ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಬಳಿಕ ಚೇತನ್ ಮುಂದಿನ ಸಿನಿಮಾ ಯಾವುದು?

ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಕನ್ನಡದ ಸಿನಿಮಾಗಳಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅಭಿನಯದ 'ಜೇಮ್ಸ್' ಕೂಡ ಒಂದು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಡಿದಾಟಿತ್ತು. ಅಪ್ಪು ಅಭಿಮಾನಿಗಳು ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದರು. ಅಂದ್ಹಾಗೆ ಸಿನಿಮಾವನ್ನು ನಿರ್ದೇಶಿಸಿದ್ದು, ಚೇತನ್ ಕುಮಾರ್.

ಅಪ್ಪು ಅಗಲಿದ ಬಳಿಕ ಚೇತನ್ ಕುಮಾರ್ 'ಜೇಮ್ಸ್' ಸಿನಿಮಾವನ್ನುತೆರೆಮೇಲೆ ತರುವುದಕ್ಕೆ ಚೇತನ್ ಕುಮಾರ್ ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಕಣ್ಮರೆಯಾಗುವ ಮುನ್ನ ಸಿನಿಮಾ ಕೆಲವು ಭಾಗಗಳ ಚಿತ್ರೀಕರಣ ಹಾಗೇ ಉಳಿದಿತ್ತು. ಅದನ್ನು ಚಾಲೆಂಜ್ ಆಗಿ ಸ್ವೀಕರಿಸಿ, ಸಿನಿಮಾ ಬಿಡುಗಡೆ ಮಾಡಿದ್ದರು.

ಪುನೀತ್ ಅಭಿಮಾನಿಗಳ ಭಾವನೆಗೆ ತಕ್ಕಂತೆ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡಲಾಗಿತ್ತು. ನಿರೀಕ್ಷೆಯಂತೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 'ಜೇಮ್' ಸಿನಿಮಾ ರಿಲೀಸ್ ಆಗಿದ್ದೂ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದೂ ಆಗಿತ್ತು. ಚೇತನ್ ಮುಂದೆ ಯಾರಿಗೆ ನಿರ್ದೇಶನ ಮಾಡುತ್ತಾರೆ? ಎಂಬ ಕುತೂಹಲವಿತ್ತು. ಆ ಕುತೂಹಲಕ್ಕೀಗ ತೆರೆಬಿದ್ದಿದೆ.

ಇಶಾನ್‌ಗೆ ಚೇತನ್ ನಿರ್ದೇಶನ

ಇಶಾನ್‌ಗೆ ಚೇತನ್ ನಿರ್ದೇಶನ

ಚೇತನ್ ಕುಮಾರ್ ಮುಂದಿನ ಸಿನಿಮಾ ಫಿಕ್ಸ್ ಆಗಿದೆ. 'ರೇಮೊ' ಸಿನಿಮಾದ ಹೀರೊ ಇಶಾನ್‌ಗೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುವುದು ಫಿಕ್ಸ್ ಆಗಿದೆ. ಈ ಮೂಲಕ 'ಜೇಮ್ಸ್' ಬಳಿಕ ಚೇತನ್ ಸಿನಿಮಾ ಯಾವುದು? ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಆದರೆ ಹೆಚ್ಚಿನ ಮಾಹಿತಿಯನ್ನು ಚೇತನ್ ಕುಮಾರ್ ಬಿಟ್ಟುಕೊಟ್ಟಿಲ್ಲ. ಕೇವಲ ನಾಯಕನ ಹೆಸರನ್ನು ಮಾತ್ರ ಬಹಿರಂಗ ಪಡಿಸಿದ್ದು, ಉಳಿದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ.

ಅಪ್ಪು ಸಿನಿಮಾಗೆ ಆಕ್ಷನ್ ಕಟ್

ಅಪ್ಪು ಸಿನಿಮಾಗೆ ಆಕ್ಷನ್ ಕಟ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾವನ್ನು ನಿರ್ದೇಶನ ಮಾಡುವ ಭಾಗ್ಯ ಚೇತನ್‌ ಕುಮಾರ್‌ಗೆ ಸಿಕ್ಕಿತ್ತು. ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು, ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಆದರೆ, ಆ ಸಿನಿಮಾದ ಚಿತ್ರೀಕರಣ ಮುಗಿಯುವ ಹಂತದಲ್ಲಿಯೇ ಅಪ್ಪು ದುರಂತ ನಡೆದು ಹೋಯಿತು. ಹೀಗಾಗಿ ಸಿನಿಮಾ ಬಿಡುಗಡೆ ಸಾಕಷ್ಟು ಕಷ್ಟಪಟ್ಟು ಸಿನಿಮಾವನ್ನು ರಿಲೀಸ್ ಮಾಡಬೇಕಾಯ್ತು.

ಬಾಕ್ಸಾಫೀಸ್ ಧೂಳೀಪಟ

ಬಾಕ್ಸಾಫೀಸ್ ಧೂಳೀಪಟ

ಪವರ್‌ಸ್ಟಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ದೊಡ್ಡ ಸದ್ದು ಮಾಡಿತ್ತು. ಐದು ಭಾಷೆಗಳಲ್ಲಿ 'ಜೇಮ್ಸ್' ಸಿನಿಮಾ ಬಿಡುಗಡೆಯಾಗಿತ್ತು. ಕರ್ನಾಟಕದಲ್ಲಿಯೇ ಅಪ್ಪು ಅಭಿಮಾನಿಗಳು ಸಿನಿಮಾ ನೋಡಿ ಕಣ್ತುಂಬಿಕೊಂಡಿದ್ದರು. ಬಾಕ್ಸಾಫೀಸ್‌ನಲ್ಲಿ 'ಜೇಮ್ಸ್' 130 ರಿಂದ 150 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿತ್ತು. 2022ರಲ್ಲಿ ಅತೀ ಹೆಚ್ಚು ತೆರೆಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಜೇಮ್ಸ್' ಕೂಡ ಸ್ಥಾನ ಪಡೆದುಕೊಂಡಿದೆ.

ಚೇತನ್ ನಿರ್ದೇಶನದ ಸಿನಿಮಾಗಳ ರೆಸ್ಪಾನ್ಸ್ ಹೇಗಿದೆ?

ಚೇತನ್ ನಿರ್ದೇಶನದ ಸಿನಿಮಾಗಳ ರೆಸ್ಪಾನ್ಸ್ ಹೇಗಿದೆ?

ನಿರ್ದೇಶಕ ಚೇತನ್ ಇದೂವರೆಗೂ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಬಹದ್ದೂರು', 'ಭರ್ಜರಿ', 'ಭರಾಟೆ' ಸಿನಿಮಾಗಳ ಬಳಿಕ 'ಜೇಮ್ಸ್' ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ಬಹದ್ದೂರು' ,'ಭರ್ಜರಿ' ಹಾಗೂ 'ಜೇಮ್ಸ್‌' ಸಿನಿಮಾಗಳಲ್ಲಿ ಬಾಕ್ಸಾಫೀಸ್‌ನಲ್ಲೂ ಗೆದ್ದಿವೆ. ಈಗ ಐದನೇ ಸಿನಿಮಾಗೆ ಚೇತನ್ ಕೈ ಹಾಕಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ

More from Filmibeat

English summary
Chethan Kumar To Direct Ishaan After Puneeth Rajkumar Last Movie James, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X