ಡಿ ಬಾಸ್ ಅಮ್ಮ ಮೀನಾ ದರ್ಶನ್‌ರನ್ನು ಅಪ್ಪು ಎಂದು ಕರೆಯುವುದೇಕೆ? ಏನಿದರ ಸೀಕ್ರೆಟ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಭಿಮಾನ, ಪ್ರೀತಿ. ಅದಕ್ಕೆ ಅಪ್ಪು ಅಗಲಿದ ಸುದ್ದಿ ತಿಳಿದ ಕೂಡಲೇ ದರ್ಶನ್ ಕ್ರಾಂತಿ ಚಿತ್ರದ ಚಿತ್ರೀಕರಣ ತಕ್ಷಣ ನಿಲ್ಲಿಸಿ, ಆಸ್ಪತ್ರೆಗೆ ತೆರೆಳಿದ್ದರು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದರು. ಆ ಮಟ್ಟಿಗೆ ಇಬ್ಬರಲ್ಲೂ ಸ್ನೇಹ ಪ್ರೀತಿ ಇತ್ತು.

ಪುನೀತ್ ರಾಜ್‌ಕುಮಾರ್ ಅವರನ್ನುಪ್ರೀತಿಯಿಂದ ಅಪ್ಪು ಅಂತ ಕರೆಯುತ್ತಾರೆ ಎನ್ನುವುದು ಗೊತ್ತಿದೆ. ಅದೇ ದರ್ಶನ್‌ರನ್ನೂ ಅಪ್ಪು ಅಂತ ಕರೆಯುತ್ತಾರೆ ಎನ್ನುವ ವಿಷಯ ಯಾರಿಗಾದರೂ ಗೊತ್ತಾ? ಡಿ ಬಾಸ್‌ನ ಅಭಿಮಾನಿಯೊಬ್ಬರು ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ದರ್ಶನ್ ತಾಯಿ ಮನೆಯಲ್ಲಿ ಮಗನಿಗೆ ಪ್ರೀತಿಯಿಂದ 'ಅಪ್ಪು' ಅಂತ ಕರೆಯುತ್ತಾರೆ ಅನ್ನುವ ವಿಷಯವನ್ನು ರಿವೀಲ್ ಮಾಡಿದ್ದಾರೆ.

ದಚ್ಚುಗೆ ಅಪ್ಪು ಎಂದು ಕರೆಯುವುದೇಕೆ?

ದಚ್ಚುಗೆ ಅಪ್ಪು ಎಂದು ಕರೆಯುವುದೇಕೆ?

ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಬಾಕ್ಸಾಫೀಸ್ ಸುಲ್ತಾನ ಅಂತೆಲ್ಲಾ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಆದರೆ, ಅಮ್ಮ ಮುದ್ದಾಗಿ ಕರೆಯುವ ಹೆಸರೇ ಅಚ್ಚು ಮೆಚ್ಚು. ದರ್ಶನ್ ಮನೆಯಲ್ಲಿ ಅವರ ತಾಯಿ ಮೀನಾ ತೂಗುದೀಪ ಅಪ್ಪು ಅಂತ ಕರೆಯುತ್ತಾರಂತೆ. ಬಾಲ್ಯದಿಂದಲೂ ದರ್ಶನ್‌ಗೆ ಅಮ್ಮ ಅಪ್ಪು ಅಂತಾರೆ ಕರೆಯುತ್ತಾರೆ. ಈ ಮಾತನ್ನು ಸ್ವತ: ಅಮ್ಮನೇ ಹೇಳಿದ್ದರು ಎಂದು ಗಾಯಕ, ದರ್ಶನ್ ಅಭಿಮಾನಿ ಸುಪ್ರೀತ್ ಗಾಂಧಾರಾ ಫಿಲ್ಮಿ ಬೀಟ್‌ಗೆ ರಿವೀಲ್ ಮಾಡಿದ್ದಾರೆ. "ಇದೊಂದು ವಿಷಯ ನನಗೆ ಗೊತ್ತಿರಲಿಲ್ಲ. ದರ್ಶನ್ ಸರ್ ಅನ್ನು ಚಿಕ್ಕ ವಯಸ್ಸಿನಿಂದ ಅಪ್ಪು. ಅಪ್ಪು ಅಂತ ಕರೆಯುತ್ತಿದ್ದರಂತೆ. ದರ್ಶನ್ ಸರ್ ಅವರ ಅಮ್ಮ ಹೇಳಿದ್ದು ನನಗೆ. ಚಿಕ್ಕ ವಯಸ್ಸಿನಿಂದಲೂ ದರ್ಶನ್ ಅವರನ್ನು ಅಪ್ಪು ಅಂತಲೇ ಕರೆಯೋದು ಅಂತ ಅಮ್ಮ ಹೇಳಿದ್ದರು. ಅವತ್ತೆ ಮೈಂಡಿಗೆ ಹಾಕೊಂಡೆ. ಏನಾದರೂ ಮಾಡಬೇಕು ಅಂತ ಡಿಸೈಡ್ ಮಾಡಿದೆ." ಎಂದು ಗಾಯಕ ಸುಪ್ರಿತ್ ಗಾಂಧಾರಾ.

ದರ್ಶನ್ ಹುಟ್ಟುಹಬ್ಬಕ್ಕೆ ಕ್ರಾಂತಿ ಸಾಂಗ್

ದರ್ಶನ್ ಹುಟ್ಟುಹಬ್ಬಕ್ಕೆ ಕ್ರಾಂತಿ ಸಾಂಗ್

ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಇದ್ದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮಾತ್ರ ವಿಶ್ವಾಸ ಕಳೆದುಕೊಂಡಿಲ್ಲ. ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸುವುದೇ ಸರಿ ಅಂತ ತೀರ್ಮಾನ ಮಾಡಿದ್ದಾರೆ. ಅದಕ್ಕಾಗಿಯೇ ಸುಪ್ರೀತ್ ಗಾಂಧಾರ ಎನ್ನುವ ವ್ಯಕ್ತಿ ಹಾಡೊಂದನ್ನು ಕಂಪೋಸ್ ಮಾಡಿದ್ದಾರೆ. ಅದುವೇ ಕ್ರಾಂತಿ ಸಾಂಗ್. "ಪ್ರತಿ ವರ್ಷದಂತೆ ಈ ವರ್ಷವೂ ದರ್ಶನ್ ಸರ್ ಬರ್ತ್‌ಡೇ ಹಾಡೊಂದನ್ನು ಸಿದ್ಧವಾಗಿದೆ. ಈ ವರ್ಷ ಎರಡು ತರ ಹಾಡು ಬರುತ್ತೆ. ಒಂದು ಕ್ರಾಂತಿ ಸಿನಿಮಾಗೆ, ಇನ್ನೊಂದು ಡಿ ಬಾಸ್ ಫ್ಯಾನ್ಸ್‌ಗೆ. ಈ ಬಾರಿ ಟೈಟಲ್ ಬಂದು 'ಡಿ ಬಾಸ್ ಕ್ರಾಂತಿ' ಅಂತ ಇಟ್ಟಿದ್ದೀನಿ. ಪ್ರತಿ ವರ್ಷ ನಾನು ಹಾಡು ಮಾಡುವಾಗ ಡಿ ಬಾಸ್ ಅಂತ ಬಂದೇ ಬರುತ್ತೆ. ಯಾಕಂದ್ರೆ, ಈ ಹಾಡು ಕ್ರಾಂತಿಗೆ ಪ್ರಮೋಷನಲ್ ಸಾಂಗ್ ಕೂಡ ಆಗ್ವೇಕು. ಡಿ ಬಾಸ್ ಬರ್ತ್‌ಡೇಗೂ ಆಗಬೇಕು ಅಂತ ಇಟ್ಟಿದ್ದೀನಿ. "

ಡಿ ಬಾಸ್ ಬರ್ತ್‌ಡೇಗೆ ಪ್ಯಾನ್ ಇಂಡಿಯಾ ಸಾಂಗ್

ಡಿ ಬಾಸ್ ಬರ್ತ್‌ಡೇಗೆ ಪ್ಯಾನ್ ಇಂಡಿಯಾ ಸಾಂಗ್

ಚಾಲೆಂಜಿಂಗ್ ದರ್ಶನ್ ಅಭಿಮಾನಿಗಳು ಹೇಗೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹುಟ್ಟುಹಬ್ಬದಿಂದ ಹಿಡಿದು ಪ್ರತಿಯೊಂದು ಸಂದರ್ಭದಲ್ಲೂ ಚಿಂದಿ ಮಾಡಿ ಬಿಡುತ್ತಾರೆ. ಈ ಬಾರಿ ಕೂಡ ದರ್ಶನ್ ಹುಟ್ಟುಹಬ್ಬಕ್ಕೆ ಭರ್ಜರಿಯಾಗಿ ಸಿದ್ದರಾಗುತ್ತಿದ್ದಾರೆ. ಕಳೆದ ಬಾರಿ ಕೊರೊನಾ ಕಾರಣದಿಂದ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಅದರಂತೆ ಈ ವರ್ಷ ಕೂಡ ಕೊರೊನಾ ಅಭಿಮಾನಿಗಳ ಹರ್ಷಕ್ಕೆ ಅಡ್ಡಿಯೊಡ್ಡುವ ಸಾಧ್ಯತೆಯಿದೆ. ಆದರೂ, ಸುಪ್ರೀತ್ ಫ್ಯಾನ್ ಮೇಡ್ ಸಾಂಗ್ ಒಂದನ್ನು ರಿವೀಲ್ ಮಾಡಿದ್ದಾರೆ. "ಇದು ನನ್ನ ಬಹುದಿನಗಳ ಕನಸು. ಇಷ್ಟ ಪಟ್ಟು ಮಾಡಿರುವ ಸಾಂಗ್. 2022ಕ್ಕೆ ಪ್ಯಾನ್ ಇಂಡಿಯಾ ಅಲ್ಬಮ್ ಮಾಡುತ್ತಿದ್ದೇನೆ. ಇದನ್ನು ಸಾಂಗ್ ಅಂತ ನೋಡುವ ಹಾಗಿಲ್ಲ. ಇದೊಂದು ಪಿಕ್ಚರ್ ನೋಡಿದ ಹಾಗೆ ಇರುತ್ತೆ. ಈಗಾಗಲೇ ಶೂಟ್ ಮಾಡಿದ್ದೀವಿ. ದೃಶ್ಯಗಳು ಸೇಮ್ ಇರುತ್ತೆ. ಆದರೆ, ಆಯಾ ಭಾಷೆಗೆ ಅಂತ ಬಂದಾಗ ಅಲ್ಲಿನ ನೇಟಿವಿಟಿಗೆ ತಕ್ಕಂತೆ ಶೂಟ್ ಮಾಡಿದ್ದೇವೆ. ಕನ್ನಡ, ತೆಲುಗು, ತಮಿಳು ತಕ್ಕಂತೆ ಮಾಡಿದ್ದೇವೆ. ಹಿಂದಿ ಅಂತ ಬಂದಾಗ ಇನ್ನೊಂದು ಲೆವೆಲ್‌ ಕೊಡಬೇಕು ಹಾಗಿರುತ್ತೆ." ಎಂದು ಸುಪ್ರೀತ್ ರಿವೀಲ್ ಮಾಡಿದ್ದಾರೆ.

ಜೈ ಸಾಯಿರಾಮ್ ಅಂದರೆ, ಹಾಡು ಸೂಪರ್ ಹಿಟ್

ಜೈ ಸಾಯಿರಾಮ್ ಅಂದರೆ, ಹಾಡು ಸೂಪರ್ ಹಿಟ್

"ನಾನು ಭೇಟಿ ಮಾಡಿದ್ದು ಇಬ್ಬರನ್ನು ಮಾತ್ರ. ದರ್ಶನ್ ಸರ್ ಅವರನ್ನು ಹಾಗೂ ಅಮ್ಮನನ್ನ ಅಷ್ಟೇ ಯಾರೇ ಬಂದರೂ ಸಪೋರ್ಟ್ ಮಾಡುತ್ತಾರೆ. ಅಷ್ಟೇ ಪ್ರೀತಿಯಿಂದ ಸಪೋರ್ಟ್ ಮಾಡುತ್ತಾರೆ. ಜೈ ಸಾಯಿರಾಮ್ ಒಳ್ಳೆಯದಾಗಲಿ ಅಂತಾರೆ ಅಮ್ಮ. ಮಿಕ್ಕಿದ್ದೆಲ್ಲಾ ಸೂಪರ್‌ ಹಿಟ್. ಅವರು ಯಾವಾಗ ಜೈ ಸಾಯಿರಾಮ್ ಎಂದು ಹೇಳಿ ಕಳಿಸುತ್ತಾರೋ ಅವಾಗ ಪಕ್ಕಾ ಹಿಟ್ಟು ಇದು ಹೋಗು ಅಂತ." ಎಂದು ದರ್ಶನ್ ತಾಯಿ ಮೀನಾ ಅವರ ಗುಣಗಾನ ಮಾಡಿದ್ದಾರೆ ಸುಪ್ರೀತ್.

More from Filmibeat

English summary
Challenging Star Darshan nick name is Appu. Darshan Mother call him as appu in home says Darshan fan and musician Supreeth Gandhara.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X