ಅಪಘಾತ ಪ್ರಕರಣಕ್ಕೆ ತಿರುವು: ದರ್ಶನ್ ಜೊತೆಗಿದ್ದ ರಾಯ್ ಅಂಟೋನಿಗೆ ಈಗ ಕಂಟಕ

ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಚಲಿಸುತ್ತಿದ್ದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತವಾದ ಘಟನೆ ದಿನದಿಂದ ದಿನಕ್ಕೆ ತಿರುವುಗಳನ್ನ ಪಡೆದುಕೊಳ್ಳುತ್ತಿದೆ.

ಸದ್ಯದ ಮಾಹಿತಿವರೆಗೂ ದರ್ಶನ್ ಕಾರು ಅಪಘಾತ ನಡೆದ ಸಂದರ್ಭದಲ್ಲಿ ರಾಯ್ ಆಂಟೋನಿ ಎಂಬುವರು ಕಾರು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಇದುವರೆಗೂ ಯಾರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ. ಸ್ವತಃ ಪೊಲೀಸರೇ ಸ್ವಯಂ ದೂರು ದಾಖಲಿಸಿಕೊಂಡು ಸಾಮಾನ್ಯ ಅಪಘಾತವೆಂದು ಪ್ರಕರಣ ದಾಖಲಿಸಿದ್ದರು.

ಇದೀಗ, ದರ್ಶನ್ ಆಪ್ತ ಹಾಗೂ ಸ್ನೇಹಿತ ಎಂದು ಹೇಳಲಾಗುತ್ತಿರುವ ರಾಯ್ ಆಂಟೋನಿ ವಿರುದ್ಧ ಕಂಪ್ಲೆಂಟ್ ರಿಜಿಸ್ಟರ್ ಆಗಿದೆ ಎನ್ನಲಾಗಿದೆ. ಈ ಅಪಘಾತಕ್ಕೆ ರಾಯ್ ಆಂಟೋನಿ ಕಾರಣ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ದೂರು ನೀಡಲಾಗಿದೆಯಂತೆ. ಅಷ್ಟಕ್ಕೂ, ದೂರು ನೀಡಿದ್ದು ಯಾರು.? ಮುಂದೆ ಓದಿ.....

ದರ್ಶನ್ ಗನ್ ಮ್ಯಾನ್ ನಿಂದ ದೂರು

ದರ್ಶನ್ ಗನ್ ಮ್ಯಾನ್ ನಿಂದ ದೂರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಖಾಸಗಿ ಗನ್ ಮ್ಯಾನ್ ಲಕ್ಷ್ಮಣ್ ಅವರಿಂದ ರಾಯ್ ಆಂಟೋನಿ ವಿರುದ್ಧ ದೂರು ದಾಖಲಾಗಿದೆ. ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದ್ದು, ಈ ಅಪಘಾತಕ್ಕೆ ರಾಯ್ ಆಂಟೋನಿ ಕಾರಣ, ಅವರ ವಿರುದ್ಧ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಹೇಳಲಾಗಿದೆ.

ಚಾಲಕನ ನಿರ್ಲಕ್ಷ್ಯ ಕಾರಣ

ಚಾಲಕನ ನಿರ್ಲಕ್ಷ್ಯ ಕಾರಣ

ನಸುಕಿನ ಜಾವ 2.30ಕ್ಕೆ ಆಡಿ ಕಾರು ಡ್ರೈವ್ ಮಾಡ್ತಿದ್ದ ಆಂಟೋನಿ ರಾಯ್ ಅವರ ನಿರ್ಲಕ್ಷ್ಯತನ ದಿಂದ ಈ ಅಪಘಾತ ಸಂಭವಿಸಿದೆ. ಅತಿಯಾದ ವೇಗ ಮತ್ತು ನಿರ್ಲಕ್ಷ್ಯದಿಂದಲೇ ಆಕ್ಸಿಡೆಂಟ್ ಆಗಿದೆ. ಹಾಗಾಗಿ, ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಆರೋಪಿಸಿದ್ದಾರೆ.

ರಾಯ್ ಆಂಟೋನಿ ಎಲ್ಲಿದ್ದಾರೆ.?

ರಾಯ್ ಆಂಟೋನಿ ಎಲ್ಲಿದ್ದಾರೆ.?

ಕಾರು ಅಪಘಾತದಲ್ಲಿ ರಾಯ್ ಆಂಟೋನಿ ಅವರಿಗೂ ಗಾಯಗಳಾಗಿವೆ. ಅವರು ಕೂಡ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಇದುವರೆಗೂ ಅವರ ಆರೋಗ್ಯದ ಬಗ್ಗೆ ಮಾಹಿತಿ ಇಲ್ಲ. ಕಾರಿನಲ್ಲಿ ಒಟ್ಟು ನಾಲ್ಕು ಜನ ಇದ್ದರು. ದರ್ಶನ್ ಕಾರಿನ ಮುಂದೆ ಸೀಟಿನಲ್ಲಿ, ಹಾಗೂ ಹಿಂಬದಿ ಸೀಟಿನಲ್ಲಿ ದೇವರಾಜ್ ಮತ್ತು ಪ್ರಜ್ವಲ್ ಇದ್ದರು ಎನ್ನಲಾಗಿದೆ. ಹಿನಕಲ್ ಬಳಿ ರಿಂಗ್ ರಸ್ತೆ ಜಂಕ್ಷನ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಅಪಘಾತವಾಗಿದೆಯಂತೆ.

ಯಾರು ಈ ರಾಯ್ ಆಂಟೋನಿ.?

ಯಾರು ಈ ರಾಯ್ ಆಂಟೋನಿ.?

ರಾಯ್ ಆಂಟೋನಿ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಎಂದು ಹೇಳಲಾಗಿದೆ. ದರ್ಶನ್ ಅವರ ಸ್ನೇಹಿತರಾಗಿದ್ದರು. ಮತ್ತು ದರ್ಶನ್ ಅವರ ಕಾರನ್ನ ಇವರೇ ಚಾಲನೆ ಮಾಡ್ತಿದ್ದರು ಎಂದು ಹೇಳಲಾಗ್ತಿದೆ. ತುಂಬಾ ವರ್ಷದಿಂದ ದರ್ಶನ್ ಅವರ ಆಪ್ತ ವಲಯದಲ್ಲಿ ರಾಯ್ ಆಂಟೋನಿ ಗುರುತಿಸಿಕೊಂಡಿದ್ದಾರೆ.

More from Filmibeat

English summary
Darshan personal gunman Lakshman has failed Complaint against darshan car driver roy antony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X