ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 'ಚಂದನವನದ ಚಿಲುಮೆಗಳು' ದ್ವಿಭಾಷಾ ಪುಸ್ತಕ ರಿಲೀಸ್
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಕನ್ನಡ ಚಿತ್ರರಂಗಕ್ಕೆ ಸಂಬಂಧ ಪಟ್ಟಂತೆ ಹೊಸ ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತೆ. ಸದ್ಯಕ್ಕೀಗ ಎರಡು ಹೊಚ್ಚ ಹೊಸ ಪುಸ್ತಕಗಳನ್ನು ರಿಲೀಸ್ ಮಾಡಿದೆ. 'ಚಂದನವನದ ಚಿಲುಮೆಗಳು' ಹಾಗೂ 'Landmarks of Sandalwood'ಎಂಬ ಎರಡು ಪುಸ್ತಕಗಳು ಬಿಡುಗಡೆಯಾಗಿವೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಎರಡು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಂದ್ಹಾಗೆ ಈ ಪುಸ್ತಕವನ್ನು ಕನ್ನಡ ಭಾಷೆಯಲ್ಲಿ ಡಾ.ಶರಣು ಹುಲ್ಲೂರು ಬರೆದಿದ್ದರೆ. ಇನ್ನೊಂದು ಕಡೆ ಇಂಗ್ಲಿಷ್‌ನಲ್ಲಿ ಎಸ್.ಶ್ಯಾಮ್ ಪ್ರಸಾದ್ 'Landmarks of Sandalwood'ಪುಸ್ತಕ ಬರೆದಿದ್ದಾರೆ. ಈ ದ್ವಿಭಾಷಾ ಪುಸ್ತಕವನ್ನು ಕನ್ನಡ ಚಿತ್ರರಂಗದ ದಿಗ್ಗಜರು ರಿವೀಲ್ ಮಾಡಿದ್ದಾರೆ.

ಈ ಎರಡು ಪುಸ್ತಕಗಳನ್ನು ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಹಂಸಲೇಖ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ ಟಿ.ಎಸ್.ನಾಗಾಭರಣ ಹಾಗೂ ರೋರಿಂಗ್ ಸ್ಟಾರ್ ನಟ ಶ್ರೀಮುರುಳಿ ಮತ್ತು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಸೇರಿ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ.
'ಚಂದನವನದ ಚಿಲುಮೆಗಳು' ಹಾಗೂ 'Landmarks of Sandalwood'ಎರಡು ಪುಸ್ತಕಗಳನ್ನು ಬಿಡುಗಡೆ ಮಾಡುವುದಕ್ಕೆ ಹಿನ್ನೆಲೆಯಿದೆ. ಕನ್ನಡ ಚಲನಚಿತ್ರರಂಗ 90 ವರ್ಷ ಪೂರೈಸಿದೆ ಹಿನ್ನೆಲೆಯಲ್ಲಿ ಈ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅಪರೂಪದ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದೆ.
ಈ ಪುಸ್ತಕದಲ್ಲಿ ಕನ್ನಡ ಚಿತ್ರರಂಗಕ್ಕೆ ತಿರುವು ನೀಡಿರುವ ಸುಮಾರು 90 ಸಿನಿಮಾಗಳ ವಿಶೇಷ ದಾಖಲೆ ಮತ್ತು ಅಪರೂಪದ ಫೋಟೋಗಳು ಇವೆ. ಅಂದ್ಹಾಗೆ ಇದು ಕನ್ನಡ ಸಿನಿಮಾರಂಗದ ಕುರಿತು ದ್ವಿಭಾಷೆಯಲ್ಲಿ ಬಂದ ಕನ್ನಡದ ಮೊದಲ ಕಾಫಿ ಟೇಬಲ್ ಪುಸ್ತಕ ಎಂದು ಲೇಖಕರು ಹೇಳಿದ್ದಾರೆ. ಸಿನಿಮಾ ಆಸಕ್ತರಿಗೆ ಈ ಎರಡು ಪುಸ್ತಕಗಳನ್ನು ಹೊರತರುವುದಕ್ಕೆ ಪತ್ರಕರ್ತರು ಹಾಗೂ ಲೇಖಕರಾದ ಡಾ. ಶರಣು ಹುಲ್ಲೂರು ಮತ್ತು ಎಸ್. ಶ್ಯಾಮ್ ಪ್ರಸಾದ್ ಸುಮಾರು ಆರೇಳು ತಿಂಗಳುಗಳಿಂದ ಶ್ರಮವಹಿಸಿದ್ದಾರೆ.

"ಪುಸ್ತಕ ರೂಪದಲ್ಲಿ ಸಿನಿಮಾ ಕುರಿತಾದ ವಿಷಯಗಳು ಕನ್ನಡದಲ್ಲಿ ವಿರಳ, ದಾಖಲೀಕರವೂ ಇಲ್ಲ. ಅದು ಕನ್ನಡದಲ್ಲಿ ಆಗಲಿ" ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದರೆ, "ಸಿನಿಮಾ ಪಠ್ಯಗಳ ಜರೂರತ್ತು ಇದೆ. ಅದು ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಮೂಲಕ ಆಗಿರುವುದಕ್ಕೆ ಅಭಿನಂದನೆ ಹೇಳಬೇಕು. ಈ ಪುಸ್ತಕ ಎಲ್ಲರ ಮನೆಯಲ್ಲೂ ಇರಲಿ" ಎಂದು ಹಿರಿಯ ನಿರ್ದೆಶಕ ಟಿ.ಎಸ್. ನಾಗಾಭರಣ ಹೇಳಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದಿದ್ದ ಶ್ರೀಮುರಳಿ ಗಾನಯೋಗಿ ಪಂಚಾಕ್ಷರಿ ಗವಾಯಿ ಸಿನಿಮಾದ ಗೀತೆ ಹಾಡಿ ರಂಜಿಸಿದರೆ, ಡಾ.ರಾಜಕುಮಾರ ಕಿಡ್ನ್ಯಾಪ್ ಸೇರಿದಂತೆ ತಮ್ಮ ಬಾಲ್ಯದ ಸಿನಿಮಾ ಕುರಿತು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ನೆನಪಿಸಿಕೊಂಡಿರು.


Click it and Unblock the Notifications











