ರೌಡಿ ಶೀಟರ್ ಜೊತೆ ಪಾರ್ಟಿ, ಬಿಲ್ಡಪ್.. ಡಾಗ್ ಸತೀಶ್‌ ವಿರುದ್ಧ ದೂರ; ರೀಲ್ಸ್ ತಂದ ಸಂಕಷ್ಟ

ಬಿಗ್ ಬಾಸ್‌ಗೆ ಹೋಗಿ ಬಂದ್ಮೇಲೆ ಡಾಗ್ ಸತೀಶ್ (ಕ್ಯಾಡಬಾಮ್ ಸತೀಶ್) ಸಿಕ್ಕಾಪಟ್ಟೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರೀಲ್ಸ್ ಮಾಡಿ ಕಿಚ್ಚ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೊಂದು ರೀಲ್ಸ್ ಮಾಡುವುದಕ್ಕೆ ಹೋಗಿ ಸಂಕಷ್ಟಕ್ಕೆ ಸಿಕ್ಕಿಕಕೊಂಡಿದ್ದಾರೆ. ಪೊಲೀಸ್ ರಾಣೆಯಲ್ಲಿ ಇವರ ವಿರುದ್ಧ ದೂರು ದಾಖಲಾಗಿದೆ.

ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಡಾಗ್ ಸತೀಶ್‌ಗೆ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ತಮ್ಮ ಖಾತೆಯಲ್ಲಿ ಆಗಾಗ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದಕ್ಕಿಂತ ಹೆಚ್ಚಾಗಿ ಆಗಾಗ ಬಿಲ್ಡಪ್‌ ರೀಲ್ಸ್‌ ಹಾಕಿ ಎಂಜಾಯ್ ಮಾಡುತ್ತಿರುತ್ತಾರೆ. ಇದೇ ವಿಡಿಯೋ ಈಗ ಅವರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಹೌದು, ರೌಡಿ ಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಲ್ಡಪ್ ಕೊಡುತ್ತಾ ಕಾಣಿಸಿಕೊಂಡಿದ್ದ ಡಾಗ್ ಸತೀಶ್ ಈಗ ಪೊಲೀಸರ ಅತಿಥಿಯಾಗುವ ಸಾಧ್ಯತೆಯಿದೆ.

Complaint register against Dog Sathish for making reels with Rowdy Sheeter

ಇತ್ತೀಚೆಗೆ ಡಾಗ್ ಸತೀಶ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ರೌಡಿ ಶೀಟರ್ ಪಿ ಮೂರ್ತಿ ಜೊತೆ ಕಾಣಿಸಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ದೂರು ದಾಖಲಾಗಿದೆ. ಅಷ್ಟಕ್ಕೂ ಏನಿದು ಕೇಸ್? ದೂರು ದಾಖಲಾಗಿದ್ದು ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.

ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಡಾಗ್ ಸತೀಶ್ ಸೋಶಿಯಲ್ ಮೀಡಿಯಾಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಒಂದಲ್ಲ ಒಂದು ದಿನ ವಿಡಿಯೋವನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದರಲ್ಲಿ ಕೆಲವೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು ಇದೆ. ಇದೇ ತಿಂಗಳು 13ನೇ ತಾರೀಕು ಆರ್‌ಟಿ ನಗರದ ಪಾರ್ಟಿ ಹಾಲ್‌ನಲ್ಲಿ ಬರ್ತ್‌ಡೇ ಪಾರ್ಟಿ ನಡೆದಿತ್ತು. ಆ ಪಾರ್ಟಿಗೆ ಡಾಗ್ ಸತೀಶ್‌ ಕೂಡ ಹೋಗಿದ್ದರು. ಈ ವೇಳೆ ಅವರು ರೌಡಿ ಶೀಟರ್ ಪಿ ಮೂರ್ತಿ ಜೊತೆ ಕಾಣಿಸಿಕೊಂಡಿದ್ದರು. ಇದೇ ವಿಡಿಯೋ ವೈರಲ್ ಆಗಿ ಈಗ ಸಂಕಷ್ಟಕ್ಕೆ ಸಿಲುಕಿದೆ.

Also Read
"ಮಹಿಳೆಯರು ಚಿನ್ನಕ್ಕಿಂತ ನೀಲಿ ಡ್ರಮ್‌ಗಳನ್ನು ಖರೀದಿ ಮಾಡ್ತಿದ್ದಾರೆ"; ಶಾಕಿಂಗ್ ಹೇಳಿಕೆ ಕೊಟ್ಟಿದ್ದೇಕೆ ಈ ನಟಿ?

ಈ ವಿಡಿಯೋದಲ್ಲಿ ಡಾಗ್ ಸತೀಶ್ ರೌಡಿ ಶೀಟರ್ ವಿ ಮೂರ್ತಿ ಜೊತೆ ಬರ್ತ್‌ಡೇ ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ. ಸಾಲದ್ದಕ್ಕೆ ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿಯೂ ಶೇರ್ ಮಾಡಿಕೊಂಡಿದ್ದರು. ಅದ್ಯಾವಾಗ ಈ ವಿಡಿಯೋ ವೈರಲ್ ಆಯ್ತೋ ಅಲ್ಲಿಂದ ನೆಟ್ಟಿಗರು ಕಿಡಿಕಾರುವುದಕ್ಕೆ ಶುರು ಮಾಡಿದ್ದರು. ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದಕ್ಕೆ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದರು.

ಸೋಶಿಯಲ್‌ ಮೀಡಿಯಾದಲ್ಲಿ ಡಾಗ್ ಸತೀಶ್ ವಿರುದ್ಧ ಯಾವಾಗ ಆಕ್ರೋಶಗಳು ವ್ಯಕ್ತವಾಗುವುದಕ್ಕೆ ಶುರುವಾದವೋ ಈ ವಿಡಿಯೋ ಸಿಸಿಬಿಯ ಕಣ್ಣಿಗೆ ಬಿದ್ದಿತ್ತು. ಇದರ ಬೆನ್ನಲ್ಲೇ ಎತ್ತೆಚ್ಚ ಡಾಗ್ ಸತೀಶ್ ವಿಡಿಯೋ ಡಿಲೀಟ್ ಮಾಡಿದ್ದರು. ಆದರೂ ಇದನ್ನು ಇನ್ಸ್‌ಪೆಕ್ಟರ್ ಮಹದೇವಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಡಾಗ್ ಸತೀಶ್‌ಗೆ ಪೊಲೀಸರಿಂದ ಕರೆ ಬರುವ ಸಾಧ್ಯತೆಯಿದೆ. ಸಾಧ್ಯ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಾಗ್ ಸತೀಶ್ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಹೀಗೆ ಇಲ್ಲ ಸಲ್ಲದ ವಿಡಿಯೋಗಳನ್ನು ಪೋಸ್ಟ್ ಮಾಡಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದರಲ್ಲೂ ಕಿಚ್ಚ ಸುದೀಪ್ ಹಾಡನ್ನು ಬಳಸಿ ಮಾಡಿದ ವಿಡಿಯೋ ಡಾಗ್ ಸತೀಶ್‌ಗೆ ಸೆಲೆಬ್ರೆಟಿಗಳಿಂದ ಹಿಡಿದು, ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದರು.

More from Filmibeat

English summary
Complaint register against Dog Sathish for making reels with Rowdy Sheeter.
Read more about: complaint police
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X