ಮಧು ಬಂಗಾರಪ್ಪ ಮುನಿಸಿಕೊಂಡ ಬೆನ್ನಲ್ಲೇ ಶಿವಣ್ಣನ ಮನೆಗೆ ಸುರ್ಜೆವಾಲ ಭೇಟಿ? ಮಂತ್ರಿ ಆಗ್ತಾರಾ?

ಚುನಾವಣೆ ಮುಗಿದಿದೆ.. ಫಲಿತಾಂಶವೂ ಬಂದಿದ್ದಾಗಿದೆ.. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಶಾಸಕು ಪ್ರಮಾಣ ವಚನ ಸ್ವೀಕರಿಸಿದ್ದೂ ಆಗಿದೆ. ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವುದರಲ್ಲಿ ಬ್ಯುಸಿಯಾಗಿದೆ.

ಈ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಣ್‌ದೀಪ್ ಸಿಂಗ್ ಸುರ್ಜೆವಾಲ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಶಿವಣ್ಣ ಹಾಗೂ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.

Congress Leader Randeep Singh Surjewala Met Shivarajkumar and Geetha Shivarajkumar

ರಣ್‌ದೀಪ್ ಸಿಂಗ್ ಸುರ್ಜೆವಾಲ ಬೆಂಗಳುರಿನ ನಾಗಾವರದಲ್ಲಿರೋ ಶಿವಣ್ಣನ ಮನೆಗೆ ಭೇಟಿ ನೀಡಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶಿವಣ್ಣ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಷ್ಟೇ ಧನ್ಯವಾದ ಹೇಳಲು ಸುರ್ಜೇವಾಲ ತೆರಳಿದ್ದರು. ವಿಷಯ ಇಷ್ಟೇನೆ ಇದೆಯಾ? ಅಥವಾ ಬೇರೆನಾದರೂ ಇದೆಯಾ? ಅನ್ನೋದನ್ನು ತಿಳಿಯಲು ಮುಂದು ಓದಿ.

ಶಿವಣ್ಣ ಮನೆಗೆ ಸುರ್ಜೆವಾಲ

ಚುನಾವಣೆಗೂ ಮುನ್ನ ಶಿವಣ್ಣನ ಪತ್ನಿ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಅದಕ್ಕೂ ಮುನ್ನ ಸಹೋದರ ಮಧು ಬಂಗಾರಪ್ಪ ಕೂಡ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಹೀಗಾಗಿ ಶಿವಣ್ಣ ಮೊದಲು ಮಧು ಬಂಗಾರಪ್ಪ ಪರ ಪ್ರಚಾರ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆ ಬಳಿಕ ಕಾಂಗ್ರೆಸ್ ಮುಖಂಡರ ಪರ ಪ್ರಚಾರಕ್ಕೆ ಮಾಡಿದರು.

ಈ ಬಾರಿಯ ಚುನಾವಣೆಯಲ್ಲಿ ಶಿವಣ್ಣ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ, ರಣ್‌ದೀಪ್ ಸಿಂಗ್ ಸುರ್ಜೆವಾಲ ಅವರ ಮನಗೆ ತೆರಳಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೆ ಕೆಲ ಹೊತ್ತು ಮಾತುಕತೆ ಕೂಡ ನಡೆಸಿದ್ದಾರೆ. ಅಷ್ಟಕ್ಕೂ ಕಾಂಗ್ರಸ್ ಬೆಂಬಲಿಸಿದ್ದಕ್ಕೆ ಧನ್ಯವಾದ ಅಷ್ಟೇ ಹೇಳಲು ಬಂದಿದ್ರಾ? ಅಥವಾ ಬೇರೆ ಏನಾದರೂ ಚರ್ಚೆ ಮಾಡಿದ್ದಾರೆ? ಅನ್ನೋ ಕುತೂಹಲ ಅಭಿಮಾನಿಗಳದ್ದು.

Congress Leader Randeep Singh Surjewala Met Shivarajkumar and Geetha Shivarajkumar

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರು

ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲ್ಲುತ್ತಿದ್ದಂತೆ, ಗೀತಾ ಶಿವರಾಜ್‌ಕುಮಾರ್ "ನನ್ನ ತಮ್ಮ ಮಂತ್ರಿಯಾಗುತ್ತಾನೆ" ಎಂದು ಹೇಳಿದ್ದರು. ಆದರೆ, ಮೇ 20 ರಂದು ನಡೆದ ಮೊದಲ ಸಚಿವ ಸಂಪುಟ ವಿಸ್ತರಣೆಯಲ್ಲಿ 8 ಮಂದಿ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿತ್ತು. ಇದರಿಂದ ಮಧು ಬಂಗಾರಪ್ಪ ಬೇಸರಗೊಂಡು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ.

ಮಧು ಬಂಗಾರಪ್ಪ ಬೇಸರಗೊಂಡಿರುವ ಬೆನ್ನಲ್ಲೇ ರಣ್‌ದೀಪ್ ಸುರ್ಜೇವಾಲ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಪತ್ನಿ ಗೀತಾ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ನಡೆದ ಮಾತುಕತೆಯಲ್ಲಿ ಮಧು ಬಂಗಾರಪ್ಪ ಸಚಿವ ಸ್ಥಾನದ ಬಗ್ಗೆ ಚರ್ಚೆಯಾಗಿರಬಹುದು ಎಂದು ಹೇಳಲಾಗುತ್ತಿದೆ.

ಶಿವಣ್ಣ ಪ್ರಚಾರ ಮಾಡಿದವರೆಲ್ಲರೂ ವಿನ್

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶಿವಣ್ಣ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಶಿವಣ್ಣ ಪ್ರಚಾರ ಮಾಡಿದವರೆಲ್ಲರೂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಚುನಾವಣೆಯಲ್ಲಿ ಮಧು ಬಂಗಾರಪ್ಪ ಪರ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಪ್ರಚಾರ ಮಾಡಿದ್ದರು.

ಮಧು ಬಂಗಾರಪ್ಪ ಜೊತೆ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಶಿರಸಿಯ ಭೀಮಣ್ಣ ನಾಯ್ಕ, ಸಿಎಂ ಸಿದ್ಧರಾಮಯ್ಯ ಪರ ಪ್ರಚಾರ ಮಾಡಿದ್ದರು. ಅವರೆಲ್ಲವೂ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ.

More from Filmibeat

English summary
Congress Leader Randeep Singh Surjewala Met Shivarajkumar and Geetha Shivarajkumar, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X