ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ನಟನಿಗೆ ಹೃದಯಘಾತ; ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ವಿಧಿವಶ

ಇಂದು (ಮೇ 12) ಬೆಳ್ಳಂಬೆಳಗ್ಗೆನೇ ಕನ್ನಡ ಕಿರುತೆರೆ ಲೋಕಕ್ಕೆ ಕೆಟ್ಟ ಸುದ್ದಿ ಬಂದು ಅಪ್ಪಳಿಸಿದೆ. ವೀಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುತ್ತಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಇಹಲೋಕ ತ್ಯಜಿಸಿದ್ದಾರೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿತ್ತು ಎಂದು ವರದಿಗಳಾಗಿವೆ.

ರಾಕೇಶ್ ಪೂಜಾ ನಿನ್ನೆ (ಮೇ 11)ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಗೆ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಕಾಮಿಡಿ ಕಿಲಾಡಿಗಳು ರಾಕೇಶ್ ಪೂಜಾರಿಗೆ ಹೊರ ಬದುಕನ್ನು ಕೊಟ್ಟಿತ್ತು. ರಾಕೇಶ್ ಪೂಜಾರಿ ಸಾವಿನ ಸುದ್ದಿಯನ್ನು ನಟ ಶಿವರಾಜ್‌ ಕೆ ಆರ್‌ ಪೇಟೆ ಖಚಿತ ಪಡಿಸಿದ್ದಾರೆ.

Comedy Khiladigalu fame Rakesh Pujari passes away due to heart attack

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆಯನ್ನು ಪಡೆದಿದ್ದರು. ಸದಾ ನಗುಮುಖದ ರಾಕೇಶ್ ಪೂಜಾರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎನ್ನಲಾಗಿದೆ. ನಿನ್ನೆ ಊರಿನಲ್ಲಿ ನಡೆದ ಗೆಳೆಯನ ಮದುವೆ ಸಮಾರಂಭದಲ್ಲಿ ರಾಕೇಶ್ ಪೂಜಾರಿ ಭಾಗವಹಿಸಿದ್ದರು. ಆ ವೇಳೆ ರಾಕೇಶ್ ಪೂಜಾರಿ ಡ್ಯಾನ್ಸ್ ಕೂಡ ಮಾಡಿದ್ದರು. ಈ ವೇಳೆ ಹಠಾತ್‌ ಕುಸಿದುಬಿದ್ದಿದ್ದಾರೆ ಎನ್ನಲಾಗಿದೆ. ರಾಕೇಶ್ ಪೂಜಾರಿ ಹಠಾತ್ ಸಾವು ಬೆಳ್ಳ ಬೆಳಗ್ಗೆ ಕಿರುತೆರೆ ಲೋಕಕ್ಕೆ ಆಘಾತವನ್ನು ಉಂಟು ಮಾಡಿದೆ.

ರಾಕೇಶ್ ಪೂಜಾರಿಯವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು. ಅತೀ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ನಟ ಬಲಿಯಾಗಿದ್ದಾರೆ. ಇನ್ನೊಂದು ಕಡೆ ರಾಕೇಶ್ ಪೂಜಾರಿಗೆ ಲೋ ಬಿಪಿಯಿಂದ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಕಿರುತೆರೆ ಲೋಕದ ಗಣ್ಯರು ಹಾಗೂ ನಟರು ರಾಕೇಶ್ ಪೂಜಾರಿಯ ಹಠಾತ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. "ಎಷ್ಟೋ ಮನಸುಗಳ ನಗಿಸಿದ ಆತ್ಮಕ್ಕೆ ಹೇಗೆ ಶಾಂತಿ ಕೋರಲಿ" ಎಂದು ಆಪ್ತ ಗೆಳೆಯ ಹಾಗೂ ನಟ ಶಿವರಾಜ್‌ ಕೆ.ಆರ್ ಪೇಟ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.

ರಾಕೇಶ್ ಪೂಜಾರಿ ಸಾವಿನ ಸುದ್ದಿ ತಿಳಿದು ಕಿರುತೆರೆಯ ಸೆಲೆಬ್ರೆಟಿಗಳು ಶೋಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಿರಿಕ್ ಕೀರ್ತಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಾಕೇಶ್ ಪೂಜಾರಿ ಹಠಾತ್ ನಿಧನದ ಸುದ್ದಿ ತಿಳಿದು ಶಾಂತಿ ಕೋರಿದ್ದಾರೆ. "ಬೆಳ್ಳಂಬೆಳಗ್ಗೆ ಇದೆಂಥಾ ಕೆಟ್ಟ ಸುದ್ದಿ.. ರಾಕೇಶ್ ಪೂಜಾರಿ ಇನ್ನಿಲ್ಲ.. ಸದಾ ಹಸನ್ಮುಖಿ, ಎಲ್ಲರನ್ನೂ ಅಣ್ಣ, ಅಕ್ಕ ಅಂತ ಮಾತಾಡಿಸ್ತಿದ್ದ ಪ್ರೀತಿಯ ಸಹೋದರ.. ಇಷ್ಟು ಚಿಕ್ಕ ವಯಸ್ಸಲ್ಲಿ ಅದೆಂಥಾ ಕ್ರೂರ ಈ ವಿಧಿಯಾಟ.. ಹೃದಯಾಘಾತವಾಗೋ ವಯಸ್ಸಾ ಇದು..? ಕನಸುಗಳ ನನಸು ಮಾಡೋ ಜಿದ್ದಿಗೆ ಬಿದ್ದಿದ್ದ ನಿನ್ನ ಈ ಸಾವಿನ ಸುದ್ದಿ ನಮ್ಮನ್ನು ಕಂಗೆಡಿಸಿದೆ ತಮ್ಮ.. ಹೋಗಿ ಬಾ... ಚಿರಶಾಂತಿ ಸಿಗಲಿ‌.." ಎಂದು ಸಂತಾಪ ಸೂಚಿಸಿದ್ದಾರೆ.

Take a Poll

ಹಾಸ್ಯದಿಂದ ಎಲ್ಲರನ್ನೂ ನಗಿಸುತ್ತಿದ್ದ ರಾಕೇಶ್ ಪೂಜಾರಿ ಕಷ್ಟದ ದಿನಗಳನ್ನು ಕಂಡಿದ್ದಾರೆ. ಮನೆಗೆ ಇವರೇ ಆಧಾರವಾಗಿದ್ದರು. ಕಿರುತೆರೆಯ ರಿಯಾಲಿಟಿ ಶೋ, ಧಾರಾವಾಹಿಗಳಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಸಿನಿಮಾಗಳಲ್ಲಿ ನಟಿಸುವ ಕನಸು ಕಂಡಿದ್ದರು. ಸಿನಿಮಾದಲ್ಲಿ ಅದಾಗಲೇ ಅವರ ವೃತ್ತಿ ಜೀವನ ಆರಂಭ ಆಗಿತ್ತು. ಅಷ್ಟರೊಳಗೆ ವಿಧಿಯಾಟಕ್ಕೆ ರಾಕೇಶ್ ಪೂಜಾರಿ ಬಲಿಯಾಗಿದ್ದಾರೆ. ರಾಕೇಶ್ ಪೂಜಾರಿ ಅಮ್ಮ ಹಾಗೂ ತಂಗಿಯನ್ನು ಅಗಲಿದ್ದಾರೆ.

More from Filmibeat

English summary
Comedy Khiladigalu fame Rakesh Pujari passes away due to heart attack.
Read more about: actor death heart attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X