ಭೂತಯ್ಯನ ಮೊಮ್ಮಗ 'ಅಯ್ಯು' ಚಿತ್ರೀಕರಣ ಕಂಪ್ಲೀಟ್
ಚಿಕ್ಕಣ್ಣ ಮತ್ತು ಶೃತಿ ಹರಿಹರನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾಮಿಡಿ ಸಿನಿಮಾ ಭೂತಯ್ಯನ ಮೊಮ್ಮಗ ಅಯ್ಯು ಚಿತ್ರೀಕರಣ ಕಂಪ್ಲೀಟ್ ಆಗಿದೆ.
ಚಂದನವನದಲ್ಲಿ ಸಿದ್ದಲಿಂಗಯ್ಯ ನಿರ್ದೇಶನ ಮಾಡಿದ್ದ 'ಭೂತಯ್ಯನ ಮಗ ಅಯ್ಯು' ಚಿತ್ರವನ್ನ ನೆನಪಿಸುವಂತೆ, "ಭೂತಯ್ಯನ ಮೊಮ್ಮಗ 'ಅಯ್ಯು'" ಅನ್ನೋ ಹೊಸ ಸಿನಿಮಾ ಮೂಡಿಬರುತ್ತಿರುವ ಬಗ್ಗೆ ಫಿಲ್ಮಿಬೀಟ್ ನಲ್ಲಿ ಈ ಮೊದಲೇ ಹೇಳಿದ್ವಿ. ಸ್ಯಾಂಡಲ್ ವುಡ್ ಕಾಮಿಡಿ ನಟರೆಲ್ಲಾ ಒಟ್ಟುಗೂಡಿ ಹೊಸ ಪ್ರಯೋಗದಲ್ಲಿ ನಿರ್ಮಾಣವಾದ ಈ ಸಿನಿಮಾ ಶೂಟಿಂಗ್ ಈಗ ಕಂಪ್ಲೀಟ್ ಆಗಿದೆ.['ಭೂತಯ್ಯನ ಮೊಮ್ಮಗ ಅಯ್ಯು' ಜೊತೆ ಶೃತಿ ಹರಿಹರನ್]

ಅಂದಹಾಗೆ "ಭೂತಯ್ಯನ ಮೊಮ್ಮಗ 'ಅಯ್ಯು'" ಸಿನಿಮಾ ಸಂಪೂರ್ಣವಾಗಿ 'ಭೂತಯ್ಯನ ಮಗ ಅಯ್ಯು' ಚಿತ್ರಕ್ಕಿಂತ ವಿಭಿನ್ನವಾಗಿದೆ. ಚಿತ್ರದ ಶೂಟಿಂಗ್ ಅನ್ನು ಮಳವಳ್ಳಿ, ಕನಕಪುರ, ಸಾತನೂರು, ಕೆಮ್ಮಾಳೆ, ಪಾಂಡವಪುರ ಮತ್ತು ಮಂಡ್ಯ ಸುತ್ತ ಮುತ್ತಲ ಪ್ರದೇಶಗಳಲ್ಲಿ ಸೆರೆಹಿಡಿಯಲಾಗಿದೆ. ಸೀನ್ ಟು ಸೀನ್ ಕಾಮಿಡಿ ಇರುವ ಈ ಸಿನಿಮಾಗೆ 'ಪದೇ ಪದೇ', 'ನಮಕ್ ಹರಾಮ್' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಾಗರಾಜ್ ಪೀಣ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ಭೂತಯ್ಯನ ಮೊಮ್ಮಗ 'ಅಯ್ಯು' ಗೆ ಜೋಡಿಯಾಗಿ ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಶೃತಿ ಹರಿಹರನ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ತಬಲಾ ನಾಣಿ, ರವಿಶಂಕರ್, ರಾಕ್ ಲೈನ್ ಸುಧಾಕರ್, ಬುಲೆಟ್ ಪ್ರಕಾಶ್, ಗಿರಿಜಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಉಮೇಶ್, ಸಿದ್ದಿ ಸೇರಿದಂತೆ ಹಲವರು ಚಿಕ್ಕಣ್ಣನಿಗೆ ಸಾಥ್ ಕೊಟ್ಟಿದ್ದಾರೆ.

ನಾಗರಾಜ್ ಪೀಣ್ಯ ಆಕ್ಷನ್ ಕಟ್ ಹೇಳಿರುವ " ಭೂತಯ್ಯನ ಮೊಮ್ಮೊಗ 'ಅಯ್ಯು' " ಚಿತ್ರಕ್ಕೆ ಆರ್ ವರಪ್ರಸಾದ್ ಬಂಡವಾಳ ಹೂಡಿದ್ದಾರೆ. ನಂದಕುಮಾರ್ ಅವರು ಛಾಯಗ್ರಾಹಣ ವಿದೆ. ಚಿತ್ರ ಕಂಪ್ಲೀಟ್ ಶೂಟಿಂಗ್ ಮುಗಿಸಿದ್ದು, ತೆರೆ ಮೇಲೆ ಬರುವುದೊಂದೆ ಬಾಕಿ


Click it and Unblock the Notifications











