»   » ಶುರುವಾಗುತ್ತಿದೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕ್ರಿಕೆಟ್ ಲೀಗ್

ಶುರುವಾಗುತ್ತಿದೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕ್ರಿಕೆಟ್ ಲೀಗ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಈಗಾಗಲೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸುತ್ತಲೇ ಬಂದಿದ್ದಾರೆ. ಇದರ ಜೊತೆಗೆ ಕನ್ನಡ ಚಲನಚಿತ್ರ ನೃತ್ಯ ನಿರ್ದೇಶಕರ ಸಂಘವೂ ಡಾ.ರಾಜ್ ಕಪ್ ಹೆಸರಿನಲ್ಲಿ ಕ್ರಿಕೆಟ್ ಟೂರ್ನಿಯನ್ನು ಕೆಲವು ವರ್ಷಗಳ ಕಾಲ ಆಯೋಜಿಸಿತ್ತು. ಮಾತ್ರವಲ್ಲದೇ ಸಿ.ಸಿ.ಎಲ್ ಕ್ರಿಕೆಟ್ ಪಂದ್ಯಾಟದಲ್ಲೂ ನಮ್ಮ ಕನ್ನಡ ತಂಡ ಇದೆ.

ಆದರೆ ಇದೀಗ ಹೊಸದಾಗಿ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ (KANFIDA) ದಿಂದ 'ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್' ಆಯೋಜಿಸಲಾಗುತ್ತಿದ್ದು, ಸದ್ಯಕ್ಕೆ ಈ ಕುರಿತು ಕೆಲಸಗಳು ನಡೆಯುತ್ತಿವೆ. ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್ ಗೆ ಚಾಲನೆ ಸಿಗಲಿದೆ.[ಫೋಟೋ ಆಲ್ಬಂ: ತಮಿಳು ಸ್ಟಾರ್ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ-ಶಿವಣ್ಣ ಭಾಗಿ]

Sandalwood 'Karnataka Superstar Cricket League' from July

ಅಂದಹಾಗೆ ಈ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್ ನಲ್ಲಿ ಸುಮಾರು 8 ತಂಡಗಳು ಭಾಗವಹಿಸಲಿದ್ದು, ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್, ವಜ್ರಮುನಿ, ಟೈಗರ್ ಪ್ರಭಾಕರ್, ತೂಗುದೀಪ್ ಶ್ರೀನಿವಾಸ್, ಸುಂದರ ಕೃಷ್ಣ ಅರಸ್ ಮತ್ತು ಶಕ್ತಿ ಪ್ರಸಾದ್ ಹೆಸರಿನ ತಂಡಗಳು 'ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್' ನಲ್ಲಿ ಪರಸ್ಪರ ಸೆಣಸಾಡಲಿವೆ.[ಜನವರಿಯಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೊಸ ಸೀಸನ್]

Sandalwood 'Karnataka Superstar Cricket League' from July

ಚಿತ್ರರಂಗದ ಮೇರು ಕಲಾವಿದರ ಹೆಸರಿನ 8 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಂಡು ಮನರಂಜಿಸಲಿದ್ದಾರೆ. ಜೊತೆಗೆ ಈ ಟೂರ್ನಿ ನಿರ್ದೇಶಕರ ಸಂಘದ ನೂತನ ಕಟ್ಟಡ ಕಟ್ಟಲು ನೆರವಾಗಲಿದೆ. ಈ ಎಂಟು ತಂಡಗಳ ಪೈಕಿ ಒಂದೊಂದು ತಂಡದಲ್ಲೂ 3 ಸ್ಟಾರ್ ಗಳು ಭಾಗವಹಿಸಲಿದ್ದಾರೆ.[ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಕಿಚ್ಚ ಸುದೀಪ್ ಅಂಡ್ ಟೀಂ ರೆಡಿ]

Sandalwood 'Karnataka Superstar Cricket League' from July

ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್, ಶಿವರಾಜ್ ಕುಮಾರ್, ದುನಿಯಾ ವಿಜಯ್, ಶ್ರೀಮುರಳಿ, ಉಪೇಂದ್ರ, ಪ್ರೇಮ್, ಗಣೇಶ್ ಸೇರಿದಂತೆ ಹಲವಾರು ಕಲಾವಿದರು ಈ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.[ಏಪ್ರಿಲ್‌ನಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹಂಗಾಮ]

Sandalwood 'Karnataka Superstar Cricket League' from July

ಒಟ್ಟು 120ಕ್ಕೂ ಹೆಚ್ಚು ಕನ್ನಡದ ನಟರು 'ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್' ನಲ್ಲಿ ಆಡುತ್ತಿದ್ದು, ಒಬ್ಬೊಬ್ಬ ಸ್ಟಾರ್ ನಟರೂ ಒಂದೊಂದು ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿಯ ಆರಂಭದ ಆಟಗಳು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ ದುಬೈನಲ್ಲಿ ನಡೆಯುವ ಸಾಧ್ಯತೆ ಇದೆ. ಇದನ್ನು ಲೆಜೆಂಡರಿ ಎಂರ್ಟಟೈನ್ಮೆಂಟ್ ಪ್ರಾಯೋಜಕತ್ವದಲ್ಲಿ ನಡೆಸಲು ತಿರ್ಮಾನಿಸಲಾಗಿದೆ.

English summary
Kannada Film Directors Association is all set to launch a new cricket tournament for the Kannada film industry and the cricket tournament which is called as the 'Karnataka Superstar Cricket League' is likely to start in the month of July.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada