'ಲೈಫ್ ಈಸ್ ಶಾರ್ಟ್, ಆಲ್ವೇಸ್ ಬಿ ಹ್ಯಾಪಿ' ಎಂದಿದ್ದರು ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ ಹಠಾತ್ ಸಾವು, ಎಲ್ಲೆಡೆ ದುಃಖ ಮಡುಗಟ್ಟಿಸುವಂತೆ ಮಾಡಿದೆ. 39 ಸಾಯುವ ವಯಸ್ಸಲ್ಲ. ಅದೂ ಎಲ್ಲರೊಂದಿಗೆ ನಗುತ್ತಾ ಬೆರೆಯುತ್ತಿದ್ದ ಮೃದು ಮನಸಿನ ಚಿರಂಜೀವಿ ಅವರ ಬದುಕಲ್ಲಿ ವಿಧಿ ಈ ರೀತಿಯ ಕ್ರೌರ್ಯ ಮೆರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
Recommended Video
'ಜೀವನ ಚಿಕ್ಕದು, ಅದನ್ನು ಸಿಹಿಯಾಗಿರಿಸಿಕೊಳ್ಳಿ' ಎನ್ನುವುದು ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ಕೇಳಿಬರುವ ಉಕ್ತಿ. ಆದರೆ ಜೀವನ ಅಷ್ಟು ಸಣ್ಣದೇನಲ್ಲ. ಒಬ್ಬ ವ್ಯಕ್ತಿ 75-80 ವರ್ಷದವರೆಗೆ ಬದುಕಬಹುದು. ಇದು ಕಡಿಮೆಯೇನಲ್ಲ. ಆದರೆ ಚಿರಂಜೀವಿ ಬದುಕು 39ಕ್ಕೇ ಮುಗಿದು ಹೋಯಿತು.

'ಲೈಫ್ ಈಸ್ ಶಾರ್ಟ್' ಎಂಬುದನ್ನು ಚಿರಂಜೀವಿ ಒಪ್ಪಿಕೊಂಡಿದ್ದರು. ಟಿಕ್ ಟಾಕ್‌ನಲ್ಲಿನ ಅವರ ವಿಡಿಯೋವೊಂದು ಈಗ ವೈರಲ್ ಆಗಿದ್ದು, ದುಃಖವನ್ನು ಮತ್ತಷ್ಟು ಹೆಚ್ಚಿಸುವಂತಿದೆ.
'ಲೈಫ್ ಈಸ್ ಶಾರ್ಟ್ ನಂಬಾ, ಆಲ್ವೇಸ್ ಬಿ ಹ್ಯಾಪಿ' ಎನ್ನುವ ವಿಡಿಯೋವನ್ನು ಅವರು ಟಿಕ್‌ಟಾಕ್‌ನಲ್ಲಿ ಶೇರ್ ಮಾಡಿದ್ದರು. ಈ ಸಾಲುಗಳಿಗೆ ತಕ್ಕಂತೆಯೇ ಚಿರಂಜೀವಿ ಬದುಕಿದ್ದರು. ಸದಾ ಖುಷಿಯಾಗಿ ನಗುತ್ತಾ ಇದ್ದ ಅವರ ಪಾಲಿಗೆ ಬದುಕು ಬಹಳ ಚಿಕ್ಕದಾಗಿತ್ತು.


Click it and Unblock the Notifications











