ಪವಿತ್ರಾ ಗೌಡಗೆ ಮನೆಯೂಟ.. ದರ್ಶನ್‌ಗೂ ಗ್ರೀನ್‌ ಸಿಗ್ನಲ್ ಕೊಡುತ್ತಾ ಕೋರ್ಟ್? ರೂಲ್ಸ್ ಏನು?

ಮನೆಯಲ್ಲಿ ಐಷಾರಾಮಿ ಜೀವನ ನಡೆಸಿದವರು. ರುಚಿಯಾದ, ಶುಚಿಯಾದ ಆಹಾರವನ್ನು ಸವಿಯುತ್ತಿದ್ದವರು. ಈಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್ ಇಬ್ಬರೂ ಜೈಲೂಟ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ತಮಗೆ ಮನೆಯೂಟ ನೀಡುವಂತೆ ಆರೋಪಿಗಳು ತಮ್ಮ ವಕೀಲರ ಮೂಲಕ ಅರ್ಜಿಯನ್ನು ಸಲ್ಲಿಸಿದ್ದರು. ಈ ಪ್ರಕರಣದ ಮೊದಲ ಆರೋಪಿಯಾಗಿದ್ದ ಪವಿತ್ರಾ ಗೌಡ ಹಾಗೂ ಮೊದಲ ಆರೋಪಿ ದರ್ಶನ್ ಕೂಡ ಇದ್ದರು. ಆದರೆ, ನ್ಯಾಯಾಲಯ ಇವರ ಅರ್ಜಿಯನ್ನು ತಿರಸ್ಕರಿಸಿತ್ತು.

ಅದರಲ್ಲೂ ರೇಣುಕಾಸ್ವಾಮಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕವಂತೂ ಆರೋಪಿಗಳು ಜೈಲಿನಲ್ಲಿ ಕಠಿಣ ದಿನಗಳನ್ನು ಕಳೆಯುವಂತಾಗಿತ್ತು. ಜಾಮೀನು ಸಿಗುವುದು ಕಷ್ಟ ಅನ್ನೋದನ್ನು ಅರಿತಿದ್ದ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳು ಕನಿಷ್ಠ ಸೌಲಭ್ಯವೂ ಸಿಗುತ್ತಿಲ್ಲವೆಂದು ಆರೋಪಿಸಿ, ನ್ಯಾಯಾಲಯದ ಮೊರೆ ಹೋಗಿದ್ದರು. ಅದರಲ್ಲಿ ಮನೆಯೂಟ ನೀಡಬೇಕು ಎಂಬುವುದೂ ಆಗಿತ್ತು.

Court Grants Permission To Pavithra Gowda To Have Home Food In Jail What About Darshan

ಈ ಹಿಂದೆ ಮನೆಯೂಟದ ಬೇಡಿಕೆ ಇಟ್ಟಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ನಿನ್ನೆ (ಜನವರಿ 2) ಪವಿತ್ರಾ ಗೌಡಗೆ ಮನೆಯೂಟ ನೀಡುವುದಕ್ಕೆ ನ್ಯಾಯಾಲಯ ಅನುಮತಿಯನ್ನು ನೀಡಿದೆ. ಈ ಹಿನ್ನೆಲೆ ದರ್ಶನ್ ಕೂಡ ಮನೆಯೂಟಕ್ಕೆ ಅರ್ಜಿಯನ್ನು ಸಲ್ಲಿಸಬಹುದೆಂಬ ಚರ್ಚೆಯಾಗುತ್ತಿದೆ. ಅಲ್ಲದೆ ಅಡೆತಡೆಗಳು ಎದುರಾಗುತ್ತಾ? ಅನ್ನೋ ಬಗ್ಗೆನೂ ಚರ್ಚೆಯಿದೆ.

ಪವಿತ್ರಾ ಗೌಡ ಈ ಹಿಂದೆ ಕೂಡ ನ್ಯಾಯಾಲಯಕ್ಕೆ ಮನೆಯೂಟಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಕೋರ್ಟ್ ನಿರಾಕರಿಸಿತ್ತು. ಬಿಡದೆ ತಮ್ಮ ವಕೀಲರಿಂದ ಮತ್ತೆ ಮನವಿ ಮಾಡಿ ಅರ್ಜಿಯನ್ನು ಸಲ್ಲಿಸಿದ್ದರು. ಈಗ ನ್ಯಾಯಾಲಯ ಪವಿತ್ರಾ ಗೌಡ ಮನೆಯೂಟ ತರಿಸಿಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಜೈಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ. ನಿನ್ನೆಯೇ (ಜನವರಿ 2) ಜೈಲಿನ ಪ್ರಕ್ರಿಯೆಯನ್ನು ಪವಿತ್ರಾ ಗೌಡ ಪರ ವಕೀಲರು ಮಾಡಿ ಮುಗಿಸಿದ್ದಾರೆ.

ಈ ವೇಳೆ ಪವಿತ್ರಾ ಗೌಡ ಪರ ವಕೀಲರು ಕೆಲವು ಮಾಹಿತಿಗಳನ್ನು ನೀಡಬೇಕಿದೆ. ಯಾರು ಊಟ ತರುತ್ತಾರೆ? ಯಾವಾಗ ಊಟ ತೆಗೆದುಕೊಂಡು ಬರುತ್ತಾರೆ?ಆರೋಪಿಗಳಿಗೂ ಊಟ ತೆಗೆದುಕೊಂಡು ಬರುವವರಿಗೂ ಏನು ಸಂಬಂಧ? ಈ ಎಲ್ಲಾ ಮಾಹಿತಿಗಳನ್ನು ಜೈಲಾಧಿಕಾರಿಗಳಿಗೆ ವಕೀಲರು ಸಲ್ಲಿಕೆ ಮಾಡಬೇಕು. ಈಗಾಗಲೇ ಪವಿತ್ರಾ ಗೌಡ ಪರ ವಕೀಲರು ನಾಲ್ವರು ಊಟ ತರುತ್ತೇವೆ ಎನ್ನುವುದನ್ನು ದಾಖಲಿಸಿದ್ದಾರೆ. ಇವತ್ತಿನಿಂದ ಪವಿತ್ರಾ ಗೌಡಗೆ ಮನೆಯೂಟ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

Court Grants Permission To Pavithra Gowda To Have Home Food In Jail What About Darshan

ಪವಿತ್ರಾ ಗೌಡಗೆ ಮನೆಯೂಟ ನೀಡುವುದಕ್ಕೆ ನ್ಯಾಯಾಲಯ ಅಸ್ತು ಎನ್ನುತ್ತಿದ್ದಂತೆ ದರ್ಶನ್ ಕೂಡ ಅರ್ಜಿ ಸಲ್ಲಿಸುವುದಕ್ಕೆ ಸಿದ್ಧತೆಯಿದೆ. ಜೈಲಿನಲ್ಲಿ ಊಟ ಸರಿಯಾಗುತ್ತಿಲ್ಲ ಎಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದೆಂದು ನಿರೀಕ್ಷೆ ಮಾಡಲಾಗಿದೆ. ಕಳೆದ ಬಾರಿ ಕೂಡ ಮನೆಯೂಟಕ್ಕೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ಆ ವೇಳೆ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು.

ಈ ಬಾರಿ ದರ್ಶನ್‌ಗೂ ಮನೆಯೂಟ ಸಿಗುವ ಸಾಧ್ಯತೆಯಿದೆ. ಯಾಕಂದ್ರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡ ನಂ 1 ಆರೋಪಿಯಾಗಿದ್ದಾರೆ. ಇವರಿಗೇ ಮನೆಯೂಟಕ್ಕೆ ಅವಕಾಶ ಸಿಕ್ಕಿದೆ. ಹೀಗಾಗಿ 2ನೇ ಆರೋಪಿಯಾಗಿರುವ ದರ್ಶನ್ ಕೂಡ ಇದೇ ಹೋಪ್‌ನಲ್ಲಿ ಇದ್ದಾರೆ. ಪವಿತ್ರಾ ಗೌಡ ಅವರಿಗೆ ಅವಕಾಶ ಕೊಟ್ಟಿದ್ದೀರಿನನಗೂ ಕೂಡ ಅವಕಾಶ ಕೊಡಿ ಎಂದು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆ ಇನ್ನೂ ಕೆಲವು ದಿನಗಳಲ್ಲಿ ನಡೆಯುವ ಸಾಧ್ಯತೆಯಿದೆ. ಕೆಲವು ಮೂಲಗಳ ಪ್ರಕಾರ, ದರ್ಶನ್ ಪರ ವಕೀಲರು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಎಲ್ಲೂ ಹೇಳಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X