"ಪವಿತ್ರಾ ಜಯರಾಂಗೆ ನನ್ನ ಗಂಡ ಆರನೆಯವನು.. ನನ್ನ ಪತಿ ನನಗೆ ಮೋಸ ಮಾಡಿ ಹೋದ"; ಚಂದ್ರಕಾಂತ್ ಪತ್ನಿ!
ಕನ್ನಡದ ನಟಿ ಪವಿತ್ರಾ ಜಯರಾಂ ಇತ್ತೀಚೆಗೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಕೆ ಸಾವಿನ ನೋವಿನಲ್ಲಿಯೇ ಪವಿತ್ರಾ ಜಯರಾಂ ಗೆಳೆಯ ಚಂದ್ರಕಾಂತ್ ಆತ್ಮಹತ್ಯೆಗೆ ಶರಣರಾಗಿರುವ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಅದಾಗಲೇ ಶಿಲ್ಪಾ ಎಂಬುವವರೊಂದಿಗೆ ಚಂದ್ರಕಾಂತ್ ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.
ಆತ್ಮಹತ್ಯೆಗೆ ಶರಣಾದ ಚಂದ್ರಕಾಂತ್ ಪತ್ನಿ ಶಿಲ್ಪಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಪವಿತ್ರಾ ಹಾಗೂ ತಮ್ಮ ಪತಿ ಇಬ್ಬರು ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ತನ್ನ ಪತಿಯ ಬಾಳಲ್ಲಿ ಪವಿತ್ರಾ ಜಯರಾಂ ಪ್ರವೇಶ ಆದ ಮೇಲೆ ನನ್ನ ಸಂಸಾರ ಹಾಳಾಯಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ತೆಲುಗು ಮಾಧ್ಯಮಗಳು ಕಿರುತೆರೆ ನಟ ಚಂದ್ರಕಾಂತ್ ಉರ್ಫ್ ಚಂದು ಆತ್ಮಹತ್ಯೆ ಬಗ್ಗೆ ಪತ್ನಿ ಶಿಲ್ಪಾ ಅವರ ಪ್ರತಿಕ್ರಿಯೆ ಪಡೆಯುವುದಕ್ಕೆ ಹೋಗಿದ್ದರು. ಆ ವೇಳೆ ಕನ್ನಡದ ನಟಿ ಪವಿತ್ರಾ ಜಯರಾಂ ವಿರುದ್ಧ ಚಂದು ಪತ್ನಿ ಶಿಲ್ಪಾ ಹಲವು ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ.
'ತ್ರಿನಯನಿ' ಅನ್ನುವ ಧಾರಾವಾಹಿಯಲ್ಲಿ ಪವಿತ್ರಾ ಜಯರಾಂ ಹಾಗೂ ಚಂದ್ರಕಾಂತ್ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದರು. ಅಲ್ಲಿಂದ ಇಬ್ಬರೂ ಆತ್ಮೀಯರಾಗಿದ್ದರು ಎನ್ನಲಾಗಿದೆ. ಅಲ್ಲದೆ ಹೈದರಾಬಾದ್‌ನಲ್ಲಿ ಪವಿತ್ರಾ ಜಯರಾಂ ಹಾಗೂ ಚಂದ್ರಕಾಂತ್ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದು, ಅದೇ ಮನೆಯಲ್ಲಿಯೇ ಚಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಚಂದ್ರಕಾಂತ್ ಬಾಳಲ್ಲಿ ಪವಿತ್ರಾ ಬಂದ್ಮೇಲೆ ತನ್ನ ಜೀವನ ಹಾಳಾಯ್ತು ಎಂದು ಹೇಳಿದ್ದಾರೆ. "ಚಂದ್ರಕಾಂತ್ ಹಾಗೂ ನಾನು ಪ್ರೀತಿ ಮಾಡುತ್ತಿದ್ದೆವು. ನಮ್ಮ ಮದುವೆಗೆ ಮನೆಯವರು ಒಪ್ಪಿಗೆ ಇರಲಿಲ್ಲ. ಆದರೂ, ಅವರ ವಿರೋಧದ ನಡುವೆ ನಾನು ಮದುವೆಯಾದೆ. ಮದುವೆ ಬಳಿಕೆ ನನಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ನಾನು ಮನೆಯವರಿಗೆ ತಿಳಿಸಲಿಲ್ಲ. ನನ್ನ ಗಂಡ ಮನೆ ಬಾರದೆ ಇದ್ದರೂ ನಾನು ಮಕ್ಕಳನ್ನು ಸಾಕಿದ್ದೇನೆ." ಎಂದು ಮೃತ ಚಂದ್ರಕಾಂತ್ ಪತ್ನಿ ಶಿಲ್ಪಾ ಹೇಳಿಕೊಂಡಿದ್ದಾರೆ.
"ಪವಿತ್ರಾ ಹಾಗೂ ನನ್ನ ಪತಿ ರಿಲೇಶನ್‌ಶಿಪ್‌ನಲ್ಲಿ ಇರುವ ವಿಷಯ ನನಗೆ ಗೊತ್ತಿತ್ತು. ಲಾಕ್‌ಡೌನ್‌ನಿಂದ ಇಬ್ಬರೂ ಒಟ್ಟಿಗೆ ಇರಲು ಶುರು ಮಾಡಿದ್ದರು. ಆ ಬಳಿಕ ಚಂದ್ರಕಾಂತ್ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು. ಹೀಗಾಗಿ ಚಂದ್ರಕಾಂತ್ ನನಗೆ ಹಿಂಸೆ ನೀಡುತ್ತಿದ್ದರು. ಕುಡಿದು ಬಂದು ಗಲಾಟೆ ಮಾಡುತ್ತಿದ್ದರು." ಎಂದು ಶಿಲ್ಪಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ಸಂದರ್ಶನದಲ್ಲಿ "ನಮ್ಮ ಸಂಸಾರ ತುಂಬಾನೇ ಚೆನ್ನಾಗಿತ್ತು. ಚಂದ್ರಕಾಂತ್ ಬಾಳಲ್ಲಿ ಪವಿತ್ರಾ ಬಂದ್ಮೇಲೆ ಸಮಸ್ಯೆ ಶುರುವಾಗಿತ್ತು. ಮನೆಗೆ ಬರೋದು ಅಪರೂಪ ಆಗಿತ್ತು. ಪವಿತ್ರಾ ಜಯರಾಂ ಸಾಯುವುದಕ್ಕೆ ನಾಲ್ಕು ದಿನ ಮುನ್ನವಷ್ಟೇ ಅವರು ಊಟಿ ಹೋಗಿದ್ದರು. ಅಲ್ಲಿಂದಲೇ ರೀಲ್ಸ್ ಮಾಡಿದ್ದರು. ಪವಿತ್ರಾ ಸಾವಿನ ಬಳಿಕ ನನ್ನ ಮಕ್ಕಳಿಗಾಗಿ ಚಂದ್ರಕಾಂತ್ ಅನ್ನು ಕ್ಷಮಿಸಿದ್ದೆ." ಎಂದು ಶಿಲ್ಪಾ ಹೇಳಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ನಟಿ ಪವಿತ್ರಾ ಜಯರಾಂ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. "ಪವಿತ್ರಾ ಜಯರಾಂಗೆ ನನ್ನ ಪತಿ ಚಂದು ಆರನೇಯವನು. ನನ್ನ ಪತಿ ಇಂತಹವರಿಗಾಗಿ ಜೀವ ಕಳೆದುಕೊಂಡಿದ್ದಾನೆ. ನನಗೆ ಅನ್ಯಾಯ ಮಾಡಿ ಚಂದ್ರಕಾಂತ್ ಹೊರಟು ಹೋಗಿದ್ದಾರೆ" ಎಂದು ಪತ್ನಿ ಶಿಲ್ಪಾ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.


Click it and Unblock the Notifications











