ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ; ದರ್ಶನ್, ರಕ್ಷಿತ್ ಶೆಟ್ಟಿ ಸಿನಿಮಾಗೆ ಭರ್ಜರಿ ಪ್ರಶಸ್ತಿ

ಸ್ಯಾಂಡಲ್‌ವುಡ್‌ನ ಸಿನಿಮಾ ಪತ್ರಕರ್ತರೇ ಹುಟ್ಟುಹಾಕಿದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 5ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಹಾಗೂ ರಕ್ಷಿತ್ ಶೆಟ್ಟಿಯ 'ಸಪ್ತ ಸಾಗರದಾಚೆ ಎಲ್ಲೋ' ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. 'ಕಾಟೇರ'ಗೆ 7 ಪ್ರಶಸ್ತಿ ಹಾಗೂ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನಾಲ್ಕು ಪ್ರಶಸ್ತಿ ಬಂದಿದೆ.

'ಶಿವಾಜಿ ಸುರತ್ಕಲ್ 2' ಸಿನಿಮಾ ಅಭಿನಯಕ್ಕಾಗಿ ನಟ ರಮೇಶ್ ಅರವಿಂದ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ನಟನೆಗಾಗಿ ರುಕ್ಮಿಣಿ ವಸಂತ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೇ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ಚೊಚ್ಚಲ ನಿರ್ಮಾಣಕ್ಕಾಗಿ ಪುನೀತ್ ರಾಜ್‌ಕುಮಾರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Chandanavana film critics awards 2023

'ಕಾಟೇರ' ಸಿನಿಮಾ ಅತೀ ಹೆಚ್ಚು ಪ್ರಶಸ್ತಿಯನ್ನು ಬಾಚಿಕೊಂಡಿದೆ. ತರುಣ್ ಕಿಶೋರ್ ನಿರ್ದೇಶನದ 'ಕಾಟೇರ' 2023ರ ಅತ್ಯುತ್ತಮ ಚಲನಚಿತ್ರ, ತರುಣ್ ಕಿಶೋರ್ ಸುಧೀರ್‌ ಅತ್ಯುತ್ತಮ ನಿರ್ದೇಶಕ (ಕಾಟೇರ), ನಟಿ ಆರಾಧನಾ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ (ಕಾಟೇರ), ಶ್ರುತಿ ಅತ್ಯುತ್ತಮ ಪೋಷಕ ನಟಿ (ಕಾಟೇರ), ತರುಣ್ ಕಿಶೋರ್ ಹಾಗೂ ಜಡೇಶ್ ಕೆ. ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ (ಕಾಟೇರ) ಭಾಜನರಾದರು. ಮಾಸ್ತಿಗೆ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ (ಕಾಟೇರ) 'ಪಸಂದಗಾವ್ನೆ' ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಪ್ರಶಸ್ತಿ (ಕಾಟೇರ) ಲಭಿಸಿದೆ.

ಸ್ಯಾಂಡಲ್‌ವುಡ್ ಹಿರಿಯ ಸಂಗೀತ ಸಂಯೋಜಕ ಹಾಗೂ ಗೀತರಚನೆಕಾರ ಹಂಸಲೇಖ ಅವರು ಅಕಾಡೆಮಿ ನಡೆಸುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಂದನವನ ಹೆಸರಿಟ್ಟಿರುವುದಕ್ಕೆ ಸಂತಸ ಪಟ್ಟರು. ಇದೇ ವೇಳೆ ಎಂಟು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡದ ಹೆಮ್ಮೆಯ ನಿರ್ದೇಶಕ ಪಿ.ಶೇಷಾದ್ರಿ, ನಟಿಯರಾದ ಮಾಲಾಶ್ರೀ ಮತ್ತು ಪ್ರೇಮಾ, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಮತ್ತು ಕೆಎಫ್‌ಸಿಸಿ ಅಧ್ಯಕ್ಷ ಎನ್‌ಎಂ ಸುರೇಶ್‌ರಂತಹ ದಿಗ್ಗಜರು ಕಾರ್ಯಕ್ರಮಕ್ಕೆ‌ ಸಾಕ್ಷಿಯಾದರು.

ಅಂದ್ಹಾಗೆ, 2023ರಲ್ಲಿ 200ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ರಿಲೀಸ್ ಆಗಿದ್ದವು. ಇವುಗಳ ಪೈಕಿ ಸುಮಾರು 25 ಪ್ರಶಸ್ತಿಗಳನ್ನು 50ಕ್ಕೂ ಹೆಚ್ಚು ಸಿನಿಮಾ ಪತ್ರಕರ್ತರು ಹಾಗೂ ವಿಮರ್ಶಕರು ಆಯ್ಕೆ ಮಾಡಿದ್ದಾರೆ.

Chandanavana film critics awards 2023


ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ

ಅತ್ಯುತ್ತಮ ಚಿತ್ರ: ಕಾಟೇರ
ಅತ್ಯುತ್ತಮ ನಿರ್ದೇಶಕ: ತರುಣ್ ಕಿಶೋರ್ ಸುಧೀರ್ (ಕಾಟೇರ)
ಅತ್ಯುತ್ತಮ ನಟ:ರಮೇಶ್ ಅರವಿಂದ್ (ಶಿವಾಜಿ ಸುರತ್ಕಲ್ 2)
ಅತ್ಯುತ್ತಮ ನಟಿ:ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ)
ಅತ್ಯುತ್ತಮ ಪೋಷಕ ನಟ:ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ)
ಅತ್ಯುತ್ತಮ ಪೋಷಕ ನಟಿ:ಶ್ರುತಿ (ಕಾಟೇರ)
ಅತ್ಯುತ್ತಮ ಬಾಲ ಕಲಾವಿದೆ:ನಮನ (ಗೌಳಿ)
ಅತ್ಯುತ್ತಮ ಚಿತ್ರಕಥೆ:ತರುಣ್ ಕಿಶೋರ್ - ಜದೇಶ್ ಕೆ (ಕಾಟೇರ)
ಅತ್ಯುತ್ತಮ ಸಂಭಾಷಣೆಗಳು: ಮಾಸ್ತಿ (ಕಾಟೇರ)
ಅತ್ಯುತ್ತಮ ಸಂಗೀತ ನಿರ್ದೇಶಕ: ವಿ. ಹರಿಕೃಷ್ಣ (ಕ್ರಾಂತಿ)
ಅತ್ಯುತ್ತಮ ಸಾಹಿತ್ಯ: ಜಯಂತ್ ಕಾಯ್ಕಿಣಿ (ಕೌಸಲ್ಯ ಸುಪ್ರಜಾ ರಾಮ -ಪ್ರೀತಿಸುವೆ)
ಅತ್ಯುತ್ತಮ ಬಿಜಿಎಂ: ಕದ್ರಿ ಮಣಿಕಾಂತ್ (ವಿರಾಟಪುರ ವಿರಾಗಿ)
ಅತ್ಯುತ್ತಮ ಮಹಿಳಾ ಗಾಯಕಿ: ಸಂಗೀತಾ ಕಟ್ಟಿ (ಪೆಂಟಗನ್ - ಕಾಯೋ ಶಿವ)
ಅತ್ಯುತ್ತಮ ಪುರುಷ ಗಾಯಕ: ರವೀಂದ್ರ ಸೋರಗಾವಿ (ವಿರಾಟಪುರ ವೀರಾಗಿ - ನೋಡಲಾಗದೆ)
ಅತ್ಯುತ್ತಮ ಚೊಚ್ಚಲ ನಿರ್ಮಾಪಕ - ಪುನೀತ್ ರಾಜ್‌ಕುಮಾರ್ ಪ್ರಶಸ್ತಿ: ರಮ್ಯಾ, ಸ್ವಾತಿ ಮುತ್ತಿನ ಮಳೆ ಹನಿಯೇ
ಅತ್ಯುತ್ತಮ ಚೊಚ್ಚಲ ನಟಿ - ತ್ರಿಪುರಾಂಬ ಪ್ರಶಸ್ತಿ: ಆರಾಧನಾ (ಕಾಟೇರ)
ಅತ್ಯುತ್ತಮ ಚೊಚ್ಚಲ ನಟ -ಸಂಚಾರಿ ವಿಜಯ್ ಪ್ರಶಸ್ತಿ: ಶಿಶಿರ್ ಬೈಕಾಡಿ, 'ಡೇರ್‌ಡೆವಿಲ್ ಮುಸ್ತಫಾ'
ಅತ್ಯುತ್ತಮ ಚೊಚ್ಚಲ ಬರಹಗಾರ -ಚಿ. ಉದಯಶಂಕರ್ ಪ್ರಶಸ್ತಿ: ನಿತಿನ್ ಕೃಷ್ಣಮೂರ್ತಿ, 'ಹಾಸ್ಟೆಲ್ ಹುಡಗರು ಬೇಕಾಗಿದ್ದಾರೆ'
ಅತ್ಯುತ್ತಮ ಚೊಚ್ಚಲ ನಿರ್ದೇಶಕ -ಶಂಕರ್ ನಾಗ್ ಪ್ರಶಸ್ತಿ: ಶಶಾಂಕ್ ಸೋಗಲ್,'ಡೇರ್‌ಡೆವಿಲ್ ಮುಸ್ತಫಾ'
ಅತ್ಯುತ್ತಮ VFX: ಅಸೂ ಸ್ಟುಡಿಯೋಸ್, ಮೊಹಮ್ಮದ್ ಅಬ್ದಿ (ಘೋಸ್ಟ್)
ಅತ್ಯುತ್ತಮ ಕಲಾ ನಿರ್ದೇಶಕ: ಧರಣಿ ಗಂಗೆಪುತ್ರ (ಕೈವಾ)
ಅತ್ಯುತ್ತಮ ಸಾಹಸ ನಿರ್ದೇಶಕ: ವಿಕ್ರಮ್ ಮೋರ್ (ಸಪ್ತ ಸಾಗರದಾಚೆ ಎಲ್ಲೋ)
ಅತ್ಯುತ್ತಮ ಛಾಯಾಗ್ರಹಣ: ಅದ್ವೈತ ಗುರುಮೂರ್ತಿ (ಸಪ್ತ ಸಾಗರದಾಚೆ ಎಲ್ಲೋ)
ಅತ್ಯುತ್ತಮ ಸಂಕಲನ: ಕೆ ಎಂ ಪ್ರಕಾಶ್ (ಕೈವ)
ಅತ್ಯುತ್ತಮ ನೃತ್ಯ ಸಂಯೋಜನೆ: ಭೂಷಣ್ (ಕಾಟೆರಾ-ಪಸಂದಗವ್ನೆ)

More from Filmibeat

English summary
Chandanavana film critics awards Darshan Kaatera Rakshit shetty SSE got more awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X