ಡಿ ಬಾಸ್ ಸಿನಿಮಾ ಪ್ರಚಾರಕ್ಕೆ 'ಕ್ರಾಂತಿ' ಕಿರುಚಿತ್ರ: ದರ್ಶನ್ ದಿಲ್ ಖುಷ್!
ದರ್ಶನ್ ಸಿನಿಮಾ 'ಕ್ರಾಂತಿ' ಬಿಡುಗಡೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಟೀಸರ್ ಹಾಗೂ ಫಸ್ಟ್ ಲುಕ್ ಸಿನಿಪ್ರಿಯರ ಗಮನ ಸೆಳೆದಿದೆ. ಇದೇ ಖುಷಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಪ್ರಮೋಷನಲ್ ಶಾರ್ಟ್ ಫಿಲ್ಮ್ ಅನ್ನು ನಿರ್ಮಾಣ ಮಾಡಿದ್ದಾರೆ.
ದರ್ಶನ್ ಅವರ ಪುಟ್ಟ ಪುಟ್ಟ ಅಭಿಮಾನಿಗಳು ಶಾರ್ಟ್ ಫಿಲ್ಮ್ ಅನ್ನು ನಿರ್ಮಾಣ ಮಾಡಿದ್ದು, ಈ ಕಿರುಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಾಗಿ ಸ್ವತ: ದರ್ಶನ್ ಅವರೇ ಕಿರುಚಿತ್ರ ನಿರ್ಮಾಣ ಮಾಡಿದವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

"ಕ್ರಾಂತಿ ಅಂತ ಕಿರುಚಿತ್ರ ಮಾಡಿದ್ದಾರೆ. ಮಾಚೇನಹಳ್ಳಿಯ ಶಾಲಾ ಮಕ್ಕಳು ಸೇರಿ ಮಾಡಿದ್ದಾರೆ. ತುಂಬಾ ಚೆನ್ನಾಗಿದೆ ನೋಡಿ ಹರಿಸಿ. ಹಾಗೇ ಆ ಚಿತ್ರದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ." ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಅಂದ್ಹಾಗೆ ಈ 'ಕ್ರಾಂತಿ' ಕಿರುಚಿತ್ರದಲ್ಲಿ ಗದಗ ಜಿಲ್ಲೆಯ, ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಶಾಲಾ ವಿದ್ಯಾರ್ಥಿಗಳು ನಟಿಸಿದ್ದಾರೆ. ಈ ಪ್ರಮೋಷನಲ್ ವಿಡಿಯೋ ಎಲ್ಲೆಡೆ ಫುಲ್ ವೈರಲ್ ಆಗುತ್ತಿದೆ. ಇದೊಂದಿ ಪಕ್ಕಾ ಕಮರ್ಷಿಯಲ್ ಸಿನಿಮಾದ ಹಾಗೆನೇ ಖಡಕ್ ಡೈಲಾಗ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದೆ.
'ಕ್ರಾಂತಿ' ಕಿರುಚಿತ್ರವನ್ನು ಗದಗ ಜಿಲ್ಲೆಯಾದ್ಯಂತ ಶೂಟ್ ಮಾಡಲಾಗಿದೆ. ಈ ಕಿರುಚಿತ್ರಕ್ಕೂ ಮುನ್ನ 'ಪೊಗರು', 'ಟಗರು' ಸಿನಿಮಾಗಳಿಗೆ ಇಂತಹದ್ದೇ ಪ್ರಮೋಷನಲ್ ಸಾಂಗ್ ಬರೆದಿದ್ದ ಗ್ರಾಮೀಣ ಪ್ರತಿಭೆ ಸತೀಶ್ ಮಾಚೇನಹಳ್ಳಿ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ರಾಜೀವ್ ರಡ್ಡಿ ಹಾಗೂ ಬಮ್ಮನಕಟ್ಟಿ ವಡವಿ ಹೊಸೂರು ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣವೇ ಶಕ್ತಿ ಅನ್ನೋ ಸಂದೇಶ ಹೊತ್ತು ತಂದಿದೆ. 'ಕ್ರಾಂತಿ' ಕೂಡ ಸರ್ಕಾರಿ ಶಾಲೆಗಳ ಉಳಿವಿಗಾಗಿ ಮಾಡಿದ ಸಿನಿಮಾ ಆಗಿರೋದ್ರಿಂದ ಅದೇ ಥೀಮ್‌ನಲ್ಲಿ 'ಕ್ರಾಂತಿ' ಕಿರುಚಿತ್ರವನ್ನು ಮಾಡಲಾಗಿದೆ.
ಮಂಗಳೂರಿನ ಲಾಯ್ ವ್ಯಾಲೆಂಟೈನ್ ಸಲ್ದಾನ್ ಸಂಗೀತ ನೀಡಿದ್ರೆ, ನೇಹಾಲ್ ಬೆದ್ರ ಕ್ಯಾಮರಾ ಕೈ ಚಳಕ ತೋರಿದ್ದಾರೆ. ಈ ಸಿನಿಮಾದಲ್ಲಿ ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿ ಗ್ರಾಮದ ತಿಪ್ಪಣ್ಣ ಸೊರಟೂರು ಪವಿತ್ರಾ ತುಮ್ಮಿನಕಟ್ಟಿ, ಜಾನುಭಾಯಿ ಮರಾಠೆ, ನಾಗರಾಜ ಮತ್ತೂರು, ಪ್ರವೀಣ ಆಡಿನ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











