ಸ್ಯಾಂಡಲ್‌ವುಡ್ ಕ್ರಿಕೆಟ್ ಕಪ್‌ಗೆ ಭರ್ಜರಿ ಚಾಲನೆ
ಚಿಕ್ಕಬಳ್ಳಾಪುರ, ಮೇ 28: ಸಿನಿಮಾದಲ್ಲಿ ಉದ್ದುದ್ದ ಡೈಲಾಗ್ ಹೇಳುತ್ತ, ಫೈಟ್ ಮಾಡುತ್ತ, ಹಾಡು ಹೇಳುತ್ತ ರಂಜಿಸುತ್ತಿದ್ದ ಸ್ಯಾಂಡಲ್ ವುಡ್ ತಾರೆಯರು ಶನಿವಾರ ಕ್ರಿಕೆಟ್ ಆಟಗಾರರಾಗಿ ಬದಲಾಗಿದ್ದರು. ಚಿಕ್ಕಬಳ್ಳಾಪುರದ ಸರ್ ಎಂ ವಿಶ್ವೇಶ್ವರಯ್ಯ ಮೈದಾನದಲ್ಲಿ ಶನಿವಾರ ಸ್ಯಾಂಡಲ್ ವುಡ್ ಕ್ರಿಕೆಟ್ ಕಪ್ ಗೆ ಭರ್ಜರಿ ಚಾಲನೆ ಸಿಕ್ಕಿದೆ.
ಪಂದ್ಯಾವಳಿಗೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ. ಪಿ ಎನ್ ಕೇಶವ ರೆಡ್ಡಿ ಪಂದ್ಯಾವಳಿಗೆ ಸಾಕ್ಷಿಯಾದರು.[ಶುರುವಾಗುತ್ತಿದೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕ್ರಿಕೆಟ್ ಲೀಗ್]

ತಂಡಗಳು: ಥ್ರಿಲ್ಲರ್ ಮಂಜು ನೇತೃತ್ವದ ಥ್ರಿಲ್ಲರ್ ಬಾಯ್ಸ್, ಲೂಸ್ ಮಾದ ಯೋಗಿ ನೇತೃತ್ವದ ದುನಿಯಾ ಇಲೆವನ್, ನಾಗಕಿರಣ್ ನೇತೃತ್ವದ ಚಾಲೆಂಜಿಂಗ್ ಸ್ಟಾರ್ಸ್, ರಕ್ಷಿತ್ ಶೆಟ್ಟಿ ನೇತೃತ್ವದ ಕಿರಿಕ್ ವಾರಿಯರ್ಸ್, ಬೆತ್ತನಗೆರೆ ಖ್ಯಾತಿಯ ಅಕ್ಷಯ್ ನೇತೃತ್ವದ ಶಂಕರ್ ಇಲೆವನ್ ಮತ್ತು ಗಜಪಡೆಯ ಹರ್ಷ ನೇತೃತ್ವದ ಪವರ್ ಕಿಚ್ಚ ಇಲೆವನ್ ಪ್ರಶಸ್ತಿಗಾಗಿ ಸೆಣೆಸಲಿವೆ.[ಸಿನಿಮಾದಲ್ಲಿ ಗೆಲ್ಲದಿದ್ದರೇನಂತೆ, ಸಿಸಿಎಲ್ ರಾಯಭಾರಿ ಆಗಿಲ್ವಾ?]
ಕರ್ನಾಟಕ ಚಲನಚಿತ್ರ ಸಹ ಹಾಗೂ ಸಹಾಯಕ ನಿರ್ದೇಶಕರ ಸಂಘ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಮಾನಿಗಳ ಸಂಘ, ಹಾಲಪ್ಪ ಕ್ರಿಯೇಶನ್ಸ್ ಮತ್ತು ಎಬುಇ ನೆಟ್ ವರ್ಕ್ ಆಶ್ರಯದಲ್ಲಿ ಪಂದ್ಯಾವಳಿ ನಡೆಯುತ್ತಿದೆ.
ಎ ಗುಂಪು: ಥ್ರಿಲ್ಲರ್ ಬಾಯ್ಸ್, ಪವರ್ ಕಿಚ್ಚ ಇಲೆವನ್, ಚಾಲೆಂಜಿಂಗ್ ಸ್ಟಾರ್ಸ್
ಬಿ ಗುಂಪು : ಕಿರಿಕ್ ವಾರಿಯರ್ಸ್, ದುನಿಯಾ ಇಲೆವೆನ್ ಮತ್ತು ಶಂಕರ್ ಇಲೆವನ್
ಪಂದ್ಯ ಮತ್ತು ಸ್ಥಳ: ನೇ 28 ಮತ್ತು 29 ರಂದು ಚಿಕ್ಕಬಳ್ಳಾಪುರ, ಜೂನ್ 5 ರಂದು ತುಮಕೂರು ಮತ್ತು ಜೂನ್ 18 ಮತ್ತು 19 ರಂದು ಮಾಲೂರಿನಲ್ಲಿ ಪಂದ್ಯಗಳು ನಡೆಯಲಿವೆ. ಮಾಲೂರಿನಲ್ಲಿಯೇ ಫೈನಲ್ ನಡೆಯಲಿದೆ.


Click it and Unblock the Notifications











