Darshan: ಅಕ್ಕ-ತಂಗಿಯಂದಿರಿಗೆ ರಾಖಿ ಹಬ್ಬದ ಶುಭಾಶಯ ಹೇಳಿದ ದರ್ಶನ್.. ಸ್ಕ್ರೀನ್‌ಶಾಟ್ ತೆಗೆದ ಫ್ಯಾನ್ಸ್!

ಅಣ್ಣ-ತಂಗಿಯರ ಬಂಧವನ್ನು ಸಾರುವ ಹಬ್ಬ 'ರಕ್ಷಾ ಬಂಧನ'. ಇಂದು (ಆಗಸ್ಟ್ 30) ದೇಶದ ಮೂಲೆ ಮೂಲೆಯಲ್ಲೂ ರಾಖಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅಣ್ಣನಿಗೆ ತಂಗಿಯಂದಿರು ರಾಖಿ ಕಟ್ಟಿ ಅವರಿಂದ ಆಶೀರ್ವಾದವನ್ನು ಪಡೆಯುತ್ತಿದ್ದಾರೆ.

ರಾಖಿ ಹಬ್ಬ ಉತ್ತರ ಭಾರತದಲ್ಲಿ ಇದ್ದಷ್ಟು ಜನಪ್ರಿಯತೆ ಕರ್ನಾಟಕದಲ್ಲಿ ಇಲ್ಲ. ಆದರೂ, ಇತ್ತೀಚೆಗಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ರಾಖಿ ಕಟ್ಟಿ ಅಣ್ಣನ ಆಶೀರ್ವಾದ ಪಡೆಯುವ ಸಂಸ್ಕೃತಿ ಹೆಚ್ಚಾಗಿದೆ. ಅದರಲ್ಲೂ ಸೆಲೆಬ್ರೆಟಿ ವಲಯದಲ್ಲಿ ಸ್ವಲ್ಪ ಜಾಸ್ತಿನೇ ಇದೆ.

Challenging Star Darshan Wished Raksha Bandhan to his female fans

ರಾಖಿ ಹಬ್ಬದಂದು ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಕರ್ನಾಟಕದ ತಮ್ಮ ಅಭಿಮಾನಿಗಳಿಗೆ ಅಕ್ಕತಂಗಿಯಂದಿರಿಗೆ ದರ್ಶನ್ ರಕ್ಷಾ ಬಂಧನದ ಶುಭಾಶಯಗಳನ್ನು ತಿಳಿಸಿದ್ದಾರೆ.

ರಾಖಿ ಹಬ್ಬದ ಶುಭಕೋರಿದ ದರ್ಶನ್

ರಕ್ಷಾ ಬಂಧನದ ಈ ಶುಭ ದಿನದಂದು ಚಾಲೆಂಜಿಂಗ್ ಸ್ಟಾರ್ ಟ್ವೀಟ್ ಮಾಡಿದ್ದಾರೆ. ರಾಖಿ ಕಟ್ಟಿರುವ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಇದರೊಂದಿಗೆ "ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲಾ ನನ್ನ ಅಕ್ಕತಂಗಿಯರಿಗೆ ರಕ್ಷಾ ಬಂಧನ ಶುಭಾಶಯಗಳು" ಎಂದು ಟ್ವೀಟ್ ಮೂಲಕ ನಾಡಿನ ಜನತೆಗೆ ರಕ್ಷಾ ಬಂಧನದ ಶುಭಾಶಯಗಳನ್ನು ಹರಿಸಿದ್ದಾರೆ. ದರ್ಶನ್ ಟ್ವೀಟ್‌ಗೆ ಕಂಡು ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಸ್ಕ್ರೀನ್ ಶಾಟ್ ತೆಗೆದ ಫ್ಯಾನ್ಸ್

ದರ್ಶನ್ ಅಭಿಮಾನಿಗಳ ಕ್ರೇಜ್ ಬೇರೆ. ದರ್ಶನ್ ಯಾವುದೇ ಟ್ವೀಟ್ ಮಾಡಿದರೂ ಅದನ್ನು ಟ್ರೆಂಡಿಂಗ್‌ನಲ್ಲಿ ಇಡುತ್ತಾರೆ. ಇಂದು (ಆಗಸ್ಟ್ 30) ರಕ್ಷಾ ಬಂಧನದಂದು ಮಾಡಿದ ಟ್ವೀಟ್ ಅನ್ನೂ ಸ್ಕ್ರೀನ್ ಶಾಟ್ ತೆಗೆದು ರೀ ಟ್ವೀಟ್ ಮಾಡುತ್ತಿದ್ದಾರೆ. ದರ್ಶನ್ ಇತ್ತೀಚೆಗೆ ಎರಡು ಮೂರು ಕಾರಣಕ್ಕೆ ಸುದ್ದಿಯಲ್ಲಿ ಇದ್ದರು. ಮಾಧ್ಯಮಗಳೊಂದಿಗೆ ಸಂಧಾನ, ಜೋಗಿ ಪ್ರೇಮ್ ಜೊತೆ ಸಿನಿಮಾ, ಮುನಿಸು ಮರೆತು ಕಿಚ್ಚನ ಸಿನಿಮಾ ಮಾಡುತ್ತಾರೆ ಅನ್ನೋ ಸುದ್ದಿಗಳು ಓಡಾಡಿದ್ದವು. ಈ ಬೆನ್ನಲ್ಲೆ ದರ್ಶನ್ ಮಾಡಿದ ಸಾಲು ಸಾಲು ಟ್ವೀಟ್ ಕೂಡ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿತ್ತು.

'ಏಕಾಂಗಿ' ಟ್ವೀಟ್ ಗೊಂದಲ

ಸುಮಲತಾ ಹುಟ್ಟುಹಬ್ಬದಂದು ನೀಡಿದ ಪಾರ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದರು. ಆರು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಕಾಣಿಸಿಕೊಂಡಿರಲಿಲ್ಲ. ಇಬ್ಬರನ್ನು ನೋಡಿ ಕಿಚ್ಚ ದಚ್ಚು ಒಂದಾಗುತ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈ ಬೆನ್ನಲ್ಲೇ ದರ್ಶನ್ ಬ್ಯಾಕ್ ಟು ಬ್ಯಾಕ್ ಎರಡು ಟ್ವೀಟ್‌ಗಳನ್ನು ಮಾಡಿದ್ದರು. ಅದರಲ್ಲೊಂದು 'ಏಕಾಂಗಿ' ಸಿನಿಮಾ ಹಾಡಿನ ಸಾಲುಗಳು. ಈ ಟ್ವೀಟ್ ಮಾಡುತ್ತಿದ್ದಂತೆ ಮತ್ತಷ್ಟು ಗೊಂದಲಕ್ಕೆ ಬಿದ್ದಿದ್ದಾರೆ.

ದರ್ಶನ್- ಸುದೀಪ್ ಒಂದಾಗುತ್ತಾರಾ?

ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಒಂದಾಗಬೇಕು ಅನ್ನೋ ಅನ್ನೂ ಇಬ್ಬರ ಅಭಿಮಾನಿಗಳ ಆಸೆ. ಆದರೆ, ಅದ್ಯಾರೇ ಪ್ರಯತ್ನ ಪಟ್ಟಿದ್ದರೂ ಅದೂ ಸಾಧ್ಯವಾಗಿರಲಿಲ್ಲ. ಈಗ ಸುಮಲತಾ ಹಾಗೂ ರಾಕ್‌ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ಇಬ್ಬರೂ ಒಂದಾಗುತ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದರೆ, ಏಕಾಂಗಿ ಅಂತ ಟ್ವೀಟ್ ಮಾಡಿದ ಬಳಿಕ ಮತ್ತೆ ಅಭಿಮಾನಿಗಳಲ್ಲಿ ನಿರಾಸೆ ಮನೆ ಮಾಡಿದೆ.

More from Filmibeat

English summary
Challenging Star Darshan Wished Raksha Bandhan festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X