ಹಾಗೆ ನಡೆದುಕೊಂಡಿದ್ದರಿಂದಲೇ ಸಂಕಷ್ಠದಿಂದ ಪಾರಾಗಿದ್ದೂ ಇದೆ. ಚಿತ್ರರಂಗದಲ್ಲಿ ದರ್ಶನ್ ಮಾತಾಡೋಕೆ ಅವರ ಆಪ್ತರೇ ಹೆದರುವುದು ಉಂಟು.
ಸ್ಯಾಂಡಲ್‌ವುಡ್‌ನಲ್ಲಿರೋ ತನ್ನ ಆತ್ಮೀಯರಿಗೆ ದರ್ಶನ್ ಬೆನ್ನುಲುಬಾಗಿ ನಿಂತಿರೋದು ಗೊತ್ತಿರೋ ವಿಷಯವೇ. ಅದರಲ್ಲೂ ಅಭಿಷೇಕ್ ಅಂಬರೀಶ್‌ರನ್ನು ತಮ್ಮ ಸ್ವಂತ ತಮ್ಮನಂತೆಯೇ ನೋಡಿಕೊಳ್ಳುತ್ತಿದ್ದಾರೆ. ಸದ್ಯ ಅಭಿ ನಟಿಸಿದ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾಗೆ ದರ್ಶನ್ ಫುಲ್ ಸಪೋರ್ಟ್ ಮಾಡುತ್ತಿದ್ದಾರೆ.

ಇನ್ನೇನು ಸಿನಿಮಾ ಬಿಡುಗಡೆ ಒಂದು ದಿನ ಇದೆ. ಈ ವೇಳೆ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಸಂದರ್ಶನ ಸದ್ದು ಮಾಡುತ್ತಿದೆ. ಇದರಲ್ಲಿ ಅಭಿಷೇಕ್‌ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಓಪನ್ ಆಗಿಯೇ ಒಂದು ಸಲಹೆ ಕೊಟ್ಟಿದ್ದಾರೆ. ಶುಕ್ರವಾರ ಬಂದ್ರೆ ಎಲ್ಲರೂ ದುಶ್ಮನ್‌ಗಳಂತೆ ನೋಡ್ಬೇಕು ಎಂದಿದ್ದಾರೆ. ಸಂದರ್ಶನದ ಈ ತುಣುಕು ವೈರಲ್ ಆಗುತ್ತಿದೆ.
ದರ್ಶನ್ 'ಬ್ಯಾಡ್ ಮ್ಯಾನರ್ಸ್' ಸಂದರ್ಶನ
ಸ್ಯಾಂಡಲ್‌ವುಡ್‌ನಲ್ಲಿ ತಮ್ಮನ್ನು ನಂಬಿ ಬಂದವರಿಗೆ ದರ್ಶನ್ ಸದಾ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆದ 'ಗರಡಿ' ಸಿನಿಮಾದಲ್ಲಿ ಯಶಸ್ ಸೂರ್ಯಗೆ ಫುಲ್ ಸಪೋರ್ಟ್ ಮಾಡಿದ್ದರು. ಈಗ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್'ಗೆ ದರ್ಶನ್ ಸಪೋರ್ಟ್ ಮಾಡುತ್ತಿದ್ದಾರೆ. ಹಾಗೇ ಚಿತ್ರರಂಗದಲ್ಲಿ ಹೇಗಿರಬೇಕು? ಹೇಗೆ ಕಾಂಪಿಟೇಷನ್ ಮಾಡಬೇಕು? ಅನ್ನೋದನ್ನು ಹೇಳಿಕೊಟ್ಟಿದ್ದಾರೆ. ಆ ಸಂದರ್ಶನದ ಝಲಕ್ ಇಲ್ಲಿದೆ.

"ಶುಕ್ರವಾರ ಎಲ್ಲರೂ ದುಶ್ಮನ್‌ಗಳೇ"
ಚಿತ್ರರಂಗ ಅಂದ್ಮೇಲೆ ಸ್ಪರ್ಧೆ ಇದ್ದೇ ಇರುತ್ತೆ. ಅದನ್ನು ಹೇಗೆ ಎದುರಿಸಬೇಕು ಅನ್ನೋದನ್ನು ತಮ್ಮ ಆತ್ಮೀಯರಿಗೆ ಹೇಳಿಕೊಟ್ಟಿದ್ದಾರೆ. "ನಾವು ಬಂದಾಗಲೂ ಒಂದು ಗೊಂದಲ ಇದ್ದೇ ಇತ್ತು. ಇದೊಂದು ಕಾಂಪಿಟೇಷನ್ ವರ್ಲ್ಡ್. ಯಾರೇ ಚೆನ್ನಾಗಿ ಮಾಡಿದರೂ, ನಾನು ಚೆನ್ನಾಗಿ ಮಾಡಬೇಕು ಅಂತ ಅನಿಸುತ್ತೆ. ನಾವು ಹಾಗೇನೆ ಬೆಳೆಯಬೇಕು. ಪಕ್ಕದಲ್ಲಿ ಕೂತು ಫ್ರೆಂಡ್ಸ್ ಅನ್ನೋದಲ್ಲ. ಶುಕ್ರವಾರ ಎಲ್ಲರೂ ದುಶ್ಮನ್‌ಗಳೇ.. ನಾನು ಎಲ್ಲರಿಗೂ ಆತರ ಹೇಳಿಕೊಡುತ್ತೇನೆ. ಶುಕ್ರವಾರ ದುಶ್ಮನ್‌ಗಳ ತರನೇ ನೋಡಿ. ಶನಿವಾರ ಫ್ರೆಂಡ್ಸ್ ಆಗಿರಿ. ಶುಕ್ರವಾರ ನೀನಾ ನಾನಾ ಅಂತ ಬರಲೇಬೇಕು." ಎಂದು ದರ್ಶನ್ ಹೇಳಿದ್ದಾರೆ.
ದರ್ಶನ್‌ಗೆ ಅಭಿ ಕೊಟ್ಟ ಸಲಹೆ ಏನು?
"ಅವರ ಕಾರಲ್ಲಿ ಹೋಗುವಾಗ ಅವರು ಮುಂದಿನ ಸೀಟ್‌ನಲ್ಲಿ ಕೂತಿದ್ದರು. ನಾನು ಹಿಂದಿನ ಸೀಟ್‌ನಲ್ಲಿ ಕೂತಿದ್ದೆ. ಆಗ ಒಂದು ಮಾತು ಹೇಳಿದ್ರು. ನೋಡಪ್ಪ ನೀನು ಒಬ್ಬ ಸ್ಟಾರ್ ಮಗ. ಈತರ ಒಂದು ಜವಾಬ್ದಾರಿ ಇರುತ್ತೆ. ಆ ಟೈಮ್‌ನಲ್ಲಿ ನನಗೆ ಅರ್ಥ ಆಗಿರಲಿಲ್ಲ. ಈಗ ಯೋಚನೆ ಮಾಡಿದ್ರೆ, ಹೌದಲ್ವಾ ಅಂತ ಅನಿಸುತ್ತೆ. ಸ್ವಲ್ಪ ಬೇಗನೇ ಅರ್ಥ ಮಾಡಿಕೊಂಡಿದ್ದೇನೆ ಅಂತ ಅನಿಸುತ್ತೆ." ಎಂದು ದರ್ಶನ್ ಕೊಟ್ಟ ಸಲಹೆಯನ್ನು ಅಭಿ ಹಂಚಿಕೊಂಡಿದ್ದಾರೆ.
'ವಿನೀಶ್, ಅಭಿನಾ ಬೇರೆ ಮಾಡಿ ನೋಡಲ್ಲ"
"ವಿನೀಶ್‌ನ ಅಭಿನಾ ನಾನು ಬೇರೆ ಮಾಡಿ ನೋಡೋದೇ ಇಲ್ಲ. ಅಭಿಗೆ ಅಪ್ಪ ಸ್ಟಾರ್.. ಅದಾ.. ಇದಾ.. ಅವನಿಗೆ ಸಂಬಂಧನೇ ಇಲ್ಲ. ನನಗೆ ಅವರು ಅಪ್ಪ ಅಷ್ಟೇ.. ವಿನೀಶ್‌ದೂ ಕೆಲವು ಮಾತುಗಳನ್ನು ಕೇಳ್ತಿನಲ್ಲ. ಏ.. ನಾನು ಬರೋಕೆ ಆಗಲ್ಲ ಅಂತೀನಿ.. ಯಾಕೆ ಬರೋಕೆ ಆಗಲ್ಲ. ಅವರ ಅಪ್ಪ ಅಲ್ಲಿಗೆ ಹೋಗ್ತಿಲ್ವಾ? ಅಂತಾನೇ. ನೀನು ನನಗೆ ಅಪ್ಪ ತಾನೇ. ಅವರ ಅಪ್ಪ ಬರ್ತಾರೆ ಅಂದ್ಮೇಲೆ ನೀನು ಯಾಕೆ ಬರೋಕೆ ಆಗಲ್ಲ. ಅಂತಾನೆ. ಯಾಕೆ ಅನ್ನೋದು ಗೊತ್ತಿಲ್ಲ. ಅವನು ಆ ಸ್ಥಾನಕ್ಕೆ ಬಂದಾಗ ಗೊತ್ತಾಗುತ್ತೆ." ಎಂದು ದರ್ಶನ್ ಹೇಳಿದ್ದಾರೆ.


Click it and Unblock the Notifications











