ಡಿವೋರ್ಸ್ ಬಳಿಕ ಚಂದನ್ ಶೆಟ್ಟಿ ಬದುಕು ಹೇಗಿದೆ? ಮತ್ತೆ ಸರಿ ಹೋಗುತ್ತಾ ಕನ್ನಡ ರ್‍ಯಾಪರ್ ಕೌಟುಂಬಿಕ ಬದುಕು?

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಕಿತ್ತಾಡಿಕೊಳ್ಳದೆ, ಆರೋಪ-ಪ್ರತ್ಯಾರೋಪ ಮಾಡದೆ ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಇದ್ದ ಈ ಮುದ್ದು ಜೋಡಿ ಬೇರೆಯಾಗುತ್ತಿರುವ ಸುದ್ದಿ ಅವರನ್ನು ಇಷ್ಟ ಪಡುವವರಿಗೆ ನೋವುಂಟು ಮಾಡಿತ್ತು. ವಿಚ್ಛೇದನ ಪಡೆದ ಬಳಿಕ ಇಬ್ಬರೂ ಒಟ್ಟಿಗೆ ಬಂದು ಮಾಧ್ಯಮದ ಮುಂದೆ ಈ ವಿಷಯವನ್ನು ಬಹಿರಂಗ ಪಡಿಸಿದ್ದರು.

ಆ ವೇಳೆ ನಿವೇದಿತಾ ಗೌಡ ಆಗಲಿ, ಚಂದನ್ ಶೆಟ್ಟಿ ಆಗಲಿ ವಿಚ್ಛೇದನಕ್ಕೆ ಕಾರಣವನ್ನು ಬಹಿರಂಗ ಪಡಿಸಿಲ್ಲ. ಆದರೂ ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರೂ ವಿಚ್ಛೇದನ ನೀಡಿದ್ದರ ಬಗ್ಗೆ ಒಂದಿಷ್ಟು ವದಂತಿಗಳು ಹರಿದಾಡಿದ್ದವು. ಡಿವೋರ್ಸ್ ಬಳಿಕ ಚಂದನ್ ಶೆಟ್ಟಿ ನಟಿಸಿದ 'ಸೂತ್ರಧಾರ' ಅನ್ನೋದ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಚಂದನ್ ಶೆಟ್ಟಿಗೆ ವಿಚ್ಛೇದನ ಬಗ್ಗೆ ಒಂದಿಷ್ಟು ಪ್ರಶ್ನೆಗಳು ಎದುರಾಗಿದ್ದವು. ಈ ವೇಳೆನೂ ತುಂಬಾನೇ ಕೂಲ್ ಆಗಿ ಚಂದನ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.

Chandan Shetty revealed his life after his divorce with Niveditha Gowda and no plan for reunite

ಡಿವೋರ್ಸ್ ಬಳಿಕ ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಲೈಫ್ ಹೇಗಿದೆ? ಇನ್ನೂ ಇಬ್ಬರಲ್ಲಿ ಪ್ರೀತಿ ಉಳಿದಿದೆಯಾ? ಅನ್ನೋ ಪ್ರಶ್ನೆ ಎದ್ದಿತ್ತು. ಅದಕ್ಕೆ ಕಾರಣ ನಿವೇದಿತಾ ಗೌಡ ಹಾಗೂ ಚಂದನ್ ಒಟ್ಟಿಗೆ ನಟಿಸುತ್ತಿರುವ ಸಿನಿಮಾ 'ಮುದ್ದು ರಾಕ್ಷಸಿ'. ಈ ಸಿನಿಮಾ ಕ್ಲೈಮ್ಯಾಕ್ಸ್ ವೇಳೆ ನಿವೇದಿತಾ ಗೌಡ ಕಣ್ಣೀರು ಹಾಕಿದ್ದರು. ಹೀಗಾಗಿ ಮತ್ತೆ ಇಬ್ಬರಲ್ಲೂ ಆ ಪ್ರೀತಿ ಉಳಿದಿದೆಯೇ? ಎಂಬ ಅನುಮಾನ ಮೂಡಿತ್ತು. ಈ ವಿಚಾರಕ್ಕೆ ಚಂದನ್ ಶೆಟ್ಟಿ ಕ್ಲಾರಿಟಿ ಕೊಟ್ಟಿದ್ದಾರೆ.

ಮಾಜಿ ಪತ್ನಿ ನಿವೇದಿತಾ ಗೌಡ ಮುದ್ದು ರಾಕ್ಷಸಿ ಸೆಟ್ಟಿನಲ್ಲಿ ಕಣ್ಣೀರು ಹಾಕಿದ್ದದರು. ಅದಕ್ಕೆ ಚಂದನ್ ಕ್ಲಾರಿಟಿ ಕೊಟ್ಟಿದ್ದಾರೆ. "ನಿವೇದಿತಾ ಅವರು ಪ್ರಾಜೆಕ್ಟ್ ಮುಗಿದಿದ್ದಕ್ಕೆ ಅತ್ತಿದ್ದರು. ಅದಕ್ಕೆ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ. ಅದರಲ್ಲಿ ಪ್ರೀತಿಯಿದೆ ಅಂತ ನನಗೇನು ಅನಿಸುತ್ತಿಲ್ಲ. ಪ್ರೀತಿ ಇದೆ ಅಂತ ಏನಾದರೂ ಹೇಳಿದ್ದರೆ, ಏನೋ ಒಂದು ಮಾತುಕತೆ ಮಾಡಬಹುದಿತ್ತು. ಸಿನಿಮಾ ಮುಗಿಯುತ್ತಿರುವುದರಿಂದ ಬೇಜಾರಾಯ್ತು ಅಂತ ಅವರೇ ಹೇಳಿದ್ದಾರೆ. ಹಾಗಾಗಿ ಅಂತಹದ್ದೇನು ಇಲ್ಲ" ಎಂದು ಚಂದನ್ ಶೆಟ್ಟಿ ಟಿವಿ 9ಗೆ ಪ್ರತಿಕ್ರಿಯೆ ನೀಡಿದ್ದಾರೆ.

Chandan Shetty revealed his life after his divorce with Niveditha Gowda and no plan for reunite

ಹಾಗೇ ಡಿವೋರ್ಸ್ ಬಳಿಕ ನಿವೇದಿತಾ ಗೌಡಗೆ ತನ್ನ ಅವಶ್ಯಕತೆ ಇಲ್ಲ ಎಂದೂ ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ ಹೇಳಿಕೊಂಡಿದ್ದಾರೆ. "ಅವರಿಗೆ ನನ್ನ ಅವಶ್ಯಕತೆ ಇದೆ ಅಂತ ಅನಿಸುತ್ತಿಲ್ಲ. ಇದ್ದಿದ್ದರೆ ಇಷ್ಟೊತ್ತಿಗಾಗಲೇ ಹೇಳಬೇಕಿತ್ತು. ಅವರಿಂದ ಯಾವುದೇ ರೀತಿಯಾದಂತಹ ಮೆಸೇಜ್ ಆಗಿರಬಹುದು, ಕಾಲ್ ಆಗಿರಬಹುದು ಬಂದಿಲ್ಲ. ಹಾಗಾಗಿ ಪ್ರೀತಿ ಇನ್ನೂ ಇದೆ ಅಂತಹದ್ದೇನು ಇಲ್ಲ" ಎಂದು ಚಂದನ್ ಶೆಟ್ಟಿ ಫಸ್ಟ್ ನ್ಯೂಸ್‌ ಬಳಿ ಹೇಳಿಕೊಂಡಿದ್ದಾರೆ.

Take a Poll

ಚಂದನ್ ಹಾಗೂ ನಿವೇದಿತಾ ಇಬ್ಬರೂ ವೈವಾಹಿಕ ಜೀವನದಲ್ಲಿ ಖುಷಿಯಾಗಿಲ್ಲ ಅನ್ನೋದು ಅವರ ಪೋಷಕರಿಗೆ ಗೊತ್ತಾಗಿತ್ತು. ಮಕ್ಕಳ ಗೋಳಾಟ ನೋಡಲಾಗದೆ. ಚಂದನ್ ಶೆಟ್ಟಿ ಪೋಷಕರೇ ವಿಚ್ಛೇದನಕ್ಕೆ ಅನುಮತಿ ನೀಡಿದ್ಡರಂತೆ. "ಅಪ್ಪ ಅಮ್ಮನಿಗೆ ಏನೂ ಹೇಳಿಕೊಂಡಿರಲಿಲ್ಲ. ಅವರಿಗೆ ನಾನು ಖುಷಿಯಾಗಿಲ್ಲ ಅನ್ನೋದು ಗೊತ್ತಾಗುತ್ತಿತ್ತು. ಪ್ರತಿಯೊಬ್ಬ ತಾಯಿಗೂ ಅವರ ಮಗ ಮಗಳು ಖುಷಿಯಾಗಿಲ್ಲ ಅಂದರೆ, ಅದು ಸುಲಭವಾಗಿ ಗೊತ್ತಾಗಿ ಬಿಡುತ್ತೆ. ಅವರ ಮುಖ, ಎಕ್ಸ್‌ಪ್ರೆಷನ್ ನೋಡಿದರೇನೆ ಗೊತ್ತಾಗುತ್ತೆ. ನನ್ನನ್ನು ಹಾಗೆ ನೋಡಿ ನೋಡಿ, ಆಗಿಲ್ಲ ಅಂದರೆ ಇಬ್ಬರೂ ಬಿಟ್ಟು ಬಿಡಿ ಅಂದರು. ಅವರ ಸಪೋರ್ಟ್‌ನಿಂದಲೇ ಈ ನಿರ್ಧಾರವನ್ನು ತೆಗೆದುಕೊಂಡೆವು." ಎಂದು ಚಂದನ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ವಿಚ್ಚೇದನದ ಬಳಿಕ ಚಂದನ್ ಶೆಟ್ಟಿ ಬದುಕು ಹೇಗಿದೆ? ನಿವೇದಿತಾ ಗೌಡರಿಂದ ಬೇರೆಯಾದ ಬಳಿಕ ಚಂದನ್ ಶೆಟ್ಟಿ ಖುಷಿಯಾಗಿದ್ದಾರಾ? ಇದೆಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. "ಈಗ ತುಂಬಾನೇ ಚೆನ್ನಾಗಿದೆ. ಈಗ ತುಂಬಾನೇ ಟೈಮ್ ಇದೆ. ಫೋಕಸ್ ಮಾಡುವುದಕ್ಕೆ ಆಗುತ್ತಿದೆ. ಹೊರಗಡೆ ಕರೆದುಕೊಂಡು ಹೋಗಬೇಕು. ಅದು ಮಾಡಬೇಕು, ಇದು ಮಾಡಬೇಕು. ಹೊರಗಡೆ ಕರೆದುಕೊಂಡು ಹೋಗಬೇಕು. ಅಲ್ಲೇನೋ ಕೊಡಿಸಬೇಕು. ಟ್ರಿಪ್ ಕರೆದುಕೊಂಡು ಹೋಗಬೇಕು. ಈಗ ಅದ್ಯಾವುದೂ ಇಲ್ಲ. ನಾನೊಬ್ಬನೇ ಇದ್ದೀನಿ ಅಷ್ಟೇನೆ. ಈಗ ನೂರಕ್ಕೆ ನೂರರಷ್ಟು ನನ್ನ ಲೈಫ್‌ಗೆ ಹಾಗೂ ನನ್ನ ಕೆಲಸಕ್ಕೆ ಕೊಡುತ್ತಿದ್ದೇನೆ ಅಷ್ಟೇ" ಎಂದು ಚಂದನ್ ಶೆಟ್ಟಿ ಬಾಸ್ ಟಿವಿ ಯೂಟ್ಯೂಬ್‌ ಚಾನೆಲ್‌ ನೀಡಿದ ಸಂದರ್ಶನದಲ್ಲಿ ವಿಚ್ಛೇದನಕ್ಕೆ ಅಸಲಿ ಕಾರಣವವೇನು ಅನ್ನೋದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

More from Filmibeat

English summary
Chandan Shetty revealed his life after his divorce with Niveditha Gowda and no plan for reunite;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X