Darshan Upcoming Movies : 3 ವರ್ಷ ದರ್ಶನ್ ಫುಲ್ ಬ್ಯುಸಿ: 56ರಿಂದ 60ನೇ ಸಿನಿಮಾವರೆಗೂ ಲಿಸ್ಟ್ ಔಟ್!
ದರ್ಶನ್ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಕನ್ನಡ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ಮಾಸ್ ಫ್ಯಾನ್ ಫಾಲೋವಿಂಗ್ ಇರೋ ನಟ ಸಿನಿಮಾಗೆ ಹಣ ಹೂಡಿದರೆ ಬಂಡವಾಳ ವಾಪಾಸ್ ಬರುವುದರಲ್ಲಿ ಡೌಟೇ ಇಲ್ಲ. ಇತ್ತೀಚೆಗೆ ದರ್ಶನ್ ನಟನೆಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ಹೀಗಾಗಿ ನಿರ್ಮಾಪಕರು ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ.
ದರ್ಶನ್ ಬರ್ತ್‌ಡೇಯಂದೇ ಕೆಲ ನಿರ್ಮಾಪಕರು ತಮ್ಮ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆದರೆ, ಆ ನಿರ್ಮಾಪಕರ ನಂಬರ್ ಎಷ್ಟು? ಅನ್ನೋ ಸುಳಿವು ಮಾತ್ರ ಇರಲಿಲ್ಲ. 56ನೇ ಸಿನಿಮಾ 'ಕಾಟೇರ' ರಾಕ್‌ಲೈನ್ ನಿರ್ಮಾಣ ಮಾಡುತ್ತಿದ್ರೆ, ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಕಾಟೇರ' ಈಗಗಾಲೇ ಅನೌನ್ಸ್ ಆಗಿದ್ದು, 57,58,59 ಹಾಗೂ 60ನೇ ಸಿನಿಮಾವನ್ನು ಯಾವ್ಯಾವ ನಿರ್ಮಾಪಕರು ನಿರ್ಮಾಣ ಮಾಡುತ್ತಾರೆ ಅನ್ನೋ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ಪಟ್ಟಿ ಹೀಗಿದೆ.

ದರ್ಶನ್ 57ನೇ ಸಿನಿಮಾ
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ನಟಿಸಲಿರುವ ಮುಂದಿನ ನಾಲ್ಕು ಸಿನಿಮಾಗಳ ಪಟ್ಟಿ ಓಡಾಡುತ್ತಿದೆ. ಇದರಲ್ಲಿ 56ನೇ ಸಿನಿಮಾ 'ಕಾಟೇರ' ಬಳಿಕ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋದನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯ ಪ್ರಕಾರ, ದರ್ಶನ್ 57ನೇ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. 'ಕಾಟೇರ' ಮುಗಿಯುತ್ತಿದ್ದಂತೆ ವಿಲನ ಪ್ರಕಾಶ್ ಟೀಮ್ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ದರ್ಶನ್ 58ನೇ ಸಿನಿಮಾ
ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ವರ್ಕ್‌ಔಟ್ ಆಗುತ್ತಿದೆ. 'ರಾಬರ್ಟ್' ಬಳಿಕ 'ಕಾಟೇರ' ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ಈ ಸಿನಿಮಾ ಕೂಡ ಕ್ರೇಜ್ ಹುಟ್ಟಿಸಿದೆ. 'ಕಾಟೇರ' ರಿಲೀಸ್ ಆಗುತ್ತಿದ್ದಂತೆ ದರ್ಶನ್ 57ನೇ ಸಿನಿಮಾ ಗ್ಯಾಪ್ ಸಿಗುತ್ತೆ. ಆ ಬಳಿಕ 58ನೇ ಸಿನಿಮಾವನ್ನೂ ತರುಣ್ ಸುಧೀರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ದರ್ಶನ್ ಗೆಳೆಯ ಸಚ್ಚಿದಾನಂದ ಇಂಡಿವಾಳು ನಿರ್ಮಾಣ ಮಾಡುತ್ತಿದ್ದಾರೆ.

ದರ್ಶನ್ 59ನೇ ಸಿನಿಮಾ
ಚಾಲೆಂಜಿಂಗ್ ಸ್ಟಾರ್ 59ನೇ ಸಿನಿಮಾವನ್ನು ಧ್ರುವ ದಾಸ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಶಿವರಾಜ್‌ಕುಮಾರ್ ಹಾಗೂ ರಮ್ಯಾ ಕಾಂಬಿನೇಷನ್ 'ಆರ್ಯನ್' ನಿರ್ಮಾಣ ಮಾಡಿದ್ದರು. ಅದೇ ನಿರ್ಮಾಪಕ ಈಗ ದರ್ಶನ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದು 59ನೇ ಸಿನಿಮಾ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹೇಳುತ್ತಿದೆ.

ದರ್ಶನ್ 60ನೇ ಸಿನಿಮಾ
ಬರ್ತ್‌ಡೇ ದಿನ ದರ್ಶನ್ ಮನೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಕಾಣಿಸಿಕೊಂಡಿದ್ದರು. ಅಂದೇ ಅವರೂ ಕೂಡ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಈ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 60ನೇ ಸಿನಿಮಾ ಆಗುತ್ತೆ ಎನ್ನಲಾಗಿದೆ. ಅಂದ್ಹಾಗೆ, ದರ್ಶನ್ 60ನೇ ಸಿನಿಮಾ ರಿಲೀಸ್ ಆಗೋಕೆ ಈಗಿನ ಲೆಕ್ಕಾಚಾರದ ಪ್ರಕಾರ, ಇನ್ನೂ ಮೂರು ವರ್ಷ ಬೇಕಾಗಬಹುದು.


Click it and Unblock the Notifications











