'ಸಲಗ' ಬ್ಯೂಟಿ ಜೊತೆ ಕನ್ನಡ ರ್‍ಯಾಪರ್ ಮದುವೆ; ಸಂಜನಾಗೆ ಚಂದನ್ ಶೆಟ್ಟಿ 'ಸೂತ್ರಧಾರಿ'ಯಾಗಿದ್ದ ಗೊತ್ತೇ?
ಇತ್ತೀಚೆಗೆ 'ಸಲಗ' ಸಿನಿಮಾದ ನಟಿ ಸಂಜನಾ ಆನಂದ್ ಹಾಗೂ ಕನ್ನಡ ರ್‍ಯಾಪರ್ ಮದುವೆ ಸುದ್ದಿ ವೈರಲ್ ಆಗಿತ್ತು. ಇದ್ದಕ್ಕಿದ್ದ ಹಾಗೇ ಈ ಜೋಡಿ ಮದುವೆ ಮ್ಯಾಟರ್ ಯಾಕೆ ಅಷ್ಟೊಂದು ಸದ್ದು ಮಾಡಿತ್ತು? ಇದ್ದಕ್ಕಿದ್ದ ಹಾಗೇ ಈ ಜೋಡಿ ಬಗ್ಗೆ ಸುದ್ದಿ ಹಬ್ಬಿದ್ದು ಹೇಗೆ? ಅನ್ನೋದನ್ನು ಇಬ್ಬರ ಅಭಿಮಾನಿಗಳು ಹುಡುಕಾಡುವುದಕ್ಕೆ ಶುರು ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಿಂದ ತಾರೆಯರಿಗೆ ಎಷ್ಟು ಅನುಕೂಲ ಆಗಿದೆಯೋ? ಅಷ್ಟೇ ಅನಾನುಕೂಲ ಕೂಡ ಆಗಿದೆ. ಸಿನಿಮಾ ತಾರೆಯರ ಬಗ್ಗೆ ಇದೇ ಸೋಶಿಯಲ್ ಮೀಡಿಯಾಗಳಲ್ಲಿ ಅದೆಷ್ಟೋ ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಈ ಸುದ್ದಿಗಳನ್ನು ಜನರು ಕೂಡ ನಿಜ ಅಂತಲೇ ನಂಬಿ ಬಿಡುತ್ತಾರೆ.

ಸಂಜನಾ ಆನಂದ್ ಹಾಗೂ ಚಂದನ್ ಶೆಟ್ಟಿ ಮದುವೆ ಸುದ್ದಿ ಕೂಡ ಹೀಗೆ ಆಗಿತ್ತು. ಇಬ್ಬರೂ ಮದುವೆ ಆಗುತ್ತಾರೆ ಅನ್ನೋ ಸುದ್ದಿಯನ್ನು ಯಾರೋ ಕಿಡಿಗೇಡಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸಿದ್ದ. ಆ ಬಳಿಕ ಸ್ವತ: ಸಂಜನಾ ಆನಂದ್ ಅದೇ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೆ, ಈ ಜೋಡಿ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿದೆ. ಆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ ಅನ್ನೋ ಗೊತ್ತೇ?
ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ ಸಿನಿಮಾ 'ರಾಯಲ್' ರಿಲೀಸ್‌ಗೆ ರೆಡಿಯಾಗಿದೆ. ವಿರಾಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾದಲ್ಲಿ ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಸಿನಿಮಾದ ಪ್ರಚಾರ ಭರ್ಜರಿಯಾಗಿ ಆರಂಭ ಆಗಿದೆ.
ಸಂಜನಾ ಆನಂದ್ ನಟಿಸಿದ 'ರಾಯಲ್' ಸಿನಿಮಾ ಆರಂಭದ ಬೆನ್ನಲ್ಲೇ ಈ ಸುದ್ದಿ ಹಬ್ಬಿತ್ತು. ಸಂಜನಾ ಹಾಗೂ ಚಂದನ್ ಶೆಟ್ಟಿ ಮದುವೆ ಆಗುತ್ತಿದ್ದಾರೆ ಅಂತ ಪುಕಾರು ಹಬ್ಬಿತ್ತು. ಈ ಸುದ್ದಿ ಸ್ಯಾಂಡಲ್‌ವುಡ್‌ನಲ್ಲೂ ಸಂಚಲನ ಸೃಷ್ಟಿಸಿತ್ತು. ಅಷ್ಟರಲ್ಲೇ ಇದೊಂದು ಸುಳ್ಳು ಸುದ್ದಿ ಅಂತ ಸ್ವತ: ಸಂಜನಾ ಅವರೇ ಕ್ಲಾರಿಟಿ ಕೊಟ್ಟರು. ಇದೆಲ್ಲವನ್ನು ಬಿಟ್ಟು ನೋಡುವುದಾದರೆ, ಇವರಿಬ್ಬರೂ ಜೋಡಿಯಾಗಿ 'ಸೂತ್ರಧಾರಿ' ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ತೆರೆಮೇಲೆ ಆ ಕೆಮಿಸ್ಟ್ರಿಯನ್ನು ನೋಡಿ ಇಂತಹದ್ದೊಂದು ಹಬ್ಬಿಸಿದ್ದೂ ಇರಬಹುದು.

ಇನ್ನೂ ರಿಲೀಸ್ ಆಗಬೇಕಿರುವ 'ಸೂತ್ರಧಾರಿ' ಸಿನಿಮಾದಲ್ಲಿ ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ ಜೊತೆ ಸಂಜನಾ ಆನಂದ್ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಒಂದು ಹಾಡು ರಿಲೀಸ್ ಆಗಿದೆ. ಚಂದನ್ ನಾಯಕನಾಗಿ ನಟಿಸುವುದರ ಜೊತೆ ಸಂಗೀತ ನಿರ್ದೇಶಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋ ಆಗಿ ತೆರೆ ಮೇಲೆ ಗುರುತಿಸಿಕೊಳ್ಳಬೇಕು ಅನ್ನೋ ಉತ್ಸಾಹದಲ್ಲಿರುವ ಚಂದನ್‌ಗೆ 'ಸೂತ್ರಧಾರಿ' ಮೇಲೆ ಯಶಸ್ಸು ಕೊಡುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ.
ನವರಸನ್ ನಿರ್ಮಿಸಿರುವ 'ಸೂತ್ರಧಾರಿ' ಸಿನಿಮಾದ ಡ್ಯಾಶ್ ಸಾಂಗ್ ಒಂದು ವರ್ಷದ ಹಿಂದೆ ರಿಲೀಸ್ ಆಗಿತ್ತು. ಆ ಹಾಡಿನಲ್ಲಿ ಇಬ್ಬರ ಕೆಮಿಸ್ಟ್ರಿ ಕೂಡ ಗಮನ ಸೆಳೆದಿತ್ತು. ಇಬ್ಬರ ಫ್ಯಾನ್ಸ್ ಕೂಡ ಒಳ್ಳೆಯ ಜೋಡಿ ಅಂತಾನೇ ಹೇಳಿತ್ತು. ಈ ಹಾಡಿಗೆ ಯೂಟ್ಯೂಬ್‌ನಲ್ಲಿ ಸುಮಾರು 22 ಮಿಲಿಯನ್ ವೀವ್ಸ್ ಸಿಕ್ಕಿದೆ. ಈ ಮಧ್ಯೆ ವಿಚ್ಛೇದನದ ಬಳಿಕ ಚಂದನ್ ಶೆಟ್ಟಿ ಇದೇ ಸಿನಿಮಾದ ನಟಿ ಸಂಜನಾ ಆನಂದ್ ಅವರನ್ನು ವಿವಾಹವಾಗುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿಸಿದ್ದಾರೆ.


Click it and Unblock the Notifications











