ದರ್ಶನ್ ಅಭಿನಯದ ಬಹು ನಿರೀಕ್ಷಿತ ಬೃಂದಾವನ ಇಂದು ತೆರೆಗೆ
ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅಭಿನಯದ 'ಬೃಂದಾವನ' ಚಿತ್ರ ಇಂದು ಕನ್ನಡ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ರಾಜ್ಯಾದ್ಯಂತ ಸುಮಾರು 197 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಬೆಂಗಳೂರು ನಗರದ 45 ಥಿಯೇಟರುಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಮೈನ್ ಥಿಯೇಟರ್ ನರ್ತಕಿಯಲ್ಲಿ ಬುಧವಾರವೇ ಮೊದಲ ಎರಡು ಪ್ರದರ್ಶನದ ಟಿಕೆಟುಗಳು ಹಾಟ್ ಕೇಕ್ ನಂತೆ ಮಾರಾಟವಾಗಿದೆ.
ತೆಲುಗಿನ ಯಶಸ್ವಿ ಬೃಂದಾವನಂ ಚಿತ್ರದ ರಿಮೇಕಾಗಿರುವ ಈ ಚಿತ್ರವನ್ನು ಕೆ ಮಾದೇಶ ನಿರ್ದೇಶಿಸುತ್ತಿದ್ದಾರೆ. ತೆಲುಗು ಚಿತ್ರದ ರಿಮೇಕಾದರೂ ಕನ್ನಡ ನೆಟಿವಿಟಿಗೆ ತಕ್ಕಂತೆ ಚಿತ್ರ ನಿರ್ಮಿಸಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಶ್ರೀ ಸೀತಾ ಭೈರವೇಶ್ವರ ಪ್ರೊಡಕ್ಷನ್ ಬ್ಯಾನರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ನಿರ್ಮಾಪಕರು ಸುರೇಶ್ ಗೌಡ ಪಿ ಎಸ್ ಶ್ರೀನಿವಾಸ ಮೂರ್ತಿ. ಚಿತ್ರದ ಬಗ್ಗೆ ಪ್ರೇಕ್ಷಕರ ರಿಯಾಕ್ಷನ್ ಮತ್ತು ಚಿತ್ರದ ವಿಮರ್ಶೆ ನಿರೀಕ್ಷಿಸಿ..
ಚಿತ್ರದ ಬಗ್ಗೆ ಒಂದಿಷ್ಟು ಸ್ಲೈಡಿನಲ್ಲಿ..

ದರ್ಶನ್
ಸಾರಥಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಬುಲ್ ಬುಲ್ ಚಿತ್ರಗಳು ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರಿದ ಚಿತ್ರಗಳು. ತೆಲುಗು ಚಿತ್ರದ ರಿಮೇಕಾಗಿರುವುದರಿಂದ ಸಾಹಸ ಸನ್ನಿವೇಶಗಳು ಬೃಂದಾವನ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ ಎನ್ನಲಾಗುತ್ತಿದೆ.

ಚಿತ್ರದ ತಾರಾಗಣ
ಚಿತ್ರದಲ್ಲಿ ಒಟ್ಟು ಇಬ್ಬರು ನಾಯಕಿಯರು. ಕಾರ್ತಿಕಾ ನಾಗರಾಜ್ ಮತ್ತು ಮಿಲನ ನಾಗರಾಜ್. ಕಾರ್ತಿಕಾ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ದಿಗೆ ಪ್ರವೇಶಿಸುತ್ತಿದ್ದಾರೆ. ಉಳಿದ ತಾರಾಗಣದಲ್ಲಿ ಸಾಯಿಕುಮಾರ್, ಜೈಜಗದೀಶ್, ನಿರೋಶ, ಶರತ್ ಬಾಬು, ಸಾಧು ಕೋಕಿಲಾ, ಮೋಹನ್ ಜುನೇಜಾ, ದೊಡ್ಡಣ್ಣ, ಕಿಲ್ಲರ್ ವೆಂಕಟೇಶ್, ಶೋಭಾ, ಸಂಪತ್, ಅಜಯ್ (ಹೈದರಾಬಾದ್), ಪ್ರಕಾಶ್ ಹೆಗ್ಗೋಡು, ಕುರಿ ಪ್ರತಾಪ, ವೀಣಾ ಸುಂದರ್, ಕಿಲ್ಲರ್ ವೆಂಕಟೇಶ್ ಮುಂತಾದವರಿದ್ದಾರೆ.

ತಂತ್ರಜ್ಞರು
ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ, ಹರಿಕೃಷ್ಣ ಸಂಗೀತ, ಕವಿರಾಜ್, ನಾಗೇಂದ್ರ ಪ್ರಸಾದ್ ಸಾಹಿತ್ಯ, ರಮೇಶ್ ಬಾಬು ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪಳನಿರಾಜ್ ಸಾಹಸ, ಗಣೇಶ್ (ಹೈದರಾಬಾದ್) ನೃತ್ಯ, ಲಿಂಗರಾಜು ನಿರ್ದೇಶನ ಸಹಕಾರ, ಸುಂದರರಾಜ್ ನಿರ್ಮಾಣ ಮೇಲ್ವಿಚಾರಣೆ, ಗಗನ್‍ಮೂರ್ತಿ ನಿರ್ಮಾಣ ನಿರ್ವಹಣೆಯಿದ್ದು,

ಸಾಹಸ ಸನ್ನಿವೇಶಗಳು
ಚಿತ್ರದಲ್ಲಿ ಅಜಯ್ ಪಾತ್ರದಲ್ಲಿ ದರ್ಶನ್ ಕಾಣಿಸಿ ಕೊಂಡಿದ್ದಾರೆ. ವಿಭಿನ್ನ ಗೆಟ್ ಅಪ್ ನಲ್ಲಿ ಕಾಣಿಸಿ ಕೊಂಡಿರುವ ದರ್ಶನ್ ಚಿತ್ರದ ಮೇಲೆ ಭಾರೀ ಭರವಸೆ ಇಟ್ಟು ಕೊಂಡಿದ್ದಾರೆ. "ನನ್ನ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ನಲ್ಲಿ ಆಕ್ಷನ್ ಸನ್ನಿವೇಶ ಮಾಡಿದ್ದೇನೆ. ಅದೊಂದು ಮರೆಯಲಾಗದ ಅನುಭವ" ಎಂದು ದರ್ಶನ್ ಹೇಳಿಕೊಂಡಿದ್ದಾರೆ.

ಸೆನ್ಸಾರ್ ಬೋರ್ಡ್
'ಬೃಂದಾವನ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ತೆಲುಗಿನಲ್ಲಿ ಭರ್ಜರಿ ಯಶಸ್ಸು ಪಡೆದ ಈ ಚಿತ್ರದಲ್ಲಿ ಜೂ.ಎನ್ಟಿಆರ್ ನಾಯಕರಾಗಿದ್ದರು. ಆ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸೆನ್ಸಾರ್ ಮಂಡಳಿ ನೀಡಿತ್ತು.


Click it and Unblock the Notifications











