ವೀಕೆಂಡ್ ಕರ್ಫ್ಯೂ ಕ್ಯಾನ್ಸಲ್ ಆಗುತ್ತಿದ್ದಂತೆ 'ರೌಡಿ ಬೇಬಿ'ಯಾದ ದಿವ್ಯಾ ಸುರೇಶ್: ಮ್ಯಾಟರ್ ಏನು?

ನೈಟ್ ಕರ್ಫ್ಯೂ ವೇಳೆ ಗಲಾಟೆ. ಮೊನ್ನೆ ಮೊನ್ನೆ ಅಪಘಾತ. ನಟಿ ದಿವ್ಯಾ ಸುರೇಶ್ ನಸೀಬು ಯಾಕೋ ಸರಿಯಿಲ್ಲ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ನಡೆಯುತ್ತಿರುವಾಗಲೇ ದಿವ್ಯಾ ಸುರೇಶ್ ನಟಿಸಿದ ಸಿನಿಮಾವೊಂದು ಬಿಡುಗಡೆ ಸಜ್ಜಾಗಿ ನಿಂತಿದೆ. ಅಂದುಕೊಂಡಿದ್ದಕ್ಕಿಂತ ಮೊದಲೇ ಈ ಸಿನಿಮಾ ರಿಲೀಸ್ ರೆಡಿಯಾಗಿದ್ದು, ಎಲ್ಲಾ ವೀಕೆಂಡ್ ಕರ್ಫ್ಯೂ ಮಹಿಮೆ ಎನ್ನುತ್ತಿದೆ ಸ್ಯಾಂಡಲ್‌ವುಡ್.

ಕೆಲವು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ತೆಗೆದು ಹಾಕಿತ್ತು. ಹೀಗಾಗಿ ಆತಂಕದಲ್ಲಿದ್ದ ಕನ್ನಡ ಚಿತ್ರರಂಗ ಮತ್ತೆ ಸಿನಿಮಾಗಳನ್ನು ಬಿಡುಗಡೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ನಿರ್ಮಾಪಕರು, ನಿರ್ದೇಶಕರು ಸಿನಿಮಾ ಬಿಡುಗಡೆಗೆ ವಿಶೇಷ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಒಂದೊಂದೇ ಸಿನಿಮಾಗಳು ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುತ್ತಿದೆ. ಇದರಲ್ಲಿ ದಿವ್ಯಾ ಸುರೇಶ್ ಅಭಿನಯದ ರೌಡಿ ಬೇಬಿ ಸಿನಿಮಾ ಕೂಡ ಸೇರಿದೆ.

ಪ್ರೇಮಿಗಳ ದಿನಕ್ಕೂ ಮುನ್ನವೇ 'ರೌಡಿ ಬೇಬಿ' ರಿಲೀಸ್

ಈ ಹಿಂದೆ ದಿವ್ಯಾ ಸುರೇಶ್ ಅಭಿನಯದ 'ರೌಡಿ ಬೇಬಿ' ಸಿನಿಮಾ ಫೆಬ್ರವರಿ 14, ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಸಿನಿಮಾ ಮೂರು ದಿನ ಮುನ್ನವೇ ರಿಲೀಸ್ ಆಗಲಿದೆ. ಫೆಬ್ರವರಿ 11 ರಂದು ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ತಮಿಳಿನಲ್ಲಿ ಧನುಷ್ ಹಾಗೂ ಸಾಯಿ ಪಲ್ಲವಿ ನಟಿಸಿದ್ದ 'ಮಾರಿ 2' ಚಿತ್ರದ 'ರೌಡಿ ಬೇಬಿ' ಹಾಡು ಸೂಪರ್ ಹಿಟ್ ಆಗಿತ್ತು. ಅದೇ ಹಾಡಿನ ಟೈಟಲ್ ಇಟ್ಟು ಸಿನಿಮಾ ನಿರ್ಮಾಣ ಮಾಡಲಾಗಿತ್ತು.

Controversy Actress Divya Suresh SS Ravi Gowda Starrer Rowdy Baby Movie Releasing on Feb 11th

'ರೌಡಿ ಬೇಬಿ' ಸಿನಿಮಾವನ್ನು ಕೃಷ್ಣಾ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ದಿವ್ಯಾ ಸುರೇಶ್ ಜೊತೆ ಎಸ್ ಎಸ್ ರವಿಗೌಡ ನಾಯಕನಾಗಿ ನಟಿಸಿದ್ದಾರೆ. ದಿವ್ಯಾ ಜೊತೆ ಹೀರಾ ಕೌರ್ ಮತ್ತೊಬ್ಬ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿರುವ ಇನ್ನೆರಡು ಪ್ರಮುಖ ಪಾತ್ರಗಳೆಂದರೆ, ಅಮಿತ್, ಕೆಂಪೇಗೌಡ.

'ರೌಡಿ ಬೇಬಿ' ಸಸ್ಪೆನ್ಸ್ ರೊಮ್ಯಾಂಟಿಕ್ ಥ್ರಿಲ್ಲರ್

'ರೌಡಿ ಬೇಬಿ' ಪಕ್ಕಾ ಸಸ್ಪೆನ್ಸ್ ರೊಮ್ಯಾಂಟಿಕ್ ಥ್ರಿಲ್ಲರ್. ಪ್ರೀತಿ, ಬದುಕು ಹಾಗೂ ಭಾವನೆಗಳನ್ನೇ ಮುಖ್ಯ ವಿಷಯಗಳನ್ನಾಗಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ರವಿಗೌಡ ಮತ್ತು ದಿವ್ಯಾ ಸುರೇಶ್ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ಎರಡನೇ ಹಿರೋಯಿನ್ ಆಗಿ ಹೀರ್ ಕೌರ್ ಅಭಿನಯಿಸಿದ್ದಾರೆ. ಸಾಮ್ರಾಟ್ ಛಾಯಾಗ್ರಾಹಣ, ಕಾರ್ತಿಕೇಯ ಮೂರ್ತಿ ಮತ್ತು ಎಸ್‌ಎ ಅರ್ಮಾನ್ 'ರೌಡಿ ಬೇಬಿ' ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Controversy Actress Divya Suresh SS Ravi Gowda Starrer Rowdy Baby Movie Releasing on Feb 11th
ವಾರ್‌ಫೂಟ್ ಸ್ಟುಡಿಯೋಸ್ 'ರೌಡಿ ಬೇಬಿ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. 'ರೌಡಿ ಬೇಬಿ' ಸಿನಿಮಾದಲ್ಲಿ ದಿವ್ಯಾ ಸುರೇಶ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೃಶ್ಯವೊಂದರಲ್ಲಿ ದಿವ್ಯಾ ಸುರೇಶ್ ಲಿಪ್ ಲಾಕ್ ಮಾಡಿದ ಪೋಟೊಗಳು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಹೀಗಾಗಿ 'ರೌಡಿ ಬೇಬಿ' ನಿಧಾನವಾಗಿಯೇ ಸದ್ದು ಮಾಡಲು ಆರಂಭಿಸಿದೆ. ಇನ್ನು ಇತ್ತೀಚೆಗಷ್ಟೇ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಪ್ರಚಾರಕ್ಕೆ ದಿವ್ಯಾ ಸುರೇಶ್ ಬರುವುದು ಕೂಡ ಅನುಮಾನವೆನ್ನಲಾಗಿದೆ.

More from Filmibeat

English summary
Controversy actress Divya Suresh SS Ravi Gowda starrer Rowdy Baby movie releasing on feb 11th. Reality show star Rowdy Baby movie supposed to release valentines day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X