»   » 'ಭೂತಯ್ಯನ ಮೊಮ್ಮಗ ಅಯ್ಯು' ಜೊತೆ ಶೃತಿ ಹರಿಹರನ್

'ಭೂತಯ್ಯನ ಮೊಮ್ಮಗ ಅಯ್ಯು' ಜೊತೆ ಶೃತಿ ಹರಿಹರನ್

Posted By:
Subscribe to Filmibeat Kannada

ಕನ್ನಡದ ಕಾಮಿಡಿ ನಟರೆಲ್ಲಾ ಸೇರಿ ಒಂದು ಹೊಸ ಪ್ರಯೋಗ ಮಾಡುತ್ತಿದ್ದು, ಒಂದೇ ಚಿತ್ರದಲ್ಲಿ ಕನ್ನಡದ ಖ್ಯಾತ ಹಾಸ್ಯ ಕಲಾವಿದರು ಅಭಿನಯಸುತ್ತಿದ್ದಾರೆ.

ಹೌದು, ಸಿದ್ದಲಿಂಗಯ್ಯ ನಿರ್ದೇಶನ ಮಾಡಿದ್ದ 'ಭೂತಯ್ಯನ ಮಗ ಅಯ್ಯು' ಚಿತ್ರವನ್ನ ನೆನಪಿಸುವಂತೆ, 'ಭೂತಯ್ಯನ ಮೊಮ್ಮಗ ಅಯ್ಯು' ಅಂತ ಹೊಸ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಕಾಮಿಡಿ ಕಿಂಗ್ ಚಿಕ್ಕಣ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

sruthi hariharan joins Bhoothayyana Mommaga Ayyu

'ಭೂತಯ್ಯನ ಮೊಮ್ಮಗ ಅಯ್ಯು'ಗೆ ನಾಯಕಿಯ ಹುಡುಕಾಟದಲ್ಲಿದ್ದ ಚಿತ್ರತಂಡ, ಇದೀಗ ಚಂದನವನದ ಸ್ಟಾರ್ ನಟಿ ಶೃತಿ ಹರಿಹರನ್ ಅವರನ್ನ ಕರೆತಂದಿದೆ. ಹೀಗಾಗಿ, 'ಭೂತಯ್ಯನ ಮೊಮ್ಮಗ ಅಯ್ಯು'ಗೆ ಶೃತಿ ಜೋಡಿಯಾಗಲಿದ್ದಾಳೆ.

sruthi hariharan joins Bhoothayyana Mommaga Ayyu

ಅಂದ್ಹಾಗೆ, 'ಭೂತಯ್ಯನ ಮಗ ಅಯ್ಯು' ಚಿತ್ರಕ್ಕೂ 'ಭೂತಯ್ಯನ ಮೊಮ್ಮಗ ಅಯ್ಯು' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಇದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ. 'ಪದೇ ಪದೇ', 'ನಮಕ್ ಹರಾಮ್' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಾಗರಾಜ್ ಪೀಣ್ಯ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

sruthi hariharan joins Bhoothayyana Mommaga Ayyu

ಇನ್ನೂ ಉಳಿದಂತೆ, ತಬಲಾ ನಾಣಿ, ರವಿಶಂಕರ್, ರಾಕ್ ಲೈನ್ ಸುಧಾಕರ್, ಬುಲೆಟ್ ಪ್ರಕಾಶ್, ಗಿರಿಜಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಉಮೇಶ್, ಸಿದ್ದಿ ಸೇರಿದಂತೆ ಹಲವರು ಚಿಕ್ಕಣ್ಣನಿಗೆ ಸಾಥ್ ಕೊಡಲಿದ್ದಾರೆ. ನಂದಕುಮಾರ್ ಅವರ ಛಾಯಗ್ರಹಣ, ಶ್ರೀನಿವಾಸು ಬಾಬು ಸಂಕಲನವಿರುವ ಈ ಚಿತ್ರ ನಾಗರಾಜ್ ಪೀಣ್ಯ ಲಾಂಛನದಲ್ಲಿ ಆರ್ ವರಪ್ರಸಾದ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ.

ಈಗಾಗಲೇ 40 ದಿನದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಮಳವಳ್ಳಿ, ಸಾತನೂರು, ಕನಕಪುರ, ಪಾಂಡುವಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಶೂಟಿಂಗ್ ಮಾಡಿ ಬಂದಿದೆ.

English summary
Nagaraj Peenya Directed 'Bhootayyana Mommaga Ayyu' is a comic film with lot of comedy actors including, Chikkanna, Umesh, Mandeep Roy, Rockline Sudhakar, Honnavalli Krishna and others. now latest sruthi hariharan joins Bhoothayyana Mommaga Ayyu team as a heroien.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada