ಧೂಳೆಬ್ಬಿಸುತ್ತಿದೆ 'ರಾಬರ್ಟ್' ಚಿತ್ರದ 'ದೋಸ್ತಾ ಕಣೋ... ಬ್ರದರ್ ಫ್ರಂ ಅನದರ್ ಮದರ್'

ಸಿನಿಮಾಗಳೂ ಬಿಡುಗಡೆಯಾಗುತ್ತಿಲ್ಲ, ಚಿತ್ರಮಂದಿರಗಳು ಪ್ರದರ್ಶನ ಮಾಡುತ್ತಿಲ್ಲ, ಚಿತ್ರೀಕರಣಗಳೂ ನಿಂತು ಹೋಗಿವೆ. ಹಾಗೆಂದು ಅಭಿಮಾನಿಗಳು ನಿರಾಶರಾಗಿ ಕುಳಿತಿಲ್ಲ. ಏಕೆಂದರೆ ಅವರ ನೆಚ್ಚಿನ ನಟರ ಸಿನಿಮಾಗಳಿಂದ ಒಂದೊಂದೇ ಖುಷಿ ನೀಡುವ ಕೊಡುಗೆಗಳು ನಿರಂತರವಾಗಿ ಸಿಗುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ದೋಸ್ತಾ ಕಣೋ...'.

'ರಾಬರ್ಟ್' ಚಿತ್ರತಂಡ ಈ ತಿಂಗಳಲ್ಲಿ ಬಿಡುಗಡೆ ಮಾಡಿರುವ ಮೂರನೇ ಲಿರಿಕಲ್ ವಿಡಿಯೋ 'ಯೂಟ್ಯೂಬ್'ನಲ್ಲಿ ತನ್ನ ಕರಾಮತ್ತು ಪ್ರದರ್ಶಿಸಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೆ ಬಾರಿ ವೀಕ್ಷಣೆಗೊಳಗಾಗಿ ದಾಖಲೆಯತ್ತ ಸಾಗಿದೆ. 'ರಾಬರ್ಟ್' ಚಿತ್ರದ ಎರಡು ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಅದರ ಮೂರನೇ ಹಾಡು ಈ ಎರಡೂ ಹಾಡುಗಳ ದಾಖಲೆಯನ್ನು ಮೀರಿಸಿರುವುದು ವಿಶೇಷ.

ಲಕ್ಷಗಟ್ಟಲೆ ವೀಕ್ಷಣೆ

ಲಕ್ಷಗಟ್ಟಲೆ ವೀಕ್ಷಣೆ

ಸ್ನೇಹದ ಮಹತ್ವವನ್ನು ಸಾರುವ 'ದೋಸ್ತಾ ಕಣೋ...' ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಎರಡೇ ಗಂಟೆಯಲ್ಲಿ ಸುಮಾರು 5 ಲಕ್ಷದಷ್ಟು ಬಾರಿ ವೀಕ್ಷಣೆಗೆ ಒಳಗಾಗಿರುವುದು, ಫ್ಯಾನ್ಸ್ ಯಾವ ಪರಿ ಇದನ್ನು ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ.

ದರ್ಶನ್-ಸುದೀಪ್ ಒಂದಾಗಲಿ

ದರ್ಶನ್-ಸುದೀಪ್ ಒಂದಾಗಲಿ

4.23 ನಿಮಿಷದ ಈ ಹಾಡಿಗೆ ಎರಡೇ ಗಂಟೆಯಲ್ಲಿ 66 ಸಾವಿರ ಲೈಕ್ಸ್ ಬಂದಿವೆ. 'ಕುಚ್ಚುಕು ಕುಚ್ಚುಕು' ಹಾಡಿನ ಬಳಿಕ ಗೆಳೆತನದ ವಿಚಾರದಲ್ಲಿ ಎಲ್ಲರ ಬಾಯಲ್ಲಿ ಗುನುಗುಟ್ಟುವಂತಹ ಮತ್ತೊಂದು ಹಾಡು ಇದು. ಈ ಹಾಡು ದರ್ಶನ್ ಮತ್ತು ಸುದೀಪ್ ಅವರಿಗೆ ಸೂಪರ್ ಆಗಿ ಹೊಂದಿಕೆಯಾಗುತ್ತದೆ. ಅವರಿಬ್ಬರೂ ಬೇಗ ಒಂದಾಗಬೇಕು ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ವಿಜಯ ಪ್ರಕಾಶ್-ಹೇಮಂತ್ ಹಾಡು

ವಿಜಯ ಪ್ರಕಾಶ್-ಹೇಮಂತ್ ಹಾಡು

ಚೇತನ್ ಕುಮಾರ್ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕರಾದ ವಿಜಯ ಪ್ರಕಾಶ್ ಮತ್ತು ಹೇಮಂತ್ ಕುಮಾರ್ ಹಾಡಿದ್ದಾರೆ. ಇದೇ ಮೊದಲ ಬಾರಿ ಇವರಿಬ್ಬರೂ ಜತೆಯಾಗಿ ಹಾಡಿರುವುದು. ಹಾಡಿನ ಉದ್ದಕ್ಕೂ 'ರಾಬರ್ಟ್' ಚಿತ್ರತಂಡದ ಗೆಳೆಯರು, ನಟರು, ನಿರ್ದೇಶಕರು, ತಂತ್ರಜ್ಞರು, ನಿರ್ಮಾಪಕರ ಸ್ನೇಹಿತರ ಬಳಗದ ಚಿತ್ರಗಳನ್ನು ತೋರಿಸುವ ಮೂಲಕ ಗೆಳೆತನಕ್ಕೆ ಅರ್ಪಿಸಲಾಗಿದೆ.

ಮೈ ಬ್ರದರ್ ಫ್ರಂ ಅನದರ್ ಮದರ್

ಮೈ ಬ್ರದರ್ ಫ್ರಂ ಅನದರ್ ಮದರ್

ಬೈದು ಬುದ್ದಿ ಹೇಳೋ ಫಾದರ್ ಕಣೋ ಇವನು

ನೋವಲ್ಲಿ ಕಣ್ಣೀರು ಒರೆಸೋ ಮದರು ಕಣೋ

ಜೀವನಕ್ಕೆ ಪಾಠ ಟೀಚರ್ ಕಣೋ ಇವನು

ಲೈಫು ಪಾರ್ಟರ್‌ಗಿಂತ ಕ್ಲೋಸು ಕಣೋ

ರಕ್ತ ಸಂಬಂಧ ಮೀರಿದ ಬಂಧು ಇವನು

ಜಾತಿ ಮತಕ್ಕಿಂತ ತುಂಬಾ ದೊಡ್ಡವನು ಇವನು... ಎಂದು ಶುರುವಾಗುವ ಹಾಡು 'ಮೈ ಬ್ರದರ್ ಫ್ರಂ ಅನದರ್ ಮದರ್' ಎಂಬ ತತ್ವವನ್ನು ಸಾರುತ್ತದೆ.

ರಾಬರ್ಟ್ ಚಿತ್ರದ ಮೂರನೇ ಹಾಡು

ರಾಬರ್ಟ್ ಚಿತ್ರದ ಮೂರನೇ ಹಾಡು

ರಾಬರ್ಟ್ ಚಿತ್ರದ ಇಂಟ್ರೊಡಕ್ಷನ್ ಸಾಂಗ್ 'ಬಾ ಬಾ ಬಾ ನಾ ರೆಡಿ ಮೂರು ಮಿಲಿಯನ್‌ಗೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ. ಬಳಿಕ ಬಿಡುಗಡೆಯಾದ 'ಜೈ ಶ್ರೀರಾಂ' 1.4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. 'ದೋಸ್ತಾ ಕಣೋ' ಈ ಎರಡೂ ಹಾಡುಗಳನ್ನು ಮೀರಿ ಮುಂದೆ ಸಾಗುವ ಸೂಚನೆ ನೀಡಿದೆ.

More from Filmibeat

English summary
Third song of chellenging star Darshan's Roberrt movie Dostha Kano storms in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X