ದರ್ಶನ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಮೆಜೆಸ್ಟಿಕ್‌'ಗೆ 20 ವರ್ಷ: ದಾಸ ಹೇಳಿದ್ದೇನು?

ಸ್ಯಾಂಡಲ್‌ವುಡ್‌ಗೆ 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟ. ತೂಗುದೀಪ ಶ್ರೀನಿವಾಸ್ ಅಂತಹ ಸುಪ್ರಸಿದ್ಧ ನಟನ ಮಗನಾಗಿದ್ದರೂ 'ಮೆಜೆಸ್ಟಿಕ್' ಅನ್ನುವ ಸಿನಿಮಾ ಗೆಲ್ಲುವವರೆಗೂ ದರ್ಶನ್ ಯಾರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ 2002 ಫೆಬ್ರವರಿ 8ರಂದು 'ಮೆಜೆಸ್ಟಿಕ್‌' ದರ್ಶನ್ ಬದುಕಿನ ಗತಿಯನ್ನೇ ಬದಲಿಸಿತ್ತು. ಈ ಸಿನಿಮಾ ತೆರೆಕಂಡಾಗ ದರ್ಶನ್ ಕನ್ನಡ ಚಿತ್ರರಂಗಕ್ಕೆ ಹೊಸ ಮುಖವಾಗಿತ್ತು.

ದರ್ಶನ್ ಎಲ್ಲಾ ಹೊಸ ಹೀರೊಗಳಂತೆ ನೂರೆಂಟು ಕನಸುಗಳನ್ನು ಹೊತ್ತು ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ನಾಯಕನಾಗಿ ನಟಿಸಿದ ಮೊದಲ ಸಿನಿಮಾದಲ್ಲಿಯೇ ಯಶಸ್ಸಿನ ರುಚಿ ಕಂಡಿದ್ದರು. ಮೊದಲ ಸಿನಿಮಾದಲ್ಲೇ ಗೆದ್ದು ಬೀಗಿದ ದರ್ಶನ್‌ ಇಂದು ಅಭಿಮಾನಿಗಳ ಪಾಲಿಗೆ 'ಡಿ ಬಾಸ್‌' ಆಗಿ ಮಿಂಚಿದ್ದಾರೆ. ಇದೇ 'ಮೆಜೆಸ್ಟಿಕ್' ಸಿನಿಮಾ ಇಂದು 20 ವರ್ಷಗಳ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ದರ್ಶನ್ ಈ ಅಮೂಲ್ಯ ಕ್ಷಣಗಳನ್ನು ನೆನೆದಿದ್ದಾರೆ.

 'ಮೆಜೆಸ್ಟಿಕ್' '100' ದಿನ ಯಶಸ್ಸಿ ಪ್ರದರ್ಶನ

'ಮೆಜೆಸ್ಟಿಕ್' '100' ದಿನ ಯಶಸ್ಸಿ ಪ್ರದರ್ಶನ

ದರ್ಶನ್ ನಾಯಕನಾದ ಮೊದಲ ಸಿನಿಮಾದಲ್ಲಿಯೇ ಮಾಸ್‌ ಅವತಾರದಲ್ಲಿ ಎಂಟ್ರಿ ನೀಡಿದ್ದರು. ಅಲ್ಲಿಂದ ಇಲ್ಲಿವರೆಗೂ ಅಭಿಮಾನಿಗಳು ದಾಸನ ಅವತಾರಕ್ಕೆ ಊಘೇ ಉಘೇ ಅಂತಿದ್ದಾರೆ. ಅಂದು ದರ್ಶನ್ ಕನ್ನಡ ಸಿನಿಪ್ರಿಯರಿಗೆ ಹೊಸ ಮುಖವಾಗಿದ್ದರೂ 'ಮೆಜಿಸ್ಟಿಕ್' ಥಿಯೇಟರ್‌ಗಳಲ್ಲಿ ಯಶಸ್ವಯಾಗಿ 100 ದಿನಗಳನ್ನು ಪೂರೈಸಿತ್ತು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬರ ಹೀರೋ ಸಿಕ್ಕಿದಂತಾಗಿತ್ತು. ಇಲ್ಲಿಂದ ದರ್ಶನ್ ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ.

'ಮೆಜೆಸ್ಟಿಕ್‌'ಗೆ 20 ವರ್ಷ: ದರ್ಶನ್ ಹೇಳಿದ್ದೇನು?

ಮೆಜೆಸ್ಟಿಕ್ ಸಿನಿಮಾವನ್ನು ಪಿ.ಎನ್‌. ಸತ್ಯ ನಿರ್ದೇಶಿಸಿದ್ದರು. ಎಂ.ಜಿ. ರಾಮಮೂರ್ತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇವರಿಬ್ಬರನ್ನು ದರ್ಶನ್ ಇಂದಿಗೂ ನೆನೆಸಿಕೊಳ್ಳುತ್ತಾರೆ. ಅಂದಹಾಗೆ ಮೊದಲ ಸಿನಿಮಾದಲ್ಲಿ ದರ್ಶನ್‌ಗೆ ಜೋಡಿಯಾಗಿ 'ಸ್ಪರ್ಶ' ರೇಖಾ ನಟಿಸಿದ್ದರು. ಇಬ್ಬರ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಇಂದು(ಫೆಬ್ರವರಿ 08) 'ಮೆಜೆಸ್ಟಿಕ್' ಸಿನಿಮಾ 20 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಇದೇ ವೇಳೆ ದರ್ಶನ್ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. "ನಿಮ್ಮೆಲ್ಲರ ಮನದಂಗಳಕ್ಕೆ ದಾಸನಾಗಿ ಇಟ್ಟ ಮೊದಲ ಹೆಜ್ಜೆ 'ಮೆಜೆಸ್ಟಿಕ್' ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳು ಕಳೆದಿವೆ. ಇಂತ ಒಳ್ಳೆ ಬುನಾದಿಯನ್ನು ನೀಡಿದ ಚಿತ್ರಕ್ಕೆ ಶ್ರಮಿಸಿದ ನಿರ್ದೇಶಕ, ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ಪ್ರೀತಿಗೆ ನಾ ಸದಾ ಚಿರಋಣಿ." ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

 'ಕ್ರಾಂತಿ' ಮುಹೂರ್ತದಲ್ಲಿ 'ಮೆಜೆಸ್ಟಿಕ್' ಜಪ

'ಕ್ರಾಂತಿ' ಮುಹೂರ್ತದಲ್ಲಿ 'ಮೆಜೆಸ್ಟಿಕ್' ಜಪ

ಇತ್ತೀಚೆಗೆ ಸೆಟ್ಟೇರಿದ್ದ 'ಕ್ರಾಂತಿ' ಸಿನಿಮಾದ ವೇಳೆ 'ಮೆಜೆಸ್ಟಿಕ್' ಅನ್ನು ಮತ್ತೆ ನೆನಪಿಸಿಕೊಂಡಿದ್ದರು. ಕೊರೊನಾ, ಲಾಕ್‌ಡೌನ್ ಅಂತ ಎರಡು ಸಿನಿಮಾದಿಂದ ದೂರವೇ ಉಳಿದಿದ್ದರು. ಈಗ ಮತ್ತೆ ಶೂಟಿಂಗ್‌ನಲ್ಲಿ ಭಾಗಿಯಾದಾಗ, ಅವರಿಗೆ ಹೊಸ ಸಿನಿಮಾದ ಅನುಭವ ಆಗಿತ್ತು. ಹೀಗಾಗಿ ದರ್ಶನ್ 'ಕ್ರಾಂತಿ' ಸೆಟ್ಟೇರಿದ ದಿನ ಮತ್ತೆ 'ಮೆಜೆಸ್ಟಿಕ್'ದಲ್ಲಿ ಮೊದಲ ದಿನ ಕ್ಯಾಮರಾ ಫೇಸ್ ಮಾಡಿದಂತಹ ಅನುಭವ ಆಗುತ್ತಿದೆ ಎಂದು ಹೇಳಿದ್ದರು.

 'ಮೆಜೆಸ್ಟಿಕ್' to 'ಕ್ರಾಂತಿ': ದರ್ಶನ್ ಜರ್ನಿ

'ಮೆಜೆಸ್ಟಿಕ್' to 'ಕ್ರಾಂತಿ': ದರ್ಶನ್ ಜರ್ನಿ

ದರ್ಶನ್ ಲೈಟ್ ಮ್ಯಾನ್ ಆಗಿ, ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಆದರೆ, 'ಮೆಜೆಸ್ಟಿಕ್' ಸಿನಿಮಾ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದರ ದರ್ಶನ್ ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೂವರೆಗೂ ನಟಿಸಿದ ಒಂದಿಷ್ಟು ಸಿನಿಮಾಗಳು ಸೋತಿವೆ. ಒಂದಿಷ್ಟು ಸಿನಿಮಾಗಳು ಗೆದ್ದಿವೆ. ಆದರೂ, ದರ್ಶನ್ ಫ್ಯಾನ್ ಫಾಲೋಯಿಂಗ್ ಮಾತ್ರ ಕಡಿಮೆಯಾಗಿಲ್ಲ. ದರ್ಶನ್ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

More from Filmibeat

English summary
Challenging Star Darshan starrer Majestic celebrating 20 year of its release. Darshan shared this news in his twitter account for fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X