ಜನಪ್ರಿಯ ಯೂಟ್ಯೂಬರ್, ಕಮಿಡಿಯನ್‌ ನಿಂದ ಹಿಟ್ & ರನ್: ಇಬ್ಬರು ಸಾವು, ಒರ್ವ ಗಂಭೀರ

By ಮಂಗಳೂರು ಪ್ರತಿನಿಧಿ

ಮಂಗಳೂರು ನಗರ ಹೊರವಲಯದ ಮುಲ್ಕಿಯಲ್ಲಿ ಹಿಟ್ & ರನ್ ಮಾಡಿ ಇಬ್ಬರ ಜೀವ ಬಲಿ ಪಡೆದ ಮಂಗಳೂರಿನ ಪ್ರಸಿದ್ಧ ಯೂಟ್ಯೂಬರ್ ನನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಪ್ರಸಿದ್ಧ ಯೂಟ್ಯೂಬರ್ 'ಮ್ಯಾಡ್ ಇನ್ ಕುಡ್ಲ' ಯುಟ್ಯೂಬ್ ಚಾನೆಲ್‌ನ ಅರ್ಪಿತ್ ಇಂದ್ರವರ್ಧನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 31 ರ ರಾತ್ರಿ ಮಂಗಳೂರು ಹೊರವಲಯದ ಪಡುಪಣಂಬೂರು ಬಳಿ ಅರ್ಪಿತ್ ಸ್ಪೀಡ್ ಆಗಿ ಕಾರು ಚಲಾಯಿಸಿ ಹೆದ್ದಾರಿ ಪಕ್ಕದಲ್ಲಿ ಲಾರಿ ಟೈಯರ್ ಚೇಂಜ್ ಮಾಡುತ್ತಿದ್ದ ಮೂವರಿಗೆ ಢಿಕ್ಕಿ ಹೊಡೆದಿದ್ದರು. ಮೂವರಿಗೂ ಗಂಭೀರವಾಗಿ ಗಾಯವಾಗಿದ್ದರೂ ಕಾರು ನಿಲ್ಲಿಸದೇ ಪರಾರಿಯಾಗಿದ್ದರು.

ಘಟನೆಯಲ್ಲಿ ಓರ್ವ ಅಂದೇ ಮೃತಪಟ್ಟಿದ್ದು, ಮತ್ತೊರ್ವ ಫೆ.1ರಂದು ಮೃತಪಟ್ಟಿದ್ದಾನೆ.‌ ಮತ್ತೊರ್ವನಿಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಮದ್ಯಪ್ರದೇಶದ ಬಬುಲು(23), ಅಚಲ್ ಸಿಂಗ್(30) ಮೃತಪಟ್ಟಿದ್ದಾರೆ.

Comedian, YouTuber Arpith Arrest In Hit And Run Case By Mangalore Police

ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದ್ದ ಅರ್ಪಿತ್ ನ ಕಾರ್ ನ್ನು ಪತ್ತೆ ಹಚ್ಚಿದ ಪೊಲೀಸರು ಯೂಟ್ಯೂಬರ್ ಅರ್ಪಿತ್ ನನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮ್ಯಾಡ್ ಇನ್ ಕುಡ್ಲ ಯೂಟ್ಯೂಬ್ ಚಾನೆಲ್ ನ ಅರ್ಪಿತ್ ಸ್ಯ್ಯಾಂಡ್ ಅಪ್ ಕಾಮಿಡಿ ಮೂಲಕ ಪ್ರಸಿದ್ಧಿ ಪಡೆದಿದ್ದರು.ಈ ಹಿಂದೆ ಆರ್ ಜೆ ಆಗಿಯೂ ಕೆಲಸ ಮಾಡಿದ್ದ ಅರ್ಪಿತ್, ಆ ಬಳಿಕ ಯೂಟ್ಯೂಬ್ ಚಾನೆಲ್ ನಲ್ಲಿ ಸಕ್ರಿಯರಾಗಿದ್ದರು. ಅಲ್ಲದೇ ಕಾರ್ಯಕ್ರಮಗಳಿಗೆ ನಿರೂಪಕರಾಗಿಯೂ ಕೆಲಸ ಮಾಡುತ್ತಿದ್ದರು. ಸ್ಟ್ಯಾಂಡ್ ಅಪ್ ಕಾಮಿಡಿ ಸಹ ಮಾಡುತ್ತಿದ್ದರು. ಜನವರಿ 31 ರಂದು ಉಡುಪಿಯಲ್ಲಿ ಕಾರ್ಯಕ್ರಮ ನೀಡಿ ಮರಳಿ ಮಂಗಳೂರಿಗೆ ಬಂದಾಗ ಈ ಅಫಘಾತ ನಡೆದಿದೆ ಎಂದು ಹೇಳಲಾಗಿದೆ.

More from Filmibeat

English summary
Comedian, Youtuber Arpith arrested in hit and run case by Mangalore police. Due to Arpith's rash drive two died on injured.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X