ಕೆ ಮಂಜು ಪುತ್ರ ಶ್ರೇಯಸ್ ಹೊಸ ಸಿನಿಮಾ ಟೈಟಲ್ ಫಿಕ್ಸ್: 'ದಿಲ್‌ದಾರ್'ಗೆ ಕ್ರೇಜಿಸ್ಟಾರ್ ಕ್ಲಾಪ್

ಸ್ಯಾಂಡಲ್‌ವುಡ್ ನಿರ್ಮಾಪಕ ಗಂಡುಗಲಿ ಕೆ.ಮಂಜು ಪುತ್ರ ಶ್ರೇಯಸ್ ಹೊಸ ಸಿನಿಮಾ ಸೆಟ್ಟೇರಿದೆ. 'ಪಡ್ಡೆ ಹುಲಿ','ರಾಣಾ' ಸಿನಿಮಾ ರಿಲೀಸ್ ಆದ ಬಳಿಕ ಮತ್ತೊಂದು ಸಿನಿಮಾ ಆರಂಭ ಆಗಿದೆ. ಈ ಬಾರಿ ಗೆಲ್ಲಲೇ ಬೇಕು ಅಂತ ಪಣ ತೊಟ್ಟು ನಿಂತಿರೋ ಶ್ರೇಯಸ್‌ಗೆ ಸ್ಯಾಂಡಲ್‌ವುಡ್‌ನ ದಿಗ್ಗಜರು ಸಾಥ್ ಕೊಟ್ಟಿದ್ದಾರೆ.

'ರಾಣಾ' ಬಳಿಕ ಶ್ರೇಯಸ್ ಕೆ. ಮಂಜು ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದುವೇ 'ದಿಲ್‌ದಾರ್'. ಕ್ಯಾಚಿ ಟೈಟಲ್ ಮೂಲಕವೇ ಪ್ರೇಕ್ಷಕರನ್ನು ಸೆಳೆಯಲು ಶ್ರೇಯಸ್ ಮಂಜು ಮುಂದಾಗಿದ್ದಾರೆ. ಇಂದು (ಮಾರ್ಚ್ 31) ಶ್ರೇಯಸ್ ಮಂಜು ಹೊಸ ಸಿನಿಮಾ ಮುಹೂರ್ತ ನೆರವೇರಿದೆ.

Crazy Star Ravichandran Launched Shreyas Manju Starrer New Movie Dildar

ಈ ಬಾರಿ ಕೆ ಮಂಜು ಪುತ್ರನಿಗೆ ಸ್ಯಾಂಡಲ್‌ವುಡ್‌ನ ದಿಗ್ಗಜರೇ ಬಂದು ಆಶೀರ್ವಾದ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ 'ದಿಲ್‌ದಾರ್‌'ಗೆ ಕ್ಲ್ಯಾಪ್ ಮಾಡಿ ಟೈಟಲ್ ಅನಾವರಣ ಮಾಡಿದ್ದಾರೆ. ಹಾಗೇ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಯಾಮರಾಗೆ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.

'ದಿಲ್‌ದಾರ್' ಟೈಟಲ್ ರಿವೀಲ್ ಮಾಡಿದ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರತಂಡ ಹಾಗೂ ಶ್ರೇಯಸ್‌ ಶುಭ ಹಾರೈಸಿದ್ದಾರೆ. "ಸಿನಿಮಾ ಮಾಡಬೇಕು ಅಂದರೆ ದಿಲ್ ಬೇಕು. ನಟ ಶ್ರೇಯಸ್ ಮಂಜು ಹಾಗೂ ಇಡೀ ಚಿತ್ರತಂಡಕ್ಕೆ ಶುಭಾಶಯ" ಎಂದು ಕ್ರೇಜಿಸ್ಟಾರ್ ಹೇಳಿದ್ದಾರೆ. ಇನ್ನು ಈ ಸಿನಿಮಾವನ್ನು ಮಧು ಗೌಡ ನಿರ್ದೇಶನ ಮಾಡುತ್ತಿದ್ದಾರೆ. "ಈ ಸಿನಿಮಾ ಕೇವಲ ನನ್ನಿಂದ ಅಲ್ಲ. ನನ್ನ ತಂಡದ ಸಪೋರ್ಟ್ ನಿಂದ ಸಾಧ್ಯವಾಗಿದೆ. ಕಥೆ ರೆಡಿ ಮಾಡಿದಾಗ 'ದಿಲ್‌ದಾರ್' ಟೈಟಲ್ ಫಿಕ್ಸ್ ಮಾಡಿದಾಗ. ಯಾರು ಇದ್ದಾರೆ ದಿಲ್‌ದಾರ್ ಅಂತ ಯೋಚನೆ ಮಾಡಿದಾಗ ಸಿಕ್ಕಿದ್ದೇ ಶ್ರೇಯಸ್ ಮಂಜು" ಅಂತ ನಿರ್ದೇಶಕರು ರಿವೀಲ್ ಮಾಡಿದ್ದಾರೆ.

ಶ್ರೇಯಸ್ ಮಂಜುಗೆ ಹೀರೊಯಿನ್ ಆಗಿ ಪ್ರಿಯಾಂಕಾ ನಟಿಸುತ್ತಿದ್ದಾರೆ. "ನಾನು ಈ ಹಿಂದೆ ಅದ್ಧೂರಿ ಲವರ್ಸ್ ಹಾಗೂ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಈಗ ಈ ಸಿನಿಮಾದಲ್ಲಿ ನಟಿಸುತ್ತೇನೆ. ನಿಮ್ಮ ಆಶೀರ್ವಾದ ಬೇಕು" ಎಂದಿದ್ದಾರೆ. ಹಾಗೇ ನಟ ಶ್ರೇಯಸ್ ಮಂಜು ಮಾತನಾಡಿ, "ರವಿಚಂದ್ರನ್ ಸರ್ ನನಗೆ ತುಂಬಾ ಆತ್ಮವಿಶ್ವಾಸ ಕೊಟ್ಟಿದ್ದಾರೆ. ನನ್ನ ಚಿತ್ರಕ್ಕೆ ಶುಭಕೋರಲು ಬಂದ ಎಲ್ಲಾ ನಿರ್ದೇಶಕರಿಗೂ ಧನ್ಯವಾದ ತಿಳಿಸುತ್ತೇನೆ. ಪ್ರತಿಯೊಬ್ಬ ಡೈರೆಕ್ಟರ್ ಹತ್ತಿರ ಒಂದೊಂದು ಟಿಪ್ಸ್ ತಗೊಂತಿನಿ" ಎಂದು ಶ್ರೇಯಸ್ ಹೇಳಿದ್ದಾರೆ.

Crazy Star Ravichandran Launched Shreyas Manju Starrer New Movie Dildar

'ದಿಲ್‌ದಾರ್' ಸಿನಿಮಾವನ್ನು ಆರ್ ಸಂತೋಷ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಗಗನ್ ಗೌಡ ಕ್ಯಾಮರಾ ಹಿಡಿದಿದ್ದಾರೆ. ಹಾಗೇ ರವಿವರ್ಮಾ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು 'ದುರ್ಗ', 'ನೀಲಿ' ಧಾರಾವಾಹಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಧು ಗೌಡ ಗಂಗೂರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಶ್ರೇಯಸ್ ಮಂಜು ಅಭಿನಯದ ಮೂರನೇ ಸಿನಿಮಾ 'ವಿಷ್ಣುಪ್ರಿಯ' ರೆಡಿಯಾಗಿದೆ. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಈ ಸಿನಿಮಾದಲ್ಲಿ ಹೀರೊಯಿನ್. ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಷ್ಟರೊಳಗೆ ಮತ್ತೊಂದು ಸಿನಿಮಾ ಸೆಟ್ಟೇರಿದ್ದು, ಶೂಟಿಂಗ್‌ಗೂ ಮುನ್ನ ರಿಹರ್ಸಲ್ ಆರಂಭ ಆಗಿದೆ. ಇದೆಲ್ಲಾ ಮುಗಿದ ಬಳಿಕವೇ ಚಿತ್ರತಂಡ ಶೂಟಿಂಗ್‌ಗೆ ಅಣಿಯಾಗುತ್ತಿದೆ.

More from Filmibeat

English summary
Crazy Star Ravichandran Launched Shreyas Manju Starrer New Movie Dildar, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X