'ಉಪಾಧ್ಯಕ್ಷ'ನ ಕಾಪಾಡಲು ಬಂದ 'ಅಧ್ಯಕ್ಷ': ಸಾಥ್ ಕೊಟ್ಟ ಸ್ಯಾಂಡಲ್‌ವುಡ್ ತಾರೆಯರು!

'ಅಧ್ಯಕ್ಷ' ಸಿನಿಮಾ ನೋಡಿದವರಿಗೆ 'ಉಪಾಧ್ಯಕ್ಷ'ನ ಪರಿಚಯ ಮಾಡುವ ಅಗತ್ಯವಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ 'ಅಧ್ಯಕ್ಷ' ಎಷ್ಟು ಫೇಮಸ್ಸೋ 'ಉಪಾಧ್ಯಕ್ಷ'ನೂ ಅಷ್ಟೇ ಫೇಮಸ್. ಅಧ್ಯಕ್ಷ ಹಾವಳಿ ಇಟ್ಟ ಬಳಿಕ ಈಗ ಉಪಾಧ್ಯಕ್ಷ ಹಾವಳಿ ಇಡುವುದಕ್ಕೆ ರೆಡಿಯಾಗಿದ್ದಾನೆ.

ಅಂದ್ಹಾಗೆ ಸ್ಯಾಂಡಲ್‌ವುಡ್‌ನ ಅಧ್ಯಕ್ಷ ಶರಣ್ ಆಗಿದ್ದರೆ, ಉಪಾಧ್ಯಕ್ಷ ಚಿಕ್ಕಣ್ಣ. ಇದೇ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿಕ್ಕಣ್ಣನ 'ಉಪಾಧ್ಯಕ್ಷ' ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಟೀಸರ್‌ನಿಂದಲೇ ಪ್ರಚಾರ ಆರಂಭ ಆಗಿದೆ.

chikkanna-sharan-upadyakasha-movie-teaser

ಇತ್ತೀಚೆಗಷ್ಟೇ 'ಉಪಾಧ್ಯಕ್ಷ' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್‌ನ ತಾರೆಯರೆಲ್ಲ ಸೇರಿಕೊಂಡು 'ಉಪಾಧ್ಯಕ್ಷ'ರಿಗೆ ಬೆಂಬಲ ಕೊಟ್ಟಿದ್ದಾರೆ. ಅದಕ್ಕೆ ಫುಲ್ ಶಾರುಖ್ ಖಾನ್ ರೇಂಜ್‌ನಲ್ಲಿ ಲವ್ ಸ್ಟೋರಿ ತೋರಿಸುವುದಕ್ಕೆ ಸಜ್ಜಾಗಿದ್ದಾರೆ.

'ಉಪಾಧ್ಯಕ್ಷ' ಟೀಸರ್ ರಿಲೀಸ್ ಆಗಿದ್ದು, ಈ ಸಿನಿಮಾವನ್ನು ಇತ್ತೀಚೆಗೆ ಉಮಾಪತಿ ಫಿಲಂಸ್ ಬ್ಯಾನರ್‌ನಲ್ಲಿ ಸ್ಮಿತಾ ಉಮಾಪತಿ ನಿರ್ಮಸಿದ್ದಾರೆ. ಈ ಸಿನಿಮಾಗೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇಷ್ಟು ದಿನ ಪೋಸ್ಟರ್ ಬಿಟ್ಟರೆ, ಚಿಕ್ಕದೊಂದು ತುಣುಕು ಕೂಡ ಬಿಟ್ಟಿರಲಿಲ್ಲ. ಈಗ ಟೀಸರ್ ರಿಲೀಸ್ ಮಾಡಿ ಬಾಕ್ಸಾಫೀಸ್‌ನಲ್ಲಿ ಗದ್ದಲ ಎಬ್ಬಿಸುವುದಕ್ಕೆ ಸಜ್ಜಾಗಿದ್ದಾರೆ.

'ಉಪಾಧ್ಯಕ್ಷ' ಟೀಸರನ್ನು ಸ್ಯಾಂಡಲ್‌ವುಡ್ ತಾರೆಯರು ರಿಲೀಸ್ ಮಾಡಿದ್ದಾರೆ. ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಅಭಿಷೇಕ್ ಅಂಬರೀಶ್, ಧನ್ವೀರ್, ಪ್ರಥಮ್ ನಟಿ ಅದಿತಿ ಪ್ರಭುದೇವ ಸೇರಿದಂತೆ ಗಣ್ಯರು ಟೀಸರ್ ರಿಲೀಸ್ ಮಾಡಿದ್ದಾರೆ. ಈ ವೇಳೆ ಕನ್ನಡ ತಾರೆಯರು ಚಿಕ್ಕಣ್ಣ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಹಾಗೇ ನಿರ್ದೇಶಕ ಡಾ.ಸೂರಿ, ಮಹೇಶ್ ಕುಮಾರ್, ನಟ ಗರುಡ ರಾಮ್, ಆನಂದ್ ಆಡಿಯೋ ಮಾಲೀಕ ಶ್ಯಾಮ್ ಉಪಾಧ್ಯಕ್ಷರಿಗೆ ಶುಭ ಕೋರಿದ್ದಾರೆ.

chikkanna-sharan-upadyakasha-movie-teaser

"ನಾನು ಕೆಲಸದೊತ್ತಡದಿಂದ ಚಿತ್ರೀಕರಣ ಸ್ಥಳಕ್ಕೆ ಹೋಗುತ್ತಿರಲಿಲ್ಲ. ಚಿತ್ರತಂಡದವರೇ ಎಲ್ಲವನ್ನು ನೋಡಿಕೊಂಡಿದ್ದಾರೆ. ಇದು 'ಅಧ್ಯಕ್ಷ' ಸಿನಿಮಾದ ಮುಂದುವರೆದ ಭಾಗ. ಚಂದ್ರ ಮೋಹನ್ ಕಥೆ ಬರೆದಿದ್ದಾರೆ. ಚಿತ್ರಕಥೆಗೆ ನಿರ್ದೇಶಕರಾದ ಡಾ.ಸೂರಿ, ತರುಣ್ ಸುಧೀರ್ ಸೇರಿದಂತೆ ಹಲವರು ಸಹಾಯ ಮಾಡಿದ್ದಾರೆ. ಚಿಕ್ಕಣ್ಣ ಈ ಚಿತ್ರದ ಮೂಲಕ ನಾಯಕರಾಗಿದ್ದಾರೆ. ನವೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರುತ್ತೆ" ಎಂದು ನಿರ್ಮಾಪಕ ಉಮಾಪತಿ ಮಾಹಿತಿ ಹಂಚಿಕೊಂಡಿದ್ದಾರೆ.

"ನಾನು ಹದಿಮೂರು ವರ್ಷದಿಂದ ನೋಡಿರದ ಕಷ್ಟವನ್ನು ಉಪಾಧ್ಯಕ್ಷ ಸಿನಿಮಾದ ನಾಯಕನಾದ ಕ್ಷಣದಿಂದ ನೋಡಿದ್ದೇನೆ. ನಾನು ಈ ಚಿತ್ರದ ನಾಯಕ ಅಂದಕೂಡಲೆ ಸಾಕಷ್ಟು ಜನ ಸಾಕಷ್ಟು ಮಾತನಾಡಿ ಮನಸ್ಸು ನೋಯಿಸಿದ್ದಾರೆ. ಆದರೆ, ನಿರ್ಮಾಪಕ ಉಮಾಪತಿ ಅವರು ನನ್ನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ಅಪಾರ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಎಲ್ಲಾ ನಟರಿಗೂ ನನ್ನ ಧನ್ಯವಾದ" ಎಂದು ನಾಯಕ ಚಿಕ್ಕಣ್ಣ ಹೇಳಿದ್ದಾರೆ.

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಟಿ ಮಲೈಕ 'ಉಪಾಧ್ಯಕ್ಷ' ಸಿನಿಮಾ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಈ ಮೂಲಕ ಕಿರುತೆರೆಯಲ್ಲಿ ಜನರ ಮನಸ್ಸು ಗೆದ್ದಂತೆ ಸಿನಿಮಾಗಳಲ್ಲೂ ಗೆಲ್ಲುತ್ತಾರಾ? ಅನ್ನೋದು ಕೂತೂಹಲವಿದೆ. ಎಲ್ಲಕ್ಕಿಂತ ಹೆಚ್ಚಾಗಿ 'ಉಪಾಧ್ಯಕ್ಷ' ಟೀಸರ್ ಕೊನೆಯಲ್ಲಿ ಸ್ಯಾಂಡಲ್‌ವುಡ್ 'ಅಧ್ಯಕ್ಷ' ಶರಣ್ ಕೂಡ ಕಾಣಿಸಿಕೊಂಡಿರುವುದು ಹಾಸ್ಯ ಪ್ರಿಯರಿಗೆ ಕಿಕ್ ಕೊಟ್ಟಿದೆ.

More from Filmibeat

English summary
Comedy actor Chikkanna debut movie as a hero Upadhyaksha teaser out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X