For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದ ಯಾವ್ಯಾವ ಪ್ರದೇಶದಲ್ಲಿ ನಿರಂತರವಾಗಿ ಸಿನಿಮಾ ಶೂಟಿಂಗ್ ಆಗುತ್ತೆ? ಅಲ್ಲಿ ವೈಶಿಷ್ಟ್ಯವೇನು?

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕಂಡ ಕನಸು ಸಾರ್ಥಕಗೊಂಡಿದೆ. ಕರ್ನಾಟಕ ಪ್ರಕೃತಿ ಸೌಂದರ್ಯವನ್ನು 'ಗಂಧದ ಗುಡಿ'ಯಲ್ಲಿ ಕಟ್ಟಿಕೊಡುವ ಪ್ರಯತ್ನಕ್ಕೆ ಸಫಲವಾಗಿದೆ. ಕನ್ನಡದ ಕಾಡು,ಜಲ,ಪ್ರಾಣಿ, ಪಕ್ಷಿಗಳನ್ನು ತೆರೆಮೇಲೆ ಕಟ್ಟುಕೊಟ್ಟಿದ್ದಾರೆ.

  ಕರ್ನಾಟಕದ ಪ್ರಕೃತಿ ಸೌಂದರ್ಯ ಮರುಳಾಗದವರೇ ಇಲ್ಲ. ದೇಶ-ವಿದೇಶದ ಮೂಲೆ ಮೂಲೆಯಿಂದ ಜನರು ಕರ್ನಾಟಕಕ್ಕೆ ಪ್ರತಿವರ್ಷ ವಿಸಿಟ್ ಹಾಕುತ್ತಾರೆ. ಕರ್ನಾಟಕದ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗುತ್ತಾರೆ. ಇಲ್ಲಿನ ಸೌಂದರ್ಯವನ್ನು ಸಿನಿಮಾಗಳಲ್ಲೂ ಕಟ್ಟಿಕೊಡುವ ಪ್ರಯತ್ನವನ್ನು ಸಿನಿಮಾ ನಿರ್ದೇಶಕರು ಕೂಡ ಮಾಡಿದ್ದಾರೆ.

  ಪುನೀತ್ ರಾಜ್‌ಕುಮಾರ್‌ಗೆ 'ಕರ್ನಾಟಕ ರತ್ನ': ವೀರೇಂದ್ರ ಹೆಗ್ಗಡೆ ಹರ್ಷಪುನೀತ್ ರಾಜ್‌ಕುಮಾರ್‌ಗೆ 'ಕರ್ನಾಟಕ ರತ್ನ': ವೀರೇಂದ್ರ ಹೆಗ್ಗಡೆ ಹರ್ಷ

  ಕರ್ನಾಟಕದಲ್ಲಿ ಕೆಲವು ಪ್ರದೇಶಗಳಲ್ಲಿ ನಿರಂತರವಾಗಿ ಸಿನಿಮಾ ಶೂಟಿಂಗ್ ನಡೆಯುತ್ತಲೇ ಇರುತ್ತೆ. ಸಿನಿಮಾ ಮಂದಿಗೆ ಇಲ್ಲಿನ ಕೆಲವು ಪ್ರದೇಶಗಳು ತುಂಬಾನೇ ಇಷ್ಟ. ಹೀಗಾಗಿ ನಿರಂತರವಾಗಿ ಅದೇ ಪ್ರದೇಶದ ಬೇರೆ ಬೇರೆ ಆಯಾಮಗಳಲ್ಲಿ ಸಿನಿಮಾ ಶೂಟಿಂಗ್ ಮಾಡುತ್ತಾರೆ. ಕರ್ನಾಟಕದಲ್ಲಿ ನಿರಂತರವಾಗಿ ಚಿತ್ರೀಕರಣ ಆಗುವ ಪ್ರದೇಶಗಳು ಯಾವುವು? ಆ ಪ್ರದೇಶದ ವೈಶಿಷ್ಟ್ಯತೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

   ಕೊಡಗು

  ಕೊಡಗು

  ಕರ್ನಾಟಕ ಕೊಡುಗು ಜಿಲ್ಲೆಯನ್ನು ಭಾರತದ ಸ್ಕಾಟ್‌ಲ್ಯಾಂಡ್ ಅಂತಲೇ ಕರೆಯುತ್ತಾರೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ. ಕಾಫಿ ತೋಟ, ಬೆಟ್ಟ ಗುಡ್ಡಗಳು, ಸಿನಿಮಾ ಮಂದಿಗೆ ತುಂಬಾನೇ ಅಚ್ಚುಮೆಚ್ಚು. ಕೊಡಗಿನ ಹಲವೆಡೆಗಳಲ್ಲಿ ಕನ್ನಡದ ಸಾಕಷ್ಟು ಸಿನಿಮಾಗಳನ್ನು ಚಿತ್ರೀಕರಣ ಮಾಡಲಾಗಿದೆ. ಗಾಳಿಪಟ, ಮುಂಗಾರು ಮಳೆ ಸೇರಿದಂತೆ 'ಸಾಥ್ ಕೂನ್ ಮಾಫ್' ಅಂತಹ ಬಾಲಿವುಡ್ ಸಿನಿಮಾಗಳನ್ನೂ ಕೂಡ ಇಲ್ಲಿ ಶೂಟ್ ಮಾಡಲಾಗಿದೆ.

  ಹಂಪಿ

  ಹಂಪಿ

  ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪವಿರುವ ಹಲವು ಸ್ಥಳಗಳು ಹಂಪಿಯಲ್ಲಿವೆ. ಇವುಗಳ ವೀಕ್ಷಣೆಗೆಂದೇ ದೇಶ-ವಿದೇಶದಿಂದ ಹಂಪಿಗೆ ಬರುತ್ತಾರೆ. ಹಾಗೇ ಕನ್ನಡ, ಹಿಂದಿ ಸಿನಿಮಾ ಸೇರಿದಂತೆ ಹಲವು ಭಾಷೆಯ ಸಿನಿಮಾಗಳನ್ನು ಇಲ್ಲಿ ಶೂಟ್ ಮಾಡಿದ್ದಾರೆ. ಸಿನಿಮಾ ಮಂದಿಗೆ ಹಂಪಿ ಅಚ್ಚು ಮೆಚ್ಚಿನ ಪ್ರದೇಶ. ಇಲ್ಲಿ ಇಂಗ್ಲಿಷ್ ಸಿನಿಮಾ 'ದಿ ಮಿಥ್' ಶೂಟಿಂಗ್ ನಡೆದಿದೆ. ಕನ್ನಡದಲ್ಲಂತೂ ನೂರೆಂಟು ಸಿನಿಮಾಗಳ ಚಿತ್ರೀಕರಣ ಆಗಿದೆ. ಹೀಗಾಗಿ ಇಂದಿಗೂ ಹಂಪಿ ಸಿನಿಮಾ ಮಂದಿಯ ನೆಚ್ಚಿನ ತಾಣ.

   ನಂದಿ ಬೆಟ್ಟ

  ನಂದಿ ಬೆಟ್ಟ

  ಬೆಂಗಳೂರಿಗೆ ತೀರಾ ಸಮೀಪವಿರುವ ಸುಪ್ರಸಿದ್ಧ ಪ್ರದೇಶ ಅಂದರೆ, ಅದು ನಂದಿ ಹಿಲ್ಸ್. ಇಲ್ಲೂ ಕೂಡ ಹಲವು ಸಿನಿಮಾಗಳನ್ನು ಶೂಟಿಂಗ್ ಮಾಡಲಾಗಿದೆ. ಪರಿಶುದ್ಧ ಗಾಳಿ, ಕ್ಯಾಮರಾ ಕಣ್ಣಲ್ಲಿ ಸೆರೆಯಾಗುವ ಅದ್ಭುತ ದೃಶ್ಯಗಳಿಗಾಗಿ ಇಲ್ಲಿ ಶೂಟಿಂಗ್‌ಗೆ ಹೋಗುತ್ತಾರೆ. ಕನ್ನಡದ 'ಪಟ್ರೆ ಲವ್ ಪದ್ಮಾ' ಸೇರಿದಂತೆ ಹಲವು ಸಿನಿಮಾಗಳನ್ನು ಇಲ್ಲಿಯೇ ಶೂಟ್ ಮಾಡಿದ್ದಾರೆ.

   ಬೆಂಗಳೂರು ಪ್ಯಾಲೇಸ್

  ಬೆಂಗಳೂರು ಪ್ಯಾಲೇಸ್

  ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಯಲ್ಲಿಯೂ ಶೂಟಿಂಗ್ ಆಗುತ್ತೆ. ಆದರೆ, ಬೆಂಗಳೂರು ಪ್ಯಾಲೇಸ್‌ ಸಿನಿಮಾ ಮಂದಿ ಫೇವರಿಟ್ ಪ್ಲೇಸ್, ಬಾಲಿವುಡ್‌ನ 'ಕೂಲಿ ನಂ 1', ' ರೌಡಿ ರಾಥೋರ್' ಸೇರಿದಂತೆ ಹಲವು ಸಿನಿಮಾಗಳು ಇಲ್ಲಿ ಚಿತ್ರೀಕರಣ ಆಗಿದೆ. ಅಲ್ಲದೆ ಇತ್ತೀಚೆಗೆ ತೆರೆಕಂಡ 'ಭರಾಟೆ'ಯ ಕೆಲವು ದೃಶ್ಯಗಳನ್ನು ಇಲ್ಲಿಯೇ ಶೂಟ್ ಮಾಡಲಾಗಿತ್ತು.

  ಬಾದಾಮಿ

  ಬಾದಾಮಿ

  ಜಗತ್ಪಸಿದ್ಧ ಬಾದಾಮಿ ಕೂಡ ಸಿನಿಮಾ ಮಂದಿಯೆ ಫೇವರಿಟ್. ಬಾದಾಮಿಯಲ್ಲಿ ಚಾಲುಕ್ಯ ಕಾಲದ ವಾಸ್ತುಶಿಲ್ಪದ ಸುಪ್ರಸಿದ್ಧ ದೇವಾಲಯಗಳು ಸಿನಿಮಾ ಮಂದಿಗೆ ಇಷ್ಟ. ಬಾಲಿವುಡ್‌ನ 'ರೌಡಿ ರಾಥೋರ್','ಗುರು' ಜೊತೆ ರಾಜಮೌಳಿ ಸಿನಿಮಾ 'ಮಗಧೀರ'ದ ಕೆಲವು ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

   ಶಿವಮೊಗ್ಗ

  ಶಿವಮೊಗ್ಗ

  ಶಿವಮೊಗ್ಗದ ಪ್ರಕೃತಿ ಸೌಂದರ್ಯ, ಕಾಡು ಸೇರಿದಂತೆ ಹಲವು ಪ್ರದೇಶಗಳನ್ನು ಸಿನಿಮಾ ಚಿತ್ರೀಕರಣಕ್ಕೆಂದು ಬಳಸಿಕೊಳ್ಳಲಾಗಿದೆ. ಸುಪ್ರಸಿದ್ಧ ಧಾರಾವಾಹಿ 'ಮಾಲ್ಗುಡಿ ಡೇಸ್' ಅನ್ನು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಚಿತ್ರೀಕರಿಸಲಾಗಿದೆ. ಇತ್ತೀಚೆಗಷ್ಟೇ ದಳಪತಿ ವಿಜಯ್ ಅಭಿನಯದ ತಮಿಳು ಸಿನಿಮಾ 'ಮಾಸ್ಟರ್' ಸಿನಿಮಾವನ್ನು ಶಿವಮೊಗ್ಗ ಜೈಲಿನಲ್ಲಿ ಶೂಟ್ ಮಾಡಲಾಗಿದೆ. ಹಾಗೇ ಮತ್ತೊಂದು ತಮಿಳು ಚಿತ್ರ 'ಕುಮ್ಕಿ' ಹಾಗೂ ಕನ್ನಡ ಸಿನಿಮಾ 'ಕಾನೂರು ಸುಬ್ಬಮ್ಮ ಹೆಗ್ಗಡತಿ' ಕೂಡ ಇಲ್ಲಿಯೇ ಶೂಟಿಂಗ್ ಮಾಡಲಾಗಿದೆ.

  ಮೈಸೂರು

  ಮೈಸೂರು

  ಕನ್ನಡ ಸಿನಿಮಾಗಳು ಅತೀ ಹೆಚ್ಚು ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಶೂಟ್ ಆಗುತ್ತೆ. ಅದರಲ್ಲೂ ಮೈಸೂರುನಲ್ಲಿ ಬೃಂದಾವನದಲ್ಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳ ಚಿತ್ರೀಕರಣ ಆಗಿದೆ. 80 ದಶಕದ ಸಿನಿಮಾ ಮಂದಿಗೆ ಮೈಸೂರು ಅಚ್ಚುಮೆಚ್ಚಿನ ಜಾಗ.

  English summary
  Coorg, Shimoga, Badami, Hampi Is the Frequently Used Shooting Places In Karnataka, Know More.
  Friday, November 4, 2022, 21:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X