New Year 2025: ನ್ಯೂ ಇಯರ್ ಇವೆಂಟ್ ಎಲ್ಲೆಲ್ಲಿದೆ? ಯಾವ್ಯಾವ ಸೆಲೆಬ್ರಿಟಿಗಳು ಯಾವ ಪಾರ್ಟಿಯಲ್ಲಿ ಇರುತ್ತಾರೆ?
ವಿಶ್ವದ ಮೂಲೆ ಮೂಲೆಯಲ್ಲಿ ಹೊಸ ವರ್ಷವನ್ನು ಸ್ವಾಗತ ಮಾಡುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಡಿಜೆ ಪಾರ್ಟಿಗಳು, ಸೆಲೆಬ್ರೆಟಿ ಪರ್ಫಾಮೆನ್ಸ್, ಮ್ಯೂಸಿಕಲ್ ಕಾನ್ಸರ್ಟ್ ಹೀಗೆ ನಾನಾ ರೀತಿಯ ಪ್ಲಾನ್‌ಗಳು ನಡೆಯುತ್ತಿವೆ. ಹಾಗೇ ಬೆಂಗಳೂರಿನಲ್ಲೂ ಹೊಸ ವರ್ಷದ ಸೆಲೆಬ್ರೆಷನ್ ಜೋರಾಗಿದೆ. ಗಲ್ಲಿ ಗಲ್ಲಿಯಲ್ಲೂ ಇವೆಂಟ್‌ಗಳು ನಡೆಯುತ್ತಿವೆ. ಬೆಂಗಳೂರಿನ ಯೂತ್ಸ್ ಐಷಾರಾಮಿ ಹೋಟೆಲ್‌ಗಳು, ಪಬ್‌ಗಳನ್ನು ಸೇರಿಕೊಳ್ಳಲಿದ್ದಾರೆ.
ನೀವೆನಾದರೂ ಬೆಂಗಳೂರಿನಲ್ಲಿ ಇದ್ದರೆ, ಹೊಸ ವರ್ಷಗಳು ಮಸ್ತ್ ಆಗಿ ಸ್ವಾಗತ ಮಾಡಬಹುದು. ನೈಟ್ ಲೈಫ್ ಅನ್ನು ಎಂಜಾಯ್ ಮಾಡಬಹುದು. ಅದಕ್ಕಂತಾನೇ ಕೆಲವು ಐಷಾರಾಮಿ ಹೋಟೆಲ್‌ಗಳಲ್ಲಿ ಸೆಲೆಬ್ರೆಟಿಗಳು ಕರೆಸುತ್ತಿದ್ದಾರೆ. ಕೆಲವರು ಬಾಲಿವುಡ್ ಗಾಯಕರನ್ನು ಕರೆಸುತ್ತಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರು ಕೂಡ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಮೂಲೆ ಮೂಲೆಯಲ್ಲಿ ಇವೆಂಟ್‌ಗಳು ನಡೆಯುತ್ತಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವುಗಳ ಮಾಹಿತಿ ಇಲ್ಲಿದೆ. ನ್ಯೂ ಇಯರ್ ಪಾರ್ಟಿ ನಡೆಯುವ ಸ್ಥಳ ಹಾಗೂ ಇವೆಂಟ್‌ಗಳನ್ನು ಲಿಸ್ಟ್ ಇಲ್ಲಿದೆ. ಯಾರೆಲ್ಲ ಸೆಲೆಬ್ರೆಟಿಗಳು ಈ ಇವೆಂಟ್‌ಗಳನ್ನು ಭಾಗವಹಿಸುತ್ತಾರೆ ಅನ್ನೋದು ಇಲ್ಲಿದೆ.
ಬಾಲಿವುಡ್ ಗಾಯಕಿ ಉಷಾ ಉತುಪ್
2025 ಅನ್ನು ವೆಲ್‌ಕಮ್ ಮಾಡುವುದಕ್ಕೆ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ಸಜ್ಜಾಗಿದೆ. ಇಲ್ಲಿ ಹಬ್ಬ ಆಚರಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಫೇಮಸ್ ಡಿಜೆಗಳನ್ನು ಕರೆಸುತ್ತಿದೆ. ಹಾಗೇ ಬಾಲಿವುಡ್‌ನ ಜನಪ್ರಿಯ ಗಾಯಕಿ ಉಷಾ ಉತುಪ್ ಪರ್ಫಾಮೆನ್ಸ್ ಅನ್ನೂ ಆಯೋಜಿಸಿದ್ದಾರೆ. ಡಿಸೆಂಬರ್ 31ರ ರಾತ್ರಿ ಉಪಾ ಉತುಪ್ ಹಾಡುಗಳು ಹೊಸ ವರ್ಷವನ್ನು ರಂಗೇರಿಸುತ್ತವೆ.
ರಾಕ್ಸ್‌ನಲ್ಲಿ ಡಾಲಿ ಧನಂಜಯ್
ನ್ಯೂ ಬಿಎಲ್ ರೋಡ್‌ನಲ್ಲಿರುವ 'ರಾಕ್ಸ್' ಪಬ್‌ಗೆ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಎಂಟ್ರಿ ಕೊಡುತ್ತಿದ್ದಾರೆ. ಡಿಸೆಂಬರ್ 31ರ ಸಂಜೆ ರಾಕ್ಸ್ ಪಬ್‌ಗೆ ಬರುತ್ತೇನೆ. ಬನ್ನಿ ಸೆಲೆಬ್ರೆಟ್ ಮಾಡೋಣ ಅಂತ ತಮ್ಮ ಅಭಿಮಾನಿಗಳಿಗೆ ಆಹ್ವಾನ ಕೊಟ್ಟಿದ್ದಾರೆ. "ಹಾಯ್.. ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಪ್ರೀತಿಯ ಡಾಲಿ ಮಾತಾಡುತ್ತಿದ್ದೇನೆ. ಹೊಸ ವರ್ಷ ಆಚರಿಸುವುದಕ್ಕೆ ಡಿಸೆಂಬರ್ 31ನೇ ತಾರೀಕು ಸಂಜೆ ಬಿಎಲ್ ರೋಡ್‌ನ ರಾಕ್ಸ್ ಪಬ್‌ಗೆ ನಾನು ಬರುತ್ತಿದ್ದೇನೆ. ನೀವು ಬನ್ನಿ ಸೆಲೆಬ್ರೆಟ್ ಮಾಡೋಣ." ಎಂದು ವಿಡಿಯೋ ಮೂಲಕ ಸಂದೇಶ ರವಾನೆ ಮಾಡಿದ್ದಾರೆ.
ರೋಡೀಸ್‌ನ ನಿಖಿಲ್ ಚಿನ್ನಪ್ಪ
ಎಂಟಿವಿಯ ಜನಪ್ರಿಯ ರಿಯಾಲಿಟಿ ಶೋ ನಿರೂಪಕ, ನಟ ಹಾಗೂ ಡಿಜೆ ನಿಖಿಲ್ ಚಿನ್ನಪ್ಪ ಬೆಂಗಳೂರಿ ಐಷಾರಾಮಿ ಹೋಟೆಲ್‌ನಲ್ಲಿ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಶೆರಟಾನ್ ಗ್ರ್ಯಾಂಡ್‌ನಲ್ಲಿ ಸಂಜೆ 8 ಗಂಟೆಯಿಂದ ನಿಖಿಲ್ ಚಿನ್ನಪ್ಪ ಡಿಜೆ ಆರಂಭ ಆಗುತ್ತಿದೆ. ಹೈ ಅಲ್ಟ್ರಾ ಲಾಂಜ್‌ನಲ್ಲಿ ಮಸ್ತ್ ಡಿಜೆಗೆ ಹೆಜ್ಜೆ ಹಾಕಬಹುದು. ಡ್ಯಾನ್ಸ್ ಜೊತೆ ಫುಡ್ ಕೂಡ ಇರುತ್ತೆ.
ದಿ ಜುರಿ ವೈಟ್‌ಫೀಲ್ಡ್
ವೈಟ್‌ಫೀಲ್ಡ್‌ನಲ್ಲಿ ಹೈ ಎನರ್ಜಿ ಸೆಲೆಬ್ರೆಷನ್ ನಡೆಯುತ್ತಿದೆ. ದಿ ಜುರಿ ವೈಟ್‌ಫೀಲ್ಡ್‌ನಲ್ಲಿ ಜನಪ್ರಿಯ ಬಾಲಿವುಡ್ ಹಾಡುಗಳು ಮೊಳಗಲಿವೆ. ಫೇಮಸ್ ಟ್ರ್ಯಾಕ್‌ಗಳನ್ನು ಕೇಳುತ್ತಾ ಫುಡ್ ಅನ್ನು ಎಂಜಾಯ್ ಮಾಡಬಹುದು. ಹಾಗೆ ಫೇಮಸ್ ಹಾಡುಗಳಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಬಹುದು.


Click it and Unblock the Notifications











