ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದ ರಾಯಭಾರಿ
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಪ್ರಾಣಿ-ಪಕ್ಷಿಗಳ ಮೇಲೆ ಇರುವ ಪ್ರೀತಿ ಏನು ಅನ್ನುವುದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರ್ಕಾರ ದರ್ಶನ್‌ಗೆ ಹೊಸ ಜವಾಬ್ದಾರಿಯನ್ನು ನೀಡಿದೆ. ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದ ರಾಯಭಾರಿಯಾಗಿ ದರ್ಶನ್‌ರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ನಿನ್ನೆ (ಫೆ.16) ದರ್ಶನ್ ಹುಟ್ಟುಹಬ್ಬದ ದಿನದಂದೇ ಮೃಗಾಲಯದ ಪ್ರಾಧಿಕಾರ ಅಧಿಕೃತವಾಗಿ ದರ್ಶನ್ ರಾಯಭಾರಿ ಎಂದು ಘೋಷಿಸಿದೆ.
ಮೃಗಾಲಗಳಿಗೆ ದರ್ಶನ್ ಮಾಡಿದ ಸಹಾಯ, ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಂಡ ಹಿನ್ನೆಲೆಯನ್ನುಗಮನಿಸುತ್ತಲೇ ಇದೆ. ಹೀಗಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರವು ತನ್ನ 149ನೇ ಆಡಳಿತ ಮಂಡಳಿ ಸಭೆಯಲ್ಲಿ ದರ್ಶನ್‌ರನ್ನು ರಾಯಭಾರಿ ನೇಮಿಸುವ ತೀರ್ಮಾನ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಹುಟ್ಟುಹಬ್ಬದ ಅಂಗವಾಗಿ ಮೃಗಾಲಯ ಆಡಳಿತ ಮಂಡಳಿಯು ಶುಭಾಶಯ ತಿಳಿಸಿ, ಮೃಗಾಲಯದ ರಾಯಭಾರಿ ನೇಮಿಸಿ ಪ್ರಕಟಣೆ ಹೊರಡಿಸಿದೆ ಎಂದು ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ.
Recommended Video
ಮೃಗಾಲಯಗಳಿಗೆ ನೆರವಿನ ಹಸ್ತ ಚಾಚಿದ್ದ ದರ್ಶನ್
ದರ್ಶನ್ ಮೈಸೂರು ಸೇರಿದಂತೆ ರಾಜ್ಯದಲ್ಲಿರುವ ಹಲವು ಮೃಗಾಲಯಗಳ ನೆರವಿಗೆ ನಿಂತಿದ್ದರು. ಪ್ರಾಣಿ ಪಕ್ಷಿಗಳ ನೆರವಿಗಾಗಿ ದೇಣಿಗೆ ಸಂಗ್ರಹಿಸುವಲ್ಲಿ ನಟ ದರ್ಶನ್ ಪ್ರಾಧಿಕಾರಕ್ಕೆ ನೆರವಾಗಿದ್ದಲ್ಲದೆ, ಪ್ರಮುಖ ಪಾತ್ರವಹಿಸಿದ್ದರು. ಇವೆಲ್ಲನ್ನೂ ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ರಾಯಬಾರಿಯನ್ನಾಗಿ ಮಾಡುವ ನಿರ್ಧಾರಕ್ಕೆ ಬಂದಿದೆ. ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದು, ದರ್ಶನ್ ಅಭಿಮಾನಿಗಳಿಗೆ ಉಡುಗೊರೆ ಸಿಕ್ಕಂತಾಗಿದೆ.

ಕೊರೊನಾ ವೇಳೆ ದರ್ಶನ್ ಅಭಿಯಾನ
ಕೊರೊನಾ ವೇಳೆ ಮೃಗಾಲಯಗಳು ಬಂದ್ ಆಗಿದ್ದವು. ಈ ವೇಳೆ ಮೃಗಾಲಯದ ನಿರ್ವಹಣೆ ಪ್ರಾಧಿಕಾರ ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣ ಆಗಿತ್ತು. ಮೃಗಾಲಯ ಪ್ರಾಧಿಕಾರ ನಟ ದರ್ಶನ್ಬಳಿ ಮನವಿ ಮಾಡಿಕೊಂಡಿದ್ದರು.

ಪ್ರಾಧಿಕಾರದ ಮನವಿಯಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರಾಣಿಗಳನ್ನುದತ್ತು ಪಡೆಯುವಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ದರ್ಶನ್ ಕರೆ ನೀಡಿದ ಬಳಿಕ ಪ್ರಾಣಿ ಪ್ರಿಯರು ಹಾಗೂ ದರ್ಶನ್ ಅಭಿಮಾನಿಗಳು ತಮಗೆ ಇಷ್ಟವಾದ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳನ್ನುದತ್ತು ಪಡೆದಿದ್ದರು. ಹೀಗೆ ಕರೆ ನೀಡಿದ ಕೇವಲ 6 ದಿನಗಳಲ್ಲಿ ಮೃಗಾಲಯ ಪ್ರಾಧಿಕಾರಕ್ಕೆ ಬರೋಬ್ಬರಿ 1 ಕೋಟಿಗೂ ಅಧಿಕ ಹಣ ಹರಿದು ಬಂದಿತ್ತು.


Click it and Unblock the Notifications











