ಚಿರಂಜೀವಿ ಸರ್ಜಾ ಕೊನೆ ಸಿನಿಮಾ 'ರಾಜಮಾರ್ತಾಂಡ' ರಿಲೀಸ್‌ಗೆ ಮುಹೂರ್ತ.. ಧ್ರುವ ಹುಟ್ಟುಹಬ್ಬ ಗಿಫ್ಟ್!
ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಚಿಕ್ಕ ವಯಸ್ಸಿನಲ್ಲೇ ಅಗಲಿದ ನೋವು ಇನ್ನೂ ಮಾಸಿಲ್ಲ. ಕುಟುಂಬಸ್ಥರು, ಅಭಿಮಾನಿಗಳು, ಆಪ್ತರು, ಸ್ನೇಹಿತರು ಎಲ್ಲರೂ ಇನ್ನೂ ಆ ಕಹಿ ಘಟನೆಯಿಂದ ಹೊರಬಂದಿಲ್ಲ. ಇಂತಹ ನೋವಿನಲ್ಲೂ ಅಭಿಮಾನಿಗಳು ಸಂತಸ ಪಡುವ ಸಮಯ ಬಂದಿದೆ.
ಚಿರಂಜೀವಿ ಸರ್ಜಾ ಅಗಲುವ ಮುನ್ನ 'ರಾಜಮಾರ್ತಾಂಡ' ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದರೂ, ಇನ್ನೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿಯಿತ್ತು. ಅಲ್ಲದೆ ಡಬ್ಬಿಂಗ್ ಕೂಡ ಆಗಿರಲಿಲ್ಲ. ಚಿರು ಅಗಲಿದ ಬಳಿಕ ಉಳಿಸಿ ಹೋದ ಕೆಲಸಗಳನ್ನು ತಾನು ಪೂರ್ಣಗೊಳಿಸುವುದಾಗಿ ಧ್ರುವ ಹೇಳಿದ್ದರು. ಅಂತಯೇ ಚಿರು ದೃಶ್ಯಗಳಿಗೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿಕೊಟ್ಟಿದ್ದರು.

'ರಾಜಮಾರ್ತಾಂಡ' ಒಂದು ಮಾಸ್ ಸಿನಿಮಾ. ಚಿರಂಜೀವಿ ಸರ್ಜಾ ಈ ಸಿನಿಮಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಧ್ವನಿಯಲ್ಲಿ ಚಿರು ನಟನೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಈಗ ಅಭಿಮಾನಿಗಳ ಪಾಲಿಗೆ ಒಲಿದು ಬಂದಿದೆ.
ಆಕ್ಷನ್ ಧ್ರುವ ಸರ್ಜಾರಂತೆಯೇ ಚಿರಂಜೀವಿ ಸರ್ಜಾ ಪತ್ನಿ ಹಾಗೂ ನಟಿ ಮೇಘನಾ ರಾಜ್ ಕೂಡ ಸಿನಿಮಾ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿದ್ದರು. ಈ ಮಾತನ್ನು ಸಿನಿಮಾ ತಂಡವೇ ಹೇಳಿಕೊಂಡಿದೆ. ಹೀಗಾಗಿ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಬಿಡುಗಡೆ ಸಜ್ಜಾಗಿ ನಿಂತಿದೆ.
ಅಕ್ಟೋಬರ್ 6ರಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬವಿದೆ. ತಮ್ಮನ ಹುಟ್ಟುಹಬ್ಬಂದು ಅಣ್ಣನ ಕೊನೆಯ ಸಿನಿಮಾ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ. ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಅಕ್ಟೋಬರ್ 6ರಂದು ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಹಾಗೂ ನಿರ್ದೇಶಕರು ನಿರ್ಧಾರ ಮಾಡಿದ್ದಾರೆ.

'ರಾಜಮಾರ್ತಾಂಡ' ಸಿನಿಮಾವನ್ನು ಶಿವಕುಮಾರ್ ನಿರ್ಮಿಸಿದ್ದು, ರಾಮನಾರಾಯಣ್ ನಿರ್ದೇಶನ ಮಾಡಿದ್ದಾರೆ. ಧ್ರುವ ಸರ್ಜಾಗೆ ಅಣ್ಣ ಚಿರಂಜೀವಿ ಸರ್ಜಾ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕಾಗಿಯೇ ಅದೇ ದಿನದಂದು 'ರಾಜ ಮಾರ್ತಾಂಡ' ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.
'ರಾಜಮಾರ್ತಾಂಡ' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕೆ.ಗಣೇಶ್ ಕ್ಯಾಮರಾ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನವಿದೆ. ಭೂಷಣ್, ಹರ್ಷ ಈ ಸಿನಿಮಾ ನೃತ್ಯ ಸಂಯೋಜನೆ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ಇಬ್ಬರು ನಾಯಕಿಯರು. ದೀಪ್ತಿ ಸಾತಿ, ಮೇಘಶ್ರೀ ನಾಯಕಿಯರಾಗಿ ನಟಿಸಿದ್ದಾರೆ. ಹಾಗೇ ಟಗರು ಖ್ಯಾತಿಯ ತ್ರಿವೇಣಿ, ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











