Exclusive: 'ಗರಡಿ'ಯಲ್ಲಿ ಒಂದೆರಡು ನಿಮಿಷ ಬಂದು ಹೋಗೋ ಅತಿಥಿಯಲ್ಲ ದರ್ಶನ್.. ಇಲ್ಲಿದೆ ಫುಲ್ ಡಿಟೈಲ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ಕಾದು ಕೂತಿದ್ದಾರೆ. 'ಕ್ರಾಂತಿ' ಬಳಿಕ ಎಲ್ಲರ ಕಣ್ಣು ದರ್ಶನ್ ನಟನೆಯ 'ಕಾಟೇರ' ಸಿನಿಮಾದ ಮೇಲಿದೆ. ಆದರೆ, ಅದಕ್ಕಿಂತ ಮುನ್ನ ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ರಿಲೀಸ್ ಆಗುತ್ತೆ ಅನ್ನೋ ಮಾತಿದೆ.

'ಗರಡಿ' ಸಿನಿಮಾದಲ್ಲಿ ದರ್ಶನ್ ನಟಿಸುತ್ತಿರೋದು ಹೊಸ ವಿಷಯವೇನಲ್ಲ. ಇದೂವರೆಗೂ ದರ್ಶನ್ ಅತಿಥಿ ಪಾತ್ರದಲ್ಲಿಯೇ ಕಾಣಿಸಿಕೊಳ್ತಿದ್ದಾರೆ ಅಂತಲೇ ಸುದ್ದಿಯಾಗಿತ್ತು. ಆದ್ರೀಗ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದಿದೆ.

Challenging Star Darshan is doing an important role in Yogaraj Bhat Kannada Movie Garadi

ಯಶಸ್ ಸೂರ್ಯ ನಟಿಸುತ್ತಿರುವ ಈ ಸಿನಿಮಾದಲ್ಲಿ ದರ್ಶನ್ ಕೇವಲ ಅತಿಥಿಯಾಗಿ ಬಂದು ಹೋಗೋದಿಲ್ಲ. ಒಂದೆರಡು ನಿಮಿಷದಲ್ಲಿ ಬಂದು ಹೋಗುವ ಪಾತ್ರ ಅಲ್ಲವೇ ಅಲ್ಲ ಅಂತಿದೆ ಸ್ಯಾಂಡಲ್‌ವುಡ್. ಹಾಗಿದ್ದರೆ, 'ಗರಡಿ' ಸಿನಿಮಾದಲ್ಲಿ ದರ್ಶನ್ ಎಷ್ಟು ನಿಮಿಷ ಇರುತ್ತಾರೆ? ಸಿನಿಮಾದಲ್ಲಿ ದರ್ಶನ್ ಪಾತ್ರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಗರಡಿ' ಶೂಟಿಂಗ್ ಫಿನಿಶ್

ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ 'ಗರಡಿ' ಬಗ್ಗೆ ಸ್ಯಾಂಡಲ್‌ವುಡ್‌ನ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು. ಬಿ ಸಿ ಪಾಟೀಲ್ 'ಗರಡಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸುಮಾರು 70 ದಿನಗಳ ಕಾಲ ಸಿನಿಮಾ ಶೂಟಿಂಗ್ ಮಾಡಿದೆ. ಕೆಲವು ತಿಂಗಳ ಹಿಂದಷ್ಟೇ ಈ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. 'ಗರಡಿ' ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರಕ್ಕಿಂತಲೂ ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

'ಗರಡಿ'ಯಲ್ಲಿ ಎಷ್ಟೊತ್ತು ಇರ್ತಾರೆ ದರ್ಶನ್?

ಇಲ್ಲಿವರೆಗೂ ದರ್ಶನ್ 'ಗರಡಿ' ಸಿನಿಮಾದಲ್ಲಿ ಅತಿಥಿ ಅಂತಲೇ ಸುದ್ದಿ ಹಬ್ಬಿತ್ತು. ಆದ್ರೀಗ ದರ್ಶನ್ 'ಗರಡಿ' ಸಿನಿಮಾದಲ್ಲಿ ಹಿಂದೆ ಬಂದು ಹಂಗೆ ಹೋಗೋದಿಲ್ಲ. ತೆರೆಮೇಲೆ ಸುಮಾರು 13ಕ್ಕೂ ಹೆಚ್ಚು ನಿಮಿಷ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಬಲ್ಲ ಮೂಲಗಳು ಫಿಲ್ಮಿ ಬೀಟ್‌ಗೆ ತಿಳಿಸಿವೆ. ಈ ಸಿನಿಮಾದಲ್ಲಿ ದರ್ಶನ್ ಪ್ರಮುಖ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಎದುರಾಗುತ್ತಾರೆ. 'ಗರಡಿ' ಸಿನಿಮಾದಲ್ಲಿ ದರ್ಶನ್ ಕೂಡ ಕುಸ್ತಿಪಟು ಆಗಿಯೇ ಕಾಣಿಸಿಕೊಳ್ಳಲಿದ್ದಾರೆ. ಯಶಸ್ ಸೂರ್ಯ ಅಣ್ಣನಾಗಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಾರೆ ಅನ್ನೋದು ಸುದ್ದಿ

Challenging Star Darshan is doing an important role in Yogaraj Bhat Kannada Movie Garadi

'ಕಾಟೇರ'ಗಿಂತ ಮುನ್ನವೇ ರಿಲೀಸ್

ದರ್ಶನ್ ಎರಡು ಸಿನಿಮಾಗಳು ಈ ವರ್ಷ ರಿಲೀಸ್ ಆಗಲಿದೆ ಅಂತ ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಒಂದು 'ಕಾಟೇರ', ಇನ್ನೊಂದು 'ಗರಡಿ'. ಈ ಎರಡೂ ಸಿನಿಮಾಗಳಲ್ಲಿ ಮೊದಲ 'ಗರಡಿ' ರಿಲೀಸ್ ಆಗುತ್ತೆ ಅನ್ನೋ ಸುದ್ದಿಯಿದೆ. ಇದೇ ನವೆಂಬರ್ ತಿಂಗಳಲ್ಲಿ 'ಗರಡಿ' ಸಿನಿಮಾವನ್ನು ರಿಲೀಸ್ ಮಾಡಲು ಬಿಸಿ ಪಾಟೇಲ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನವೆಂಬರ್‌ನಲ್ಲಿ 'ಗರಡಿ' ಮನೆಯಲ್ಲಿ ಕುಸ್ತಿ ಭರ್ಜರಿಯಾಗಿರುತ್ತೆ.

ಯಶಸ್, ಬಿ ಸಿ ಪಾಟೇಲ್‌ಗಾಗಿ ಸಿನಿಮಾ

ದರ್ಶನ್ ಆತ್ಮೀಯರ ಗುಂಪಿನಲ್ಲಿ ಗುರುತಿಸಿಕೊಂಡಿರೋ ಯಶಸ್ ಸೂರ್ಯ ಬಹಳ ದಿನಗಳ ಬಳಿಕ ಹೀರೊ ಆಗಿ ನಟಿಸುತ್ತಿದ್ದಾರೆ. ಹೀಗಾಗಿ ಸೆಕೆಂಡ್ ಇನ್ನಿಂಗ್ ಶುರು ಮಾಡುತ್ತಿರುವ ಯಶಸ್ ಸೂರ್ಯಗೆ ದರ್ಶನ್ ಸಾಥ್ ಕೊಟ್ಟಿದ್ದಾರೆ. ಒಂದ್ಕಡೆ ಯಶಸ್ ಹಾಗೂ ಬಿ ಸಿ ಪಾಟೀಲ್ ಇಬ್ಬರೂ ದರ್ಶನ್‌ಗೆ ಆತ್ಮೀಯರೇ. ಹೀಗಾಗಿ 'ಗರಡಿ'ಯಲ್ಲಿ ದರ್ಶನ್ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾ ಎಂದು ಮೂಲಗಳು ಫಿಲ್ಮಿಬೀಟ್‌ಗೆ ರಿವೀಲ್ ಮಾಡಿವೆ.

More from Filmibeat

English summary
Darshan is doing an cameo in Yogaraj Bhat Kannada Movie Garadi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X