»   » ಪತ್ನಿ ಮೇಲೆ ಹಲ್ಲೆ ಸಾಬೀತು: ಆಪತ್ತಿನಲ್ಲಿ ದರ್ಶನ್

ಪತ್ನಿ ಮೇಲೆ ಹಲ್ಲೆ ಸಾಬೀತು: ಆಪತ್ತಿನಲ್ಲಿ ದರ್ಶನ್

Posted By:
Subscribe to Filmibeat Kannada
Court summons Kannada actor Darshan for assaulting his wife
ಪತ್ನಿ ಮೇಲೆ ಹಲ್ಲೆ ಹಗರಣಕ್ಕೆ ಮತ್ತೆ ಜೀವ ಬಂದಿದೆ. ಬೆಂಗಳೂರು ವಿಜಯನಗರ ಠಾಣೆ ಪೊಲೀಸರು ಸುಮಾರು 100 ಪುಟದ ಚಾರ್ಜ್ ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಫೆಬ್ರವರಿ 15ರಂದು ಕೋರ್ಟಿಗೆ ಹಾಜರಾಗುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಸುಮಾರು 20ದಿನಗಳ ಹಿಂದೆಯೇ ಪೊಲೀಸರು 1ನೇ ಎಸಿಎಂಎಂ ಕೋರ್ಟಿಗೆ ಸವಿವರವಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದು ಅದರಲ್ಲಿ ನಟ ದರ್ಶನ್ ತನ್ನ ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದು ಸಾಬೀತಾಗಿದೆ ಎಂದು ನಮೂದಿಸಿದ್ದಾರೆ.

ಅಲ್ಲದೆ ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ ಅಂಬರೀಶ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಸೇರಿ 43 ಜನರು ನೀಡಿದ ಸಾಕ್ಷಿಯನ್ನು ಪೊಲೀಸರು ಚಾರ್ಜ್ ಶೀಟಿನಲ್ಲಿ ವಿವರಿಸಿದ್ದಾರೆ.

ಸೆಪ್ಟಂಬರ್ 9, 2011ರಂದು ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ಆರೋಪದಡಿ ವಿಜಯನಗರ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು, ಅಕ್ಟೋಬರ್ 7, 2011ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಘಟನೆ ನಡೆದ 16 ತಿಂಗಳ ನಂತರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

English summary
Bangalore Vijayanagara police submitted 100 pages charge sheet against Kannada actor Darshan for assaulting his wife Vijaya Lakshmi. Darshan has to appear on 1st ACMM court on Feb 15th.
Please Wait while comments are loading...