ಕ್ಯಾಮರಾ ಮುಂದೆ ದರ್ಶನ್ 'ಕ್ರಾಂತಿ': ಸೋಶಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದ ಫೋಟೊಶೂಟ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ರಿಲೀಸ್ ಬಳಿಕ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಇನ್ನೊಂದು ಕಡೆ ದರ್ಶನ್ ಅಭಿಮಾನಿಗಳು 'ಕ್ರಾಂತಿ' ಸಂಭ್ರಮದಲ್ಲಿ ಮುಳುಗಿ ಎದ್ದ ಬಳಿಕ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಬರೋಬ್ಬರಿ ಮೂರು ವರ್ಷಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ.
ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸದಾಗಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಇದೇ ಫೋಟೊಗಳೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಸಲಿಗೆ ದರ್ಶನ್ ಈ ಫೋಟೊಶೂಟ್ ಮಾಡಿಸಿದ್ದೇಕೆ? ಫೋಟೊಶೂಟ್ ಬಗ್ಗೆ ಫ್ಯಾನ್ಸ್ ರಿಯಾಕ್ಷನ್ ಏನು? ತಿಳಿಯಲು ಮುಂದೆ ಓದಿ.

ದರ್ಶನ್ ಹೊಸ ಫೋಟೊಶೂಟ್
ಇನ್ನೂ ಎರಡು ದಿನಗಳಾಗಿರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಸಂಭ್ರಮ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದೇ ವೇಳೆ ಅಭಿಮಾನಿಗಳಿಗೆ ದರ್ಶನ್ ಸರ್ಪ್ರೈಸ್ ಕೊಟ್ಟಿದ್ದಾರೆ. ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಎರಡು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಎರಡು ಫೋಟೊಗಳಲ್ಲಿ ದರ್ಶನ್ ಗೆಟಪ್ ನೋಡಿ ಡಿ ಬಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ದರ್ಶನ್ ಫೋಟೊಶೂಟ್ ಮಾಡಿಸಿದ್ದು ಯಾಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಫೋಟೊಶೂಟ್ ಮಾಡಿಸಿದ್ರಾ? ಇಲ್ಲಾ ಯಾವುದೋ ಹೊಸ ಸಿನಿಮಾದ ಫಸ್ಟ್‌ಲುಕ್ ಇರಬಹುದಾ? ಅನ್ನೋ ಅನುಮಾನ ಎಲ್ಲರ ತಲೆಯಲ್ಲಿ ಓಡಾಡುತ್ತಲೇ ಇತ್ತು. ಅಲ್ಲದೆ ಇದು ಡಿ 56 ಸಿನಿಮಾಗಾಗಿ ಮಾಡಿಸಿದ ಪೋಟೊಶೂಟ್ ಎಂದು ಹೇಳಲಾಗುತ್ತಿತ್ತು. ಆದರೆ, ಇದು ಯಾವುದೇ ಸಿನಿಮಾಗಾಗಿ ಮಾಡಿದ ಫೋಟೊಶೂಟ್ ಅಲ್ಲ. ಫ್ಯಾನ್ಸ್‌ಗೋಸ್ಕರ ಮಾಡಿಸಿದ ಫೋಟೊಶೂಟ್ ಅಂತ ಅಭಿಮಾನಿ ವಲಯದಲ್ಲಿ ಓಡಾಡುತ್ತಿದೆ.

ಹುಟ್ಟುಹಬ್ಬಕ್ಕೆ 'D 56' ಟೈಟಲ್ ಅನೌನ್ಸ್
ರಾಬರ್ಟ್ ಬಳಿಕ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗುತ್ತಿರುವ ಹೊಚ್ಚ ಹೊಸ ಸಿನಿಮಾ 'D 56' ಟೈಟಲ್ ಅನೌನ್ಸ್ ಆಗುತ್ತಿದೆ. ಈಗಾಗಲೇ ಈ ಬಗ್ಗೆ ಅನೌನ್ಸ್‌ಮೆಂಟ್ ಕೂಡ ಆಗಿದೆ. ಹೀಗಾಗಿ ಟೈಟಲ್ ಏನಿರಬಹುದು ಅಂತ ಕುತೂಹಲದಿಂದ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದೇ ವೇಳೆ ಸೂರಪ್ಪ ಬಾಬು ಸಿನಿಮಾ ಕೂಡ ಅನೌನ್ಸ್ ಆಗುವ ಸಾಧ್ಯತೆಯಿದೆ.


Click it and Unblock the Notifications











