Devil Trailer: "ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ.. ನಾನು ಬರ್ತಿದೀನಿ ಚಿನ್ನ"; ಟ್ರೈಲರ್‌ನಲ್ಲೂ ಟಾಂಗ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಬಿಡುಗಡೆಗೆ ಇನ್ನೇನು ಒಂದು ವಾರ ಉಳಿದಿದೆಯಷ್ಟೇ. ದರ್ಶನ್ ಜೈಲಿನಲ್ಲಿ ಇದ್ದರೂ ಸಿನಿಮಾ ಕ್ರೇಜ್‌ಗೇನೂ ಕಮ್ಮಿಯಿಲ್ಲ. ಇಷ್ಟು ದಿನ ಹಾಡುಗಳು ಸದ್ದು ಮಾಡಿದ್ದವು. ಈಗ ಟ್ರೈಲರ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುವುದಕ್ಕೆ ಶುರು ಮಾಡಿದೆ. ಹೌದು 'ಡೆವಿಲ್' ಟ್ರೈಲರ್ ಟ್ರೆರರ್ ಆಗಿದೆ. ಮಾಸ್ ಇಷ್ಟ ಪಡೋರಿಗೆ ಮಾಸ್.. ಕ್ಲಾಸ್ ಇಷ್ಟ ಪಡೋರಿಗೆ ಕ್ಲಾಸ್. ಎರಡೂ ಎಲಿಮೆಂಟ್‌ಗಳು ಕೂಡ ಇಲ್ಲಿವೆ.
ಮಿಲನ ಪ್ರಕಾಶ್ (ಪ್ರಕಾಶ್ ವೀರ್) ಬಹಳ ದಿನಗಳ ಬಳಿಕ ನಿರ್ದೇಶನ ಮಾಡುತ್ತಿದ್ದು, ಅವರ ಅಭಿಮಾನಿಗಳು ಟ್ರೈಲರ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಕೊನೆಗೂ ಅವರ ಕಾಯುವಿಕೆಗೆ ತೆರೆಬಿದ್ದಂತೆ ಆಗಿದೆ. ಈ ಟ್ರೈಲರ್‌ನಲ್ಲಿ ದರ್ಶನ್ ಹಾಗೂ ರಚನಾ ರೈ ಜೊತೆ ಬೇರೆ ಯಾವೆಲ್ಲ ಪಾತ್ರಗಳು ಇವೆ ಅನ್ನೋದು ರಿವೀಲ್ ಆಗಿದೆ. ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ವಿನಯ್ ಗೌಡ, ಚಂದು, ಗಿಲ್ಲಿ ನಟ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಇದೆ.

'ಡೆವಿಲ್' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಮುಗಿಬಿದ್ದು ನೋಡಿದ್ದಾರೆ. ಹೀಗಾಗಿ ಟ್ರೈಲರ್ ಬಿಡುಗಡೆಯಾದ ಮೂರು-ನಾಲ್ಕು ಗಂಟೆಗಳಲ್ಲಿ ಒಂದು ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ನೆಟ್ಟಿಗರು ಟ್ರೈಲರ್ ಮೆಚ್ಚಿ ಡಿಸೈನ್ ಡಿಸೈನ್ ಆಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಎಲ್ಲೋದ್ರು ಬರ್ತೀರಲ್ಲೂ ಅನ್ನೋ ಡೈಲಾಗ್ ಸೂಪರ್, ಉರ್ಕೋಳೋರಿಗೆ ಗೂಟ" ಅಂತ ಕಿಡಿಕಾರುತ್ತಾ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹಾಗಿದ್ದರೆ, ಯೂಟ್ಯೂಬ್ ಹಾಗೂ ಎಕ್ಸ್ (ಟ್ವಿಟರ್)ನಲ್ಲಿ ಸಿನಿಮಾದ ಟ್ರೈಲರ್‌ಗೆ ರೆಸ್ಪಾನ್ಸ್ ಹೇಗಿದೆ ತಿಳಿಯುವುದಕ್ಕೆ ಮುಂದೆ ಓದಿ.
ಟ್ರೈಲರ್‌ಗೆ ರೆಸ್ಪಾನ್ಸ್ ಹೇಗಿದೆ?
'ಡೆವಿಲ್' ಸಿನಿಮಾ ಟ್ರೈಲರ್ ನೋಡಿ ಯೂಟ್ಯೂಬ್‌ನಲ್ಲಿ ಬಂದ ಕಮೆಂಟ್‌ಗಳು ಹೀಗಿವೆ. "ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯೋದಿಲ್ಲ Is Personal ಜೈ ಬಾಸ್", "ಕತ್ತಲೆ ಕೋಣೆಯಲ್ಲಿ ನಿನ್ ಇದ್ದರೆ ಏನಂತೆ ದೊರೆ, ನಿನ್ನ ಸಿನಿಮಾ ಬಿಡುಗಡೆಯಾದ ಚಿತ್ರಮಂದಿರ ಎಲ್ಲಾ ತುಂಬುತ್ತೆ", "ದರ್ಶನ್ ಸರ್, ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಅನುಗ್ರಹ, ನಿಮ್ಮ ಮೇಲೆ ಇರಲೆಂದು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸುತ್ತೇನೆ", "ಲುಕ್‌ನಲ್ಲಿದ್ರೆ ಹೀರೋನೇ.. But ಕಿಕ್‌ನಲ್ಲಿದ್ದರೆ full on Terror", "ಆಕ್ಟಿಂಗ್ ಅಂತ ಬಂದ್ರೆ ನಿಂಗೆ ನೀನೇ ಸಾಟಿ ಬಾ ಗುರು", "ಹೆಟರ್ಸ್‌ಗೆ ಗ್ರಹಣ ಹಿಡಿಯೋ ಸಮಯ ಬಂತು" "ಕರಾವಳಿ ಸೈಡ್ ಉತ್ತರಕರ್ನಾಟಕ ಸೈಡ್ ಎಲ್ಲಾ ಸೈಡ್ ನಿಮ್ದೇ ಹವಾ ಬಾಸ್.. ಕರ್ನಾಟಕದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟನಿಗೆ ನಾನು ನಂಬಿರುವ ದೇವ್ರು ಕರುಣಿಸಿ ಮತ್ತೆ ನಿಮ್ಮ ಕ್ರೇಜ್ ಜಗಮಗಿಸಲಿ" ಹೀಗೆಲ್ಲ ಕಮೆಂಟ್‌ಗಳನ್ನು ಹಾಕಿದ್ದಾರೆ.
ಡೆವಿಲ್- ಮೆಂಟಲ್ ಮಾಸ್
"ಡೆವಿಲ್ ಟ್ರೈಲರ್ ಮೆಂಟಲ್, ಮಾಸ್, ನಾಶ ಮಾಡುತ್ತಿದೆ. ಡಿ ಬಾಸ್ ವಾಯ್ಸ್‌ನಲ್ಲಿ ಡೆಪ್ತ್ ಕಾಣಿಸುತ್ತಿದೆ. ಟ್ರೈಲರ್ ಉದ್ದಕ್ಕೂ ಡಿ ಬಾಸ್ ವಾಯ್ಸ್‌ನಲ್ಲಿ ಡೆಪ್ತ್ ಕಾಣಿಸುತ್ತಿದೆ. ಕಾಟೇರದಲ್ಲಿ ಅವರ ಡೈಲಾಗ್ ಡಿಲೇವರಿಯಲ್ಲಿ ಈ ಡೆಪ್ತ್‌ನ ಗ್ಲಿಂಪ್ಸ್ ನೋಡಿದ್ವಿ ಅಷ್ಟೇ. ನಿಜವಾದ ಸಿನಿಮಾ ಇಲ್ಲಿದೆ." ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ನಿಮ್ಮ ಕಿವಿಯನ್ನು ಸರಿಯಾಗಿಟ್ಟುಕೊಳ್ಳಿ
" ನಿಮ್ಮ ಕಿವಿಯನ್ನು ಸರಿಯಾಗಿ ಇಟ್ಟುಕೊಳ್ಳಿ. ಯಾಕಂದ್ರೆ ಥಿಯೇಟರ್‌ನಲ್ಲಿ ಈ ಸೀನ್ ಬರುವಾಗ ಸಿಕ್ಕಾಪಟ್ಟೆ ಮಾಸ್ ಆಗಿರುತ್ತೆ. ಡೆವಿಲ್ ಟ್ರೈಲರ್ ಅದ್ಬುತವಾಗಿದೆ" ಎಂದು ಪಕ್ಕಾ ದರ್ಶನ್ ಅಭಿಮಾನಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
'ಡೆವಿಲ್'ನಲ್ಲಿ ಗಿಲ್ಲಿ
" ಡೆವಿಲ್ ಟ್ರೈಲರ್‌ನಲ್ಲಿ ನಮ್ಮ ಗಿಲ್ಲಿ ಇದ್ದಾರೆ. ಡೆವಿಲ್ ಸಿನಿಮಾ ಪ್ರಮುಖವಾದ ಪಾತ್ರವನ್ನು ನಿಭಾಯಿಸಿದ್ದಾರೆ" ಎಂದು ಗಿಲ್ಲಿ ಸೀನ್‌ಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ. ಬಿಗ್ ಬಾಸ್‌ಗೆ ಹೋದ್ಮೇಲೆ ಗಿಲ್ಲಿಗೆ ಕ್ರೇಜಿ ಫ್ಯಾನ್ಸ್ ಹುಟ್ಕೊಂಡಿದ್ದಾರೆ. ಹೀಗಾಗಿ ಗಿಲ್ಲಿ ಸೀನ್‌ಗಳನ್ನು ಕಟ್ ಮಾಡಿ ಟ್ವೀಟ್ ಮಾಡುತ್ತಿದ್ದಾರೆ.
ಮಾರ್ಟಿನ್ 2.0.. AI ವಾಯ್ಸ್
ಇದರೊಂದಿಗೆ ಕೆಲವರು ನೆಗೆಟಿವ್ ಕಮೆಂಟ್‌ಗಳನ್ನೂ ಮಾಡಿದ್ದಾರೆ. ಅದರಲ್ಲೂ ಒಬ್ಬರಂತೂ ಇದು 'ಮಾರ್ಟಿನ್ 2.ಒ' ಎಂದು ಹೇಳಿದ್ದಾರೆ."ಮಾರ್ಟಿನ್ 2.0.. ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಕ್ಯಾರೆಕ್ಟರ್ ಕಾಪಿ ಮಾಡಿಬಿಟ್ರು ಗುರು. AI ವಾಯ್ಸ್ ಬಳಸಿದ್ದಾರೆ ಗುರು." ಹೀಗೆ ಕಮೆಂಟ್ ಮಾಡಿದ್ದಾರೆ.
ಫ್ರೇಮ್ ಟು ಫ್ರೇಮ್ ಅದ್ಭುತ
"ಡೆವಿಲ್ ಟ್ರೈಲರ್‌ನ ಫ್ರೇಮ್ ಟು ಫ್ರೇಮ್ ಅದ್ಭುತ. ಬಾಸ್ ಲುಕ್ಕೇ ಕಿಚ್ಚು. ಡಿ ಬಾಸ್‌ಗೆ ಡಿ ಬಾಸೇ ಸಾಟಿ. ಎಂತಹ ಅದ್ಭುತ ಟ್ರೈಲರ್. ಸೂರ್ಯಂಗೇ ತುಂಬ ಹೊತ್ತು ಗ್ರಹಣ ಹಿಡಿಯಲ್ಲ.. 11-12-25 ಬರ್ತಿದ್ದೀನಿ ಚಿನ್ನ. " ದರ್ಶನ್ ಡೈಲಾಗ್ ಹಾಕಿ ಕಮೆಂಟ್ ಮಾಡಿದ್ದಾರೆ.


Click it and Unblock the Notifications











