ಕಾಶಿಯಲ್ಲಿ 'ಲಕ್ಷ್ಮಿಪುತ್ರ'ನಿಗೆ ಕ್ಲೈಮ್ಯಾಕ್ಸ್; ಎಲ್ಲಿಗೆ ಬಂತು ಚಿಕ್ಕಣ್ಣ-ಎಪಿ ಅರ್ಜುನ್ ಸಿನಿಮಾ?

ಸ್ಯಾಂಡಲ್‌ವುಡ್‌ನ ಕಾಮಿಡಿ ಕಿಂಗ್, ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ನಾಯಕನಾಗಿ ಬಡ್ತಿ ಪಡೆದಿರೋದು ಹಳೆ ವಿಷಯ. ಚಿಕ್ಕಣ್ಣ ಹೀರೋ ಆಗಿಯೂ ಯಶಸ್ಸು ಕಂಡಿದ್ದಾರೆ. ಸೋಲೋ ಹೀರೋ ಆಗಿ ನಟಿಸಿದ್ದ 'ಉಪಾಧ್ಯಕ್ಷ' ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಈ ಬೆನ್ನಲ್ಲೇ ಮತ್ತೊಂದು ಸಿನಿಮಾ ಸೋಲೋ ನಾಯಕನಾಗಿ ಸೆಟ್ಟೇರಿತ್ತು. ಅದುವೇ 'ಲಕ್ಷ್ಮಿಪುತ್ರ'.

ಕಳೆದ ವರ್ಷ ಸೆಟ್ಟೇರಿದ್ದ 'ಲಕ್ಷ್ಮಿಪುತ್ರ' ಸಿನಿಮಾ ಶೂಟಿಂಗ್ ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಿನಿಮಾವನ್ನು ಎಪಿ ಅರ್ಜುನ್ ನಿರ್ಮಾಣ ಮಾಡುತ್ತಿದ್ದಾರೆ. ಚಿಕ್ಕಣ್ಣ ಹಾಗೂ ಎಪಿ ಅರ್ಜುನ್ ಇಬ್ಬರೂ ಗೆಳೆಯರು. ಹೀಗಾಗಿ ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಮೇಲೆ ಸ್ಯಾಂಡಲ್‌ವುಡ್ ಮಂದಿ ಕಣ್ಣಿಟ್ಟು ಕಾಯುತ್ತಿದ್ದಾರೆ.

Chikkanna AP Arjun movie Lakshmiputra movie climax shooting held in Kashi

'ಮಾರ್ಟಿನ್' ಸಿನಿಮಾ ಬಳಿಕ ಎಪಿ ಅರ್ಜುನ್ ಅವರೇ ಕಥೆ ಬರೆದು, ತಮ್ಮದೇ ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಮೂಲಕ 'ಲಕ್ಷ್ಮಿಪುತ್ರ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿಕ್ಕಣ್ಣ ನಾಯಕನಾಗಿರುವ ಈ ಸಿನಿಮಾದ ಫಸ್ಟ್ ಲುಕ್ ಗಮನ ಸೆಳೆಯುತ್ತಿದೆ. ಚಿಕ್ಕಣ್ಣನ ಅಭಿಮಾನಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ಸೈಲೆಂಟ್ ಆಗಿ ಶೂಟಿಂಗ್ ಮಾಡುತ್ತಿದ್ದ 'ಲಕ್ಷ್ಮಿಪುತ್ರ' ಸಿನಿಮಾದ ಬಗ್ಗೆ ಕ್ರೇಜಿ ಅಪ್ ಡೇಟ್ ಸಿಕ್ಕಿದೆ.

'ಲಕ್ಷ್ಮಿಪುತ್ರ' ಸಿನಿಮಾದ ಶೂಟಿಂಗ್ ಇಷ್ಟು ದಿನ ಸದ್ದಿಲ್ಲದೆ ನಡೆಯುತ್ತಿಲ್ಲ. ಸಿನಿಮಾ ಅನೌನ್ಸ್‌ಮೆಂಟ್ ಮಾಡಿದ್ದು ಬಿಟ್ಟರೆ, ಆಗಾಗ ಒಂದೆರಡು ಸುದ್ದಿ ಬಂದಿದ್ದು ಬಿಟ್ಟರೆ, ಮತ್ತೆ ಸುಳಿವೇ ಇರಲಿಲ್ಲ. ಆದ್ರೀಗ ಸಿನಿಮಾದ ಶೂಟಿಂಗ್ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಅನ್ನು ಅದ್ಧೂರಿಯಾಗಿ ಕಾಶಿಯಲ್ಲಿ ನಡೆಸಲಾಗಿದೆ. ಸುಮಾರು ಮೂರು ದಿನಗಳ ಕಾಲ ನಡೆದ ಈ ಶೂಟಿಂಗ್‌ನಲ್ಲಿ ನಾಯಕ ಚಿಕ್ಕಣ್ಣ ಭಾಗಿಯಾಗಿದ್ದರು.

ಇನ್ನು ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಜೊತೆಗೆ ಹಿರಿಯ ನಟಿ ತಾರಾ ಸೇರಿದಂತೆ ಅರವತ್ತಕ್ಕೂ ಹೆಚ್ಚು ಕಲಾವಿದರು ಈ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಕಾಶಿಯ ಸುಪ್ರಸಿದ್ಧ ಮಣಿಕರ್ಣಿಕಾ ಘಾಟ್, ಗಂಗಾ‌ನದಿ ತೀರ, ಬನರಾಸ್, ಕಾಶಿ ಪ್ರಮುಖ ಬೀದಿಗಳಲ್ಲಿ 'ಲಕ್ಷ್ಮಿಪುತ್ರ' ಸಿನಿಮಾ ಚಿತ್ರೀಕರಣ ಮಾಡಿರೋದು ವಿಶೇಷ. ಹಾಗಂತ ಇಲ್ಲಿಗೆ ಶೂಟಿಂಗ್ ಮುಗಿದಿಲ್ಲ. ಇನ್ನೂ ಚಿತ್ರೀಕರಣ ಬಾಕಿ ಉಳಿದಿದೆ.

'ಲಕ್ಷ್ಮಿಪುತ್ರ' ಸಿನಿಮಾದ ಎರಡು ದಿನಗಳ ಟಾಕಿ ಪೋಷನ್ ಇನ್ನೂ ಬಾಕಿ ಉಳಿದಿದೆ. ಟಾಕಿ ಮುಗಿಯುತ್ತಿದ್ದಂತೆ ಹಾಡುಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದೆ. ಇನ್ನು ಮೇ ಇಲ್ಲವೇ ಜೂನ್ ತಿಂಗಳಲ್ಲಿ 'ಲಕ್ಷ್ಮಿಪುತ್ರ' ಸಿನಿಮಾವನ್ನು ರಿಲೀಸ್ ಮಾಡಲೇಬೇಕೆಂದು ಎಪಿ ಅರ್ಜುನ್ ನಿರ್ಧಾರ ಮಾಡಿದ್ದಾರೆ. ಹೀಗಾಗಿ ವೇಗವಾಗಿ ಸಿನಿಮಾ ಶೂಟಿಂಗ್ ಮಾಡುವುದಕ್ಕೆ ಪ್ಲಾನಿಂಗ್ ನಡೆಯುತ್ತಿದೆ.

ಇನ್ನು ಎಪಿ ಅರ್ಜುನ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ವಿಜಯ್ ಸ್ವಾಮಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿ ಹೊಸ ಪ್ರತಿಭೆ ನಟಿ ವಂದಿತಾ ನಟಿಸುತ್ತಿದ್ದಾರೆ. ಹಿರಿಯ ನಟಿ ತಾರಾ, ನಟ ಕುರಿ ಪ್ರತಾಪ್, ಧರ್ಮಣ್ಣ ಸೇರಿ ದೊಡ್ಡ ಸ್ಟಾರ್‌ಕಾಸ್ಟ್ ಈ ಸಿನಿಮಾದಲ್ಲಿದೆ. ಇನ್ನು ಅರ್ಜುನ್ ಜನ್ಯ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಎ.ಪಿ.ಅರ್ಜುನ್ ಅವರೇ ಸಿನಿಮಾದ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಮಾಸ್ ಮಾದ ಆ್ಯಕ್ಷನ್ ಸೀಕ್ವೆನ್ಸ್‌ ಅನ್ನು ಡೈರೆಕ್ಟ್ ಮಾಡಿದ್ದು, ಗಿರೀಶ್ ಆರ್.ಗೌಡ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಎ.ಪಿ.ಅರ್ಜುನ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಎ.ಪಿ.ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಗೇ ರವಿಕಿರಣ್ ಗೌಡ ಸಹ ನಿರ್ಮಾಪಕರಾಗಿದ್ದಾರೆ. ಅತೀ ಶೀಘ್ರದಲ್ಲಿಯೇ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಸಿನಿಮಾ ರಿಲೀಸ್ ಆಗಲಿದೆ.

More from Filmibeat

English summary
Chikkanna AP Arjun movie Lakshmiputra movie climax shooting held in Kashi.
Read more about: chikkanna ap arjun kashi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X