200 ಅಡಿ ಎತ್ತರದಲ್ಲಿ ದರ್ಶನ್ ಬರ್ತ್‌ಡೇ ಸೆಲೆಬ್ರೆಷನ್: 'ಅನ್‌ಪಡ್ ಗವಾರ್' ಎಂದಿದ್ದೇಕೆ?
ಫೆಬ್ರವರಿ 16ರಂದು ಚಾಲೆಂಜಿಂಗ್‌ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಫೆ.16ರ ಮಧ್ಯರಾತ್ರಿಯಿಂದ ಇಡೀ ದಿನ ಅಭಿಮಾನಿಗಳಿಗಾಗಿಯೇ ಮೀಸಲಿಟ್ಟಿದ್ದರು.
ಹಾಗಂತ ಒಂದೇ ದಿನಕ್ಕೆ ದರ್ಶನ್ ಬರ್ತ್‌ಡೇ ಸೆಲೆಬ್ರೆಷನ್ ಮುಗಿದಿಲ್ಲ. ಇಡೀ ವಾರ ಅದೇ ಸಂಭ್ರಮ ನಡೆಯುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಸೇರಿ ಆಚರಣೆ ಮಾಡಿದ್ದಾರೆ.
ಸುಮಾರು 200 ಅಡಿ ಎತ್ತರದಲ್ಲಿ ದರ್ಶನ್ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಇದೇ ವೇಳೆ ದರ್ಶನ್ ಆಡಿದ ಮಾತುಗಳು ಕೂಡ ವೈರಲ್ ಆಗುತ್ತಿವೆ. ಬರ್ತ್‌ಡೇ ಪಾರ್ಟಿಯಲ್ಲಿ ದರ್ಶನ್ ಏನಂದ್ರು? ಯಾರು ಯಾರ ಬಗ್ಗೆ ಮಾತಾಡಿದ್ರು ಅನ್ನೋ ಝಲಕ್ ಇಲ್ಲಿದೆ.

200 ಅಡಿ ಎತ್ತರದಲ್ಲಿ ಬರ್ತ್‌ಡೇ ಪಾರ್ಟಿ
ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಪ್ರತಿ ವರ್ಷ ಮನೆ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ದರ್ಶನ್ ಹುಟ್ಟುಹಬ್ಬವನ್ನು ಆಚರಣೆ ಮಾಡಿ ಸಂಭ್ರಮಿಸುತ್ತಾರೆ. ಇದರೊಂದಿಗೆ ದರ್ಶನ್ ಆತ್ಮೀಯರೆಲ್ಲ ಸೇರಿಕೊಂಡು ಬರ್ತ್‌ಡೇ ಪಾರ್ಟಿ ಮಾಡಿದ್ದಾರೆ. ಅದೂ 200 ಅಡಿ ಎತ್ತರದಲ್ಲಿ ದರ್ಶನ್ ಕರೆದುಕೊಂಡು ಬರ್ತ್‌ಡೇ ಸೆಲೆಬ್ರೆಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

'ಅನ್‌ಪಡ್ ಗವಾರ್' ಮೇಲೆ ಆಶೀರ್ವಾದವಿರಲಿ
ಬಿಗ್ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ದರ್ಶನ್ ಆ ಕಾರ್ಯಕ್ರಮಕ್ಕೆ ಕಾರಣವಾಗಿದ್ದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೆ ಅನ್‌ಪಡ್ ಗವಾರ್ ಚಿಕ್ಕ ಕಲಾವಿದನ ಮೇಲೆ ಆಶೀರ್ವಾದವಿರಲಿ ಎಂದು ಹೇಳಿದ್ದಾರೆ. "ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಇಲ್ಲಿಗೆ ಎಲ್ಲರೂ ಬಂದಿದ್ದಕ್ಕೆ. ನಿಮ್ಮ ಪ್ರೀತಿ, ನಿಮ್ಮ ಆಶೀರ್ವಾದ ಈ ಅನ್‌ಪಡ್ ಗವಾರ್ ಚಿಕ್ಕ ಕಲಾವಿದನ ಮೇಲೆ ಹೀಗೆ ಇರಲಿ. ನನ್ನ ಪ್ರೀತಿಯ ತಮ್ಮ ಪ್ರಜ್ವಲ್ ಆಗಲಿ, ಪ್ರಣಮ್‌ಗೆ ಆಗಲಿ ಧನ್ಯವಾದಗಳು" ಎಂದು ದರ್ಶನ್ ಹೇಳಿದ್ದಾರೆ.

ಸತೀಶ್ ರೆಡ್ಡಿಯಿಂದ ಕಾರ್ಯಕ್ರಮ ?
ದರ್ಶನ್ ಬರ್ತ್‌ಡೇ ಪಾರ್ಟಿಯನ್ನು ಸತೀಶ್ ರೆಡ್ಡಿ ಆಯೋಜಿಸಿದ್ದರು ಎನ್ನಲಾಗಿದೆ. ಇದೇ ವಿಡಿಯೋದಲ್ಲಿ ದರ್ಶನ್ ಕೂಡ ಈ ಕಾರ್ಯಕ್ರಮಕ್ಕೆ ಕಾರಣರಾದ ಸತೀಶ್ ರೆಡ್ಡಿಗೆ ಧನ್ಯವಾದ ಎಂದು ಹೇಳಿದ್ದಾರೆ. ಜೊತೆಗೆ ಜಮೀರ್, ಬಿ ಸಿ ಪಾಟೀಲ್ ಅವರನ್ನು ನೆನಪಿಸಿಕೊಂಡಿದ್ದಾರೆ. "ಜಮೀರ್ ಬಾಯ್ ಆಗಬಹುದು. ಹಾಗೇನೆ ನಮ್ಮ ಬಿಸಿ ಪಾಟೀಲ್ ಅವರಿಗೆ ಆಗಬಹುದು. ಪುಟ್ಟಣ್ಣ ಅವರಿಗೆ ಆಗಬಹುದು, ಇವತ್ತು ಇಷ್ಟೆಲ್ಲಾ ಕಾರ್ಯಕ್ರಮ ಮಾಡುವುದಕ್ಕೆ ಕಾರಣವಾದಂತಹ ಸತೀಶ್ ರೆಡ್ಡಿ ಅವರಿಗೆ ಆಗಬಹುದು, ಹಾಗೇನೆ ನಮ್ಮ ಸೀನಣ್ಣನಿಗೆ ವಿನಾಯಕ ಅವರಿಗೆ ಧನ್ಯವಾದಗಳು" ಎಂದು ದರ್ಶನ್ ಹೇಳಿದ್ದಾರೆ.

ಒಟಿಟಿಯಲ್ಲಿ 'ಕ್ರಾಂತಿ'
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಚಿತ್ರತಂಡ 'ಕ್ರಾಂತಿ' 109 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂದು ಅಧಿಕೃತವಾಗಿಯೇ ಹೇಳಿತಕೊಂಡಿತ್ತು. ಈಗ ಆ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಇದೇ ಫೆಬ್ರವರಿ 23ರಂದು 'ಕ್ರಾಂತಿ' ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.


Click it and Unblock the Notifications











