"ದರ್ಶನ್ ಕಾರು ರೇಸ್‌ಗೆ ಹೋಗಿದ್ದರೆ ವಾಪಾಸ್ ಬರುತ್ತಿರಲಿಲ್ಲ"; ಕಾಳಿಮಾತೆ ಉಪಾಸಕಿ ಚಂದಾ ಪಾಂಡೆ ಅಮ್ಮಾಜಿ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿ ಸುಮಾರು ಒಂದು ತಿಂಗಳಿನ ಮೇಲಾಗಿದೆ. ದರ್ಶನ್ ಈ ಸ್ಥಿತಿಯನ್ನು ಕಂಡು ಅವರ ಗ್ರಹಗತಿ ಚೆನ್ನಾಗಿಲ್ಲ ಅಂತ ಹೇಳಿದ್ದಾರೆ. ಮತ್ತೆ ಕೆಲವರು ದರ್ಶನ್ ಯಾವಾಗ ರಿಲೀಸ್ ಆಗುತ್ತಾರೆ ಅಂತ ಭವಿಷ್ಯವನ್ನು ನುಡಿಯುತ್ತಿದ್ದಾರೆ.

ಈ ಮಧ್ಯೆ ಕಾಳಿಮಾತೆ ಉಪಾಸಕಿ ಚಂದಾ ಪಾಂಡೆ ಅಮ್ಮಾಜಿ ಕೂಡ ದರ್ಶನ್ ಬಗ್ಗೆ ಫಿಲ್ಮಿಬೀಟ್‌ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ದರ್ಶನ್‌ಗೆ ಈ ಹಿಂದೆನೇ ಪ್ರಾಣಕ್ಕೆ ಸಂಚಕಾರವಿತ್ತು ಎಂದು ಹೇಳಿದ್ದಾರೆ. ಅಷ್ಟಕ್ಕೂ ದರ್ಶನ್‌ ಪ್ರಾಣಕ್ಕೆ ಎದುರಾಗಿದ್ದ ಕಂಟಕವನ್ನು ಚಂದಾ ಪಾಂಡೆ ಅಮ್ಮಾಜಿ ಹೇಗೆ ತಪ್ಪಿಸಿದರು ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Chanda Pandey Ammaji talks about Darshan car race and death threat

2018ನೇ ಇಸವಿಯಲ್ಲಿ ದರ್ಶನ್ ಸ್ನೇಹಿತರೊಬ್ಬರು ಅವರ ತೊಂದರೆಗಳಿಗೆ ಚಂದಾ ಪಾಂಡೆ ಅಮ್ಮಾಜಿ ಮನೆಗೆ ಬರುತ್ತಿದ್ದರು. ಹೀಗೆ ಮಾತಾಡುತ್ತಿದ್ದಾಗ ಯಾವುದೇ ಒಂದು ಸಮಯದಲ್ಲಿ ದರ್ಶನ್ ವಿಚಾರ ಬಂದಿತ್ತು. ಆಗ ಅಮ್ಮಾಜಿ ದರ್ಶನ್ ನಿನಗೆ ಗೊತ್ತಾ ಅಂತ ಕೇಳಿದ್ದರು. ತುಂಬಾ ಚೆನ್ನಾಗಿ ಗೊತ್ತು ಎಂದು ಹೇಳಿದಾಗ, ತುಂಬಾ ಕ್ಲೋಸ್ ಫ್ರೆಂಡ್ ಅಂತ ಅವರು ಹೇಳಿದ್ದರು. ಅವರನ್ನೊಮ್ಮೆ ಭೇಟಿ ಮಾಡಬೇಕಲ್ಲ ಅಂತ ಸ್ವತ: ಚಂದಾ ಪಾಂಡೆ ಅಮ್ಮಾಜಿ ಅವರೇ ಕೇಳಿದ್ದರು. ಆ ವೇಳೆ ಏನಾಯ್ತು? ಅಂತ ಹೇಳುತ್ತಾರೆ ಕೇಳಿ.

"ಆ ವೇಳೆ ಅವರಿಗೆ ಕೆಲವು ಗಂಡಾಂತರಗಳಿದೆ ಅಂತ ಹೇಳಿದೆ. ಅದು ಶುರುವಾಗಿದ್ದು ಒಂದು ಕಪ್ಪು ಪಕ್ಷಿ ತೆಗೆದುಕೊಂಡಿದ್ದರು. ಕಪ್ಪು ಪಕ್ಷಿ ಅಂದರೆ, ಒಂದು ಕೋಳಿತರ. ಅಲ್ಲಿಂದ ಅವರಿಗೆ ಶುರುವಾಯ್ತು ತೊಂದರೆ. ಅದನ್ನು ಅವರು ತೆಗೆದುಕೊಳ್ಳಬಾರದಿತ್ತು. ಅದನ್ನು ತಿಳಿಸುವುದಕ್ಕೆ ನನಗೆ ದಾರಿ ಗೊತ್ತಿಲ್ಲ ಎಂದೆ. ಆಗ ಅಷ್ಟೇ ತಾನೇ ಅಂತ ತನ್ನ ಮನೆಯಿಂದಾನೇ ಫೋನ್ ಮಾಡಿದರು. ಆಗ ನಾನು ಅವರ ಸ್ನೇಹಿತನಿಗೆ ಹೇಳಿದ್ದನ್ನು ದರ್ಶನ್ ಅವರಿಗೆ ತಿಳಿಸಿದರು." ಎಂದು ಚಂದಾ ಪಾಂಡೆ ಅಮ್ಮಾಜಿ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

ಕೋಳಿನಾ ತೆಗೆಯಿರಿ ಅಂತ ಹೇಳಿದ ತಕ್ಷಣವೇ ದರ್ಶನ್ ಅದನ್ನು ಕಾರ್ಯಗತ ಮಾಡಿದರು. ಅದನ್ನು ಬಿಟ್ಟು ಸಣ್ಣ ಪುಟ್ಟ ತೊಂದರೆಗಳು, ದೋಷಗಳು ಇತ್ತು. ಅದಕ್ಕೆಲ್ಲ ಅವರು ಪರಿಹಾರವನ್ನು ಸೂಚಿಸಿದ್ದರು. ಅದೆಲ್ಲವನ್ನೂ ಅವರ ಕಡೆಯ ಒಬ್ಬ ವ್ಯಕ್ತಿಯನ್ನು ಕಳಿಸಿ ಪರಿಹಾರವನ್ನು ಮಾಡಿಸಿಕೊಂಡರು. ಆ ಬಳಿಕ ಮತ್ತೆ ನಾಲ್ಕೈದು ದಿನಗಳನ್ನು ಬಿಟ್ಟು ಅವರ ಸ್ನೇಹಿತರು ಅಮ್ಮಾಜಿ ಬಳಿ ಬಂದಿದ್ದರು. ಮುಂದೇನಾಯ್ತು ಕೇಳಿ.

Chanda Pandey Ammaji talks about Darshan car race and death threat

"ಅಮ್ಮಾಜಿ ದರ್ಶನ್ ಅವರು ದಸರಾದಲ್ಲಿ ಕಾರು ರೇಸ್‌ಗೆ ಹೋಗುತ್ತಿದ್ದಾರೆ ಅಂದಾಗ ನನಗೆ ಯಾಕೋ ಸ್ವಲ್ಪ ಭಯ ಆಯ್ತು. ಅವರಿಗೆ ಮೊದಲ ಅಪಘಾತವಾಗಿ ಕೈ ಮುರಿದಿತ್ತಲ್ಲ ಆ ಸಮಯದಲ್ಲಿ. ಆಗ ನಾನು ಆ ಕಾರಿನ ಫೋಟೋ ತೋರಿಸುವುದಕ್ಕೆ ಆಗುತ್ತಾ? ಅಂತ ಕೇಳಿದ ತಕ್ಷಣವೇ ಆ ಫೋಟೋವನ್ನು ತರಿಸಿಕೊಂಡರು. ಆ ಕಾರಿನ ಫೋಟೋ ನೋಡಿದ ತಕ್ಷಣವೇ ನನಗೆ ಕಂಡಿದ್ದು ಏನಂದರೆ, ಬಹಳ ಭಯಂಕರವಾದ ದೃಶ್ಯ. ಏನಂದ್ರೆ, ಅವರು ಆ ಕಾರು ರೇಸ್‌ಗೆ ಹೋಗಿದ್ದರೆ, ವಾಪಾಸ್ ಸಿಗುತ್ತಿರಲಿಲ್ಲ. ಗಂಡಾಂತರ ಜೋರಿತ್ತು. ಅಲ್ಲಿ ಸಾವಿನ ಛಾಯೆಯಿತ್ತು." ಎಂದು ಅಮ್ಮಾಜಿ ಹೇಳಿಕೊಂಡಿದ್ದಾರೆ.

ಆಗ ದರ್ಶನ್ ಅವರ ಸ್ನೇಹಿತರಿಗೆ ಅಮ್ಮಾಜಿ ಈ ರೇಸ್‌ಗೆ ಹೋಗುವುದು ಬೇಡ. ಹೋದರೆ ತುಂಬಾನೇ ದೊಡ್ಡ ತೊಂದರೆಗೆ ಒಳಗಾಗುತ್ತಾರೆ ಎಂದು ಹೇಳಿದ್ದರು. ಆಗ ಅವರ ಸ್ನೇಹಿತರು ಪಕ್ಷಿ ಬೇಡ, ಕಪ್ಪು ಬಣ್ಣದ ಪಕ್ಷಿಗಳ ಮಾಂಸದ ಸೇವನೆ ಕೂಡ ಬೇಡ ಅಂತ ಹೇಳುತ್ತಿದ್ದೀರ. ಈಗ ರೇಸ್‌ಗೂ ಹೋಗಬೇಡ ಅಂದರೆ, ಅವನು ಒಪ್ಪಲ್ಲ ಅಂತ ಅಂದಿದ್ದರು. ಆಗ ಅಮ್ಮಾಜಿ ತನ್ನ ಕಣ್ಣಿಗೆ ಗಂಡಾಂತರ ಕಂಡಿದೆ. ಅದನ್ನು ತಪ್ಪಿಸುತ್ತೇನೆ. ಆದರೆ, ನಾನು ದೇವರಲ್ಲ. ಸಣ್ಣದೊಂದು ಅಪಘಾತ ಆಗುತ್ತೆ ಅಂತ ಹೇಳಿದ್ದರಂತೆ. ಹೇಳಿದ ಒಂದು ವಾರದಲ್ಲಿ ಅಪಘಾತ ಆಗಿ ದರ್ಶನ್ ಬಲಗೈ ಮುರಿದಿತ್ತು ಎಂದು ಅಮ್ಮಾಜಿ ಹೇಳಿಕೊಂಡಿದ್ದಾರೆ.

More from Filmibeat

English summary
Chanda Pandey Ammaji talks about Darshan car race and death threat
Read more about: darshan sandalwood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X