ದರ್ಶನ್ ಬರ್ತಡೇಗೆ ಶುಭಕೋರಿದ ಅಪ್ಪುಗೆ ಡಿಬಾಸ್ ಅಭಿಮಾನಿ ಹೀಗಾ ಬರೆಯೋದು?
Recommended Video
ನಾವು ನಟರು ನಮ್ಮ ನಡುವೆ ಯಾವುದೇ ಡಿಫರೆನ್ಸ್ ಇಲ್ಲ ಎಂದು ದರ್ಶನ್, ಶಿವಣ್ಣ, ಸುದೀಪ್, ಯಶ್, ಅಪ್ಪು ಆದಿಯಾಗಿ, ನಟರು ಎಷ್ಟೇ ಹೇಳಿಕೊಂಡು ಬಂದರೂ, ಅವರವರ ಅಭಿಮಾನಿಗಳು, ಹುಳಿಹಿಂಡುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.
ಈ ಹಿಂದೆ, ಅಣ್ಣಾವ್ರ ಪಾದದ ಧೂಳಿಗೂ ನಾನು ಸಮನಲ್ಲ ಎಂದು ದರ್ಶನ್ ಹೇಳಿದ್ದರೂ, ಎರಡು ಕುಟುಂಬಗಳ ನಡುವೆ ಹಗೆತನ ಇದೆಯೆಂದೇ, ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಕಿತ್ತಾಡಿಕೊಂಡು ಇರುತ್ತಾರೆ.
43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಮಧ್ಯರಾತ್ರಿಯಿಂದಲೇ, ಅವರ, ಬೆಂಗಳೂರಿನ ರಾಜರಾಜೇಶ್ವರಿ ಮನೆಯ ಮುಂದೆ ಅಭಿಮಾನಿಗಳು ಅವರಿಗೆ ವಿಷ್ ಮಾಡುತ್ತಿದ್ದಾರೆ.
ಇನ್ನು, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ದರ್ಶನ್ ಮತ್ತು ಇಂದು ಬಿಡುಗಡೆಯಾದ ಅವರ ಹೊಸಸಿನಿಮಾ ರಾಬರ್ಟ್ ಟೀಸರ್, ನ್ಯಾಷನಲ್ ಲೆವೆಲ್ ನಲ್ಲಿ ಟ್ರೆಂಡಿಂಗ್ ನಲ್ಲಿತ್ತು. ದರ್ಶನ್ ಬರ್ತಡೇಗೆ ಶುಭಕೋರಿದ ಪುನೀತ್ ರಾಜಕುಮಾರ್ ಗೆ, ಡಿಬಾಸ್ ಅಭಿಮಾನಿಯೊಬ್ಬ ನೀಡಿದ ಪ್ರತಿಕ್ರಿಯೆಗೆ ವ್ಯಾಪಕ ಟೀಕೆಗೊಳಗಾಗಿದೆ.

ಹ್ಯಾಪ್ಪಿ ಬರ್ತಡೇ ದರ್ಶನ್" ಎಂದು ಪುನೀತ್ ರಾಜಕುಮಾರ್ ಟ್ವೀಟ್
"ಹ್ಯಾಪ್ಪಿ ಬರ್ತಡೇ ದರ್ಶನ್" ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ, ಶಿವಣ್ಣ, ಪುನೀತ್ ರಾಜಕುಮಾರ್, ದರ್ಶನ್ ನಡುವಿನ ಸ್ನೇಹದ ಬಗ್ಗೆ ಟ್ವಿಟ್ಟರ್ ನಲ್ಲಿ ವಿಡಿಯೋಗಳು ಹರಿದಾಡಲಾರಂಭಿಸಿದ್ದವು.

ಡಿಬಾಸ್ ಕ್ರೇಜ್ ಕಾ ಬಾಪ್
ಪುನೀತ್ ಟ್ವೀಟ್ ಗೆ 'ಡಿಬಾಸ್ ಕ್ರೇಜ್ ಕಾ ಬಾಪ್' ಎನ್ನುವ ಟ್ವಿಟ್ಟರ್ ಅಕೌಂಟ್ ನಿಂದ, "ಥ್ಯಾಂಕ್ಸ್ ಸರ್, ನಮ್ಮ ಡಿಬಾಸ್ ಅಷ್ಟು ರೇಂಜ್ ಗೆ ನೀವು ಬೆಳಿಯಬೇಕು" ಎನ್ನುವ ಪ್ರತಿಕ್ರಿಯೆಯನ್ನು ಒಬ್ಬ ಅಭಿಮಾನಿ ನೀಡಿದ್ದಾನೆ. ಇದು ಅಪ್ಪು ಅಭಿಮಾನಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಓ ಭ್ರಮೆ. ಮೊದಲು ನಿಮ್ಮ ಬಾಸ್ ಅಪ್ಪು ರೇಂಜ್ ಗೆ ಬೆಳೆಯಲಿ
"ಓ ಭ್ರಮೆ. ಮೊದಲು ನಿಮ್ಮ ಬಾಸ್ ಅಪ್ಪು ರೇಂಜ್ ಗೆ ಬೆಳೆಯಲಿ". "ಮೊದಲು ಈ ಟ್ವೀಟ್ ಅನ್ನು ಡಿಲೀಟ್ ಮಾಡು, ಅಪ್ಪು ಮತ್ತು ದರ್ಶನ್ ನಡುವೆ ತಂದಿಡುವ ಕೆಲಸವನ್ನು ಮಾಡಬೇಡ". "ಅಪ್ಪು ಲೆವೆಲ್ ಬಗ್ಗೆ ನೀವು ಹೇಳಬೇಡ. ಅಪ್ಪು, ಎಂಬತ್ತು ಕೋಟಿ ಮಾಡಿದವರು" ಈ ರೀತಿಯ ರಿಪ್ಲೈಗಳು ಬಂದಿವೆ.

ಎಂಟನೇ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದವರು ಪುನೀತ್
"ಲೋ ತಮ್ಮ, ಮೊದಲು ನೀನು ಬೆಳೆ, ಆಮೇಲೆ ನಿನ್ನ ಬಾಸ್ ಅನ್ನು ಬೆಳೆಸು. ಅಪ್ಪು ಬಾಸ್ ಅಥವಾ ಅವರ ಅಭಿಮಾನಿಗಳ ತಂಟೆಗೆ ಬರಬೇಡ. ಎಂಟನೇ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದವರು ಪುನೀತ್. ನಮ್ ಪವರ್ ಸ್ಟಾರ್ ಏನು ಅಂತ ಇಡೀ ಸೌತ್ ಇಂಡಿಯಾಕ್ಕೆ ಗೊತ್ತು" ಈ ರೀತಿಯ ಮತ್ತು ಇದಕ್ಕಿಂತಲೂ ಖಾರವಾದ ಪ್ರತಿಕ್ರಿಯೆಗಳು ಬಂದಿವೆ.


Click it and Unblock the Notifications











