ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
ದರ್ಶನ್ ಜೊತೆ ಅಭಿಮಾನಿಗಳ ಸಂಬಂಧ ಹೇಗಿದೆ? ಅನ್ನೋದನ್ನು ಹೇಳಬೇಕಿಲ್ಲ. ಹಾಗೇ ಅವರ ಅಭಿಮಾನಿಗಳು ಕೂಡ ದರ್ಶನ್ ಅಂದರೆ ಪ್ರಾಣ ಬಿಡುತ್ತಾರೆ. ಆಮಟ್ಟಿಗೆ ಅಭಿಮಾನ ತೋರುತ್ತಾರೆ. 'ಕ್ರಾಂತಿ' ಸಂದರ್ಶನದ ವೇಳೆ ತನ್ನ ವಿಶೇಷ ಚೇತನ ಅಭಿಮಾನಿ ಚಾಟ್ಸ್ ಸೆಂಟರ್ ಮಾಡಿ ಜೀವನ ನಡೆಸುತ್ತಿರುವುದನ್ನು ನೆನೆದು ಗುಣಗಾನ ಮಾಡಿದ್ದರು. ಅದೊಂದು ಮಾತು ಆತನ ಜೀವನವನ್ನೇ ಬದಲಿಸಿದೆ.
ಬೆಂಗಳೂರಿನ ನಾಗರಭಾವಿ ಸಮೀಪ ವೀರೇಶ್ ಎನ್ನವವರು ಚಾಟ್ಸ್ ಸೆಂಟರ್ ನಡೆಸಿ ಜೀವನ ಮಾಡುತ್ತಿದ್ದಾರೆ. ಈ ಚಾಟ್ಸ್ ಸೆಂಟರ್ ಹೆಸರೇ ಹೊಟ್ಟೆ ಪಾಡು ಚಾಟ್ಸ್. ಇದೇ ಚಾಟ್ಸ್ ಸೆಂಟರ್ ಬಗ್ಗೆ, ವಿಶೇಷ ಚೇತನ ಅಭಿಮಾನಿ ಬಗ್ಗೆ 'ಕ್ರಾಂತಿ' ರಿಲೀಸ್ ವೇಳೆ ಚಾಲೆಂಜಿಂಗ್ ಸ್ಟಾರ್ ಮಾತಾಡಿದ್ದರು. ಅದಕ್ಕೀಗ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

'ಕ್ರಾಂತಿ' ಸಿನಿಮಾದ ಸಂದರ್ಶನದ ವೇಳೆ " ಅವನೊಬ್ಬ ವಿಶೇಷ ಚೇತನ ಅಭಿಮಾನಿ. ಹೊರಗಡೆ ಹೋಗಿ ಭಿಕ್ಷೆ ಬೇಡದೆ ಪಾನಿಪೂರಿ ಇಟ್ಟುಕೊಂಡು ದುಡಿಯುತ್ತಿದ್ದಾನಲ್ಲ ಅವನು ಗ್ರೇಟ್. ಅವನನ್ನು ಹುಡುಕಿಕೊಂಡು ಹೋಗಿ ನಾವೆಲ್ಲ ತಿಂದರೆ, ಅವನು ಇನ್ನೊಂದಿಷ್ಟು ಜನರಿಗೆ ಸ್ಪೂರ್ತಿ ಆಗುತ್ತಾನೆ." ಎಂದು ಅಂದು ದರ್ಶನ್ ಹೇಳಿದ್ದರು. ಆ ಚಾಟ್ಸ್ ಸೆಂಟರ್ ಈಗ ಹೇಗೆ ನಡೆಯುತ್ತಿದೆ? ಫಿಲ್ಮ್ ಫೀಟ್ ತಂಡ ಅಭಿಮಾನಿಯನ್ನು ಮಾತಾಡಿಸಿದಾಗ ಹೇಳಿದ್ದೇನು? ತಿಳಿಯುವುದಕ್ಕೆ ಮುಂದೆ ಓದಿ.
ದರ್ಶನ್ ತನ್ನ ಅಭಿಮಾನಿಯ ಚಾಟ್ಸ್ ಸೆಂಟರ್ ಬಗ್ಗೆ ಸಂದರ್ಶನದಲ್ಲಿ ಪ್ರಸ್ತಾಪ ಮಾಡಿದ ಬಳಿಕ ಬ್ಯುಸಿನೆಸ್ ಚೆನ್ನಾಗಾಗಿದೆ. ದರ್ಶನ್ ಅಭಿಮಾನಿ ಹಾಕುವ ವಿಶೇಷ ಪಾನಿಪೂರಿಯನ್ನು ಟೇಸ್ಟ್ ಮಾಡುವುದಕ್ಕೆ ಹುಡುಕಿಕೊಂಡು ಬರುತ್ತಿದ್ದಾರೆ. ಗಾಡಿಯಲ್ಲಿ ಚಾಟ್ಸ್ ಸೆಂಟರ್ ಆರಂಭಕ್ಕೂ ಮುನ್ನ ಅಂಗಡಿ ಹಾಕಿದ್ದರು. ಅದೇ ಸಮಯಕ್ಕೆ ಕೋವಿಡ್ ಬಂದಿದ್ದರಿಂದ ನಷ್ಟ ಆಗಿತ್ತು. ಗಾಡಿ ಇಟ್ಮೇಲೆ ಚೆನ್ನಾಗಿ ನಡೀತಿದೆ.
"ನನ್ನ ಹೆಸರು ವೀರೇಶ್. ದರ್ಶನ್ ಅವರ ಅಭಿಮಾನಿ. 2021ರಲ್ಲಿ ಈ ಚಾಟ್ಸ್ ಸೆಂಟರ್ ಓಪನ್ ಆಗಿತ್ತು. ಕೋವಿಡ್ ವೇಳೆ ಅಂಗಡಿ ಮಾಡಿಕೊಂಡಿದ್ದೆ. ಕೋವಿಡ್ ಬಂದಿದ್ದರಿಂದ ಲಾಸ್ ಆಯ್ತು. ಅದಾದ್ಮೇಲೆ ಪೂಟ್‌ಬಾತ್ ಮೇಲೆ ಈತರ ಕಾನ್ಸೆಪ್ಟ್ ಮಾಡಿದೆ. ನಾನು ಇದೇ ಡಿಪಾರ್ಟ್‌ಮೆಂಟ್‌ನಲ್ಲೇ ಇದ್ದೆ. ಆಗಲೂ ಇದೇ ಮಾಡುತ್ತಿದ್ದೆ. ಆಗ ಡೈರೆಕ್ಟ್ ಆಗಿ ಓನರ್ ಆಗಿದ್ದೆ. ಈಗ ಓನರ್ ಕಮ್ ಕೆಲಸಗಾರ ಆಗಿದ್ದೀನಿ" ಎನ್ನುತ್ತಾರೆ ದರ್ಶನ್ ಅಭಿಮಾನಿ ವೀರೇಶ್.

ದರ್ಶನ್ ತನ್ನ ಅಭಿಮಾನಿಯ ಚಾಟ್ಸ್ ಸೆಂಟರ್ ಬಗ್ಗೆ ಹೇಳುವುದಕ್ಕೂ ವ್ಯಾಪಾರ ಮೀಡಿಯಂ ಆಗಿತ್ತು. ಈಗ ಡಬಲ್ ಆಗಿದೆ ಎಂದು ವೀರೇಶ್ ಹೇಳುತ್ತಾರೆ. "ಡಿ ಬಾಸ್ ಹೇಳುವುದಕ್ಕಿಂತ ಮುನ್ನ ಮೀಡಿಯಂ ಆಗಿ ನಡೆಯುತ್ತಿತ್ತು. ಡಿ ಬಾಸ್ ಹೇಳಿದ ಮೇಲೆ ತುಂಬಾನೇ ಚೆನ್ನಾಗಿದೆ. ಅಭಿಮಾನಿಗಳೇ ನನ್ನ ಸೆಲೆಬ್ರೆಟಿಗಳು ಅಂತ ಹೇಳಿದ್ದಾರೆ. ಅದು ಡೊಡ್ಡ ವಿಷಯ ಅಲ್ವಾ? ಅಂತಹ ದೊಡ್ಡ ವ್ಯಕ್ತಿ ನಮ್ಮ ಅಂಗಡಿಯನ್ನು ಗುರುತಿಸಿದ್ದಾರಲ್ಲ ಅದು ಹೆಮ್ಮೆಯ ವಿಷಯ. ಯಾಕಂದ್ರೆ ಸಾವಿರಾರು ಜನರಿಗೆ ಅನ್ನ ಹಾಕುತ್ತಿರುವ ವ್ಯಕ್ತಿ ಅವರು." ಎಂದು ವೀರೇಶ್ ಹೇಳಿದ್ದಾರೆ.
ಮೊದಲು ಸೇಲ್ ಆಗಿದ್ದಕ್ಕಿಂತ ಡಬಲ್ ವ್ಯಾಪಾರ ಆಗುತ್ತಿದೆಯಂತೆ. "ಸರ್ ಮೊದಲು ನಾನು 100 ಪ್ಲೇಟ್ ಸೇಲ್ ಮಾಡುತ್ತಿದ್ದೆ. ಈಗ 200 ಪ್ಲೇಟ್ ಸೇಲ್ ಮಾಡುತ್ತಿದ್ದೇನೆ. 100 ಪ್ಲೇಟ್ ಡಿ ಬಾಸ್ ಅಭಿಮಾನಿಗಳೇ ಜಾಸ್ತಿ ಆಗಿದ್ದಾರೆ. ಇಲ್ಲಿ ಬಂದು ನಾನು ಡಿ ಬಾಸ್ ಅಭಿಮಾನಿ ಅಂತಾರೆ ತುಂಬಾ ಖುಷಿ ಆಗುತ್ತಾರೆ. ತುಂಬಾ ಚೆನ್ನಾಗಿತ್ತು ಅಣ್ಣ. ಅವರನ್ನು ಹುಡುಕಿಕೊಂಡು ಬಂದಿದ್ದಕ್ಕೂ ಸಾರ್ಥಕ ಆಯ್ತು" ಅಂತ ಹೇಳುತ್ತಾರಂತೆ.
ಡಿಬಾಸ್ ಒಮ್ಮೆ ತಮ್ಮ ಚಾಟ್ಸ್ ಸೆಂಟರ್‌ಗೆ ಬರಬೇಕು ಅನ್ನೋ ಆಸೆ ಅಭಿಮಾನಿಯದ್ದು, "ನನ್ನದೊಂದು ಆಸೆಯಿದೆ. ಡಿ ಬಾಸ್ ನನ್ನ ಅಂಗಡಿ ಬಳಿ ಬರಬೇಕು ಅಂತ. ಅದಕ್ಕೆ ಕಾಯುತ್ತಿದ್ದೇನೆ. ಮೊನ್ನೆ ಡಿ ಬಾಸ್ ಬರ್ತ್‌ಡೇ ಇಲ್ಲೇ ಆಚರಣೆ ಮಾಡಿದ್ವಿ ನಾವು. ಒಂದು ಸಾವಿರ ಮಂದಿಗೆ ಅನ್ನದಾನ ಮಾಡಿದ್ದೆವು. ಅವ್ರಿಗೆ ನಾನು ಮಾಡುತ್ತಿದ್ದೇನೆ ಅಂತ ಹೇಳಿಲ್ಲ." ಎನ್ನುತ್ತಾರೆ ಅಭಿಮಾನಿ ವೀರೇಶ್.


Click it and Unblock the Notifications











