Cinema Lovers Day: ಸಿನಿ ಪ್ರೇಮಿಗಳೇ ನಿಮಗೆ ಸಿಹಿ ಸುದ್ದಿ.. 99 ರೂಪಾಯಿಗೆ ಸಿನಿಮಾ ಟಿಕೆಟ್!
ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡುವುದು ಬಲು ದುಬಾರಿ. ಮನೆ ಮಂದಿಯೆಲ್ಲ ಸೇರಿ ಸಿನಿಮಾಗೆ ಹೋದರೆ, ಸಾವಿರಾರು ರೂಪಾಯಿ ಪಾಕೆಟ್‌ನಿಂದ ಗಾಯಬ್ ಆಗೋದು ಗ್ಯಾರಂಟಿ. ಹೀಗಾಗಿ ಕೆಲವೊಮ್ಮೆ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡುವುದಕ್ಕೆ ಹಿಂದೇಟು ಹಾಗುವ ಮಂದಿ ಇದ್ದಾರೆ. ಇಂತಹ ಸಿನಿಮಾ ಪ್ರೇಮಿಗಳಿಗೆ ಭಾರತದ ಮಲ್ಟಿಪ್ಲೆಕ್ಸ್ ಚೈನ್‌ಗಳಾದ ಪಿವಿಆರ್ ಹಾಗೂ ಐನಾಕ್ಸ್ ಸಿಹಿ ಸುದ್ದಿಯನ್ನು ನೀಡಿದೆ.
ಇಂದು (ಫೆಬ್ರವರಿ 23) ಸಿನಿಮಾ ಪ್ರೇಮಿಗಳಿಗೆ ಮಲ್ಟಿಪ್ಲೆಕ್ಟ್ ಚೈನ್ ಆದ ಪಿವಿಆರ್ ಹಾಗೂ ಐನಾಕ್ಸ್ ಬಂಪರ್ ಆಫರ್ ಕೊಟ್ಟಿದೆ. ಇಂದು ಶುಕ್ರವಾರ ಸಿನಿಮಾ ಪ್ರೇಮಿಗಳ ದಿನವನ್ನಾಗಿ ಆಚರಿಸಲು ಪಿವಿಆರ್ ಹಾಗೂ ಐನಾಕ್ಸ್ ನಿರ್ಧರಿಸಿದೆ. ಹೀಗಾಗಿ ಈ ಒಂದು ದಿನ ದುಬಾರಿ ಟಿಕೆಟ್ ಬೆಲೆಯನ್ನು ಕಡಿತಗೊಳಿಸಿ, ಕೇವಲ 99 ರೂಪಾಯಿಗೆ ಸಿನಿಮಾ ಟಿಕೆಟ್ ನೀಡಲು ತೀರ್ಮಾನಿಸಿದೆ.

ಪಿವಿಆರ್ ಹಾಗೂ ಐನಾಕ್ಸ್‌ನಲ್ಲಿ ಸಿನಿಮಾ ಲವರ್ಸ್ ಡೇ ಆಚರಣೆ ಮಾಡಲಾಗುತ್ತಿದ್ದು, ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ಕೆಲವು ಸಿನಿಮಾಗಳನ್ನು ಪ್ರೇಕ್ಷಕರು ಕೇವಲ 99 ರೂಪಾಯಿ ಸಿನಿಮಾವನ್ನು ನೋಡಬಹುದಾಗಿದೆ. 'ಆರ್ಟಿಕಲ್ 370', 'ಕ್ರ್ಯಾಕ್', 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಸೇರಿದಂತೆ 'ಮೇಡಂ ವೆಬ್', 'ದಿ ಹೋಲ್ಡರ್ಸ್' ಮತ್ತು'ಬಾಬ್ ಮಾರ್ಲಿ ಒನ್ ಲವ್', 'ಮೀನ್ ಗರ್ಲ್ಸ್', 'ದಿ ಟೀಚರ್ಸ್ ಲಾಂಜ್' ಇಂತಹ ಸಿನಿಮಾಗಳನ್ನು ಕೇವಲ 99 ರೂಪಾಯಿ ನೋಡಬಹುದಾಗಿದೆ.
ಹಾಗೇ ಐಮ್ಯಾಕ್ಸ್, 4ಡಿಎಕ್ಸ್, ಎಂಎಕ್ಸ್4ಡಿ ಹಾಗೂ ಗೋಲ್ಡ್ ಕ್ಲಾಸ್‌ಗಳಿಗೂ ಟಿಕೆಟ್ ದರವನ್ನು ಕಡಿತಗೊಳಿಸಿದೆ. ಕೇವಲ 199 ರೂಪಾಯಿಗೆ ಇಲ್ಲಿ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಈ ಆಫರ್ ಭಾರತದ ಬಹುತೇಕ ರಾಜ್ಯಗಳಲ್ಲಿ ಇದೆ. ದಕ್ಷಿಣ ಭಾರತದ ಕೆಲವು ರಾಜ್ಯಗಳನ್ನು ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಸಿನಿಮಾ ಪ್ರೇಮಿಗಳು 99 ರೂಪಾಯಿಗೆ ಸಿನಿಮಾ ನೋಡಬಹುದಾಗಿದೆ. ಆದರೆ, ಕರ್ನಾಟಕದಲ್ಲಿ ಈ ಆಫರ್ ಚಾಲ್ತಿಯಲ್ಲಿ ಇರುತ್ತೆ ಎಂದು ಪಿವಿಆರ್ ಹಾಗೂ ಐನಾಕ್ಸ್ ಹೇಳಿಕೊಂಡಿದೆ.
"ಭಾರತದ ಪ್ರೇಕ್ಷಕರಲ್ಲಿ ಸಿನಿಮಾ ವಿಶೇಷವಾದ ಸ್ಥಾನವನ್ನು ಪಡೆದಿದೆ. ಸಿನಿಮಾವನ್ನು ಬೇರೆ ಹಂತದಲ್ಲೇ ಅವರು ಸಂಭ್ರಮಿಸುತ್ತಾರೆ. ಹೀಗಾಗಿ ಅವರೊಂದಿಗೆ ಸಿನಿಮಾ ಲವರ್ಸ್ ಡೇ ಅನ್ನು ಅನೌನ್ಸ್ ಮಾಡುತ್ತಿರುವುದಕ್ಕೆ ನಾವು ಥ್ರಿಲ್ ಆಗಿದ್ದೇವೆ. ನ್ಯಾಷನಲ್ ಸಿನಿಮಾ ಡೇಯಿಂದ ಪ್ರೇರಣೆ ಪಡೆದು ಸಿನಿಮಾ ಲವರ್ಸ್ ಡೇ ಮಾಡಿದ್ದೇವೆ" ಎಂದು ಪಿವಿಆರ್, ಐನಾಕ್ಸ್ ಕೋ ಸಿಇಒ ಗೌತಮ್ ದತ್ತಾ ಹೇಳಿದ್ದಾರೆ.
ಇನ್ನು ಕನ್ನಡ ಸಿನಿಮಾಗಳಿಗೂ ಈ ಆಫರ್ ಸಿಕ್ಕಿದೆ. ಇಂದು ಬಿಡುಗಡೆಯಾಗುತ್ತಿರುವ 'ಮಿಸ್ಟರ್ ನಟ್ವರ್‌ಲಾಲ್', 'ಫಾರ್ ರೆಜಿಸ್ಟರೇಷನ್' ಹಾಗೇ ಈಗಾಗಲೇ ರಿಲೀಸ್ ಆಗಿರುವ 'ಉಪಾಧ್ಯಕ್ಷ', 'ಒಂದು ಸರಳ ಪ್ರೇಮಕಥೆ', 'ಮತ್ಸ್ಯಗಂಧ' ಸೇರಿದಂತೆ ಹಲವು ಸಿನಿಮಾಗಳು ಹಲವು ಕನ್ನಡ ಸಿನಿಮಾಗಳನ್ನು ಇಂದು (ಫೆಬ್ರವರಿ 23) ಕೇವಲ 99 ರೂಪಾಯಿಗೆ ಪಿವಿಆರ್ ಹಾಗೂ ಐನಾಕ್ಸ್‌ನಲ್ಲಿ ಸಿನಿಮಾ ನೋಡಬಹುದಾಗಿದೆ.


Click it and Unblock the Notifications











