4 ವರ್ಷಗಳ ಹಿಂದೆನೇ 'ಪ್ರೇಮಲೋಕ 2' ಕಥೆ ಬಿಚ್ಚಿಟ್ಟಿದ್ದ ಕ್ರೇಜಿಸ್ಟಾರ್; 50 ಸೆಟ್‌ಗಳಲ್ಲಿ ಮೂಡಲಿದೆ ಲವ್‌ಸ್ಟೋರಿ

ಕನ್ನಡ ಚಿತ್ರರಂಗದಲ್ಲಿ ಮಾತ್ರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೆ ಕ್ರೇಜಿಯಾಗಿ ಯೋಚನೆ ಮಾಡುವುದಕ್ಕೆ ಸಾಧ್ಯ. ಹೆಚ್ಚು ಕಡಿಮೆ 37 ವರ್ಷಗಳ ಹಿಂದೆ 'ಪ್ರೇಮಲೋಕ' ಕೊಟ್ಟ ಯಶಸ್ಸು ಇಂದಿಗೂ ರವಿಚಂದ್ರನ್‌ರನ್ನು ಕೈ ಹಿಡಿದು ಕರೆದುಕೊಂಡು ಬಂದಿದೆ. ಇಂದಿಗೂ ಕ್ರೇಜಿಸ್ಟಾರ್ ಅಂದರೆ 'ಪ್ರೇಮಲೋಕ'. ಹಾಗೇ 'ಪ್ರೇಮಲೋಕ' ಅಂದರೆ ಕ್ರೇಜಿಸ್ಟಾರ್ ಅನ್ನುವ ಅಭಿಮಾನಿಗಳು ಇದ್ದಾರೆ.

ಈಗ ಕ್ರೇಜಿಸ್ಟಾರ್‌ ಮೇಕಿಂಗ್ ದಾಟಿ ಬದಲಾಗಿದೆ. ಕನಸುಗಳು ಬದಲಾಗಿಲ್ಲ. ಸದ್ಯ ಕನಸುಗಾರನ ಹೊಸ ಕನಸು ಈಗ 'ಪ್ರೇಮಲೋಕ 2'. ಕಳೆದ ಕೆಲವು ದಿನಗಳಿಂದ ರವಿಚಂದ್ರನ್ ಹೋದಲ್ಲೆಲ್ಲಾ ಈ ಸಿನಿಮಾ ಬಗ್ಗೆನೇ ಜಪ ಮಾಡುತ್ತಿದ್ದಾರೆ. ಈ ಮಹತ್ವಾಕಾಂಕ್ಷೆಯ ಸಿನಿಮಾ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಮುಂಬರುವ ಮೇ ತಿಂಗಳಲ್ಲಿ ಅವರ ಹುಟ್ಟುಹಬ್ಬದಂದು 'ಪ್ರೇಮಲೋಕ 2' ಅದ್ಧೂರಿಯಾಗಿ ಸೆಟ್ಟೇರಲಿದೆ.

Crazy star Ravichandran said Premaloka 2 has more than 50 sets bigg budget

'ಪ್ರೇಮಲೋಕ 2' ಬಿಗ್‌ಬಜೆಟ್ ಸಿನಿಮಾ. ಸುಮಾರು 25 ಹಾಡುಗಳು ಇರುತ್ತೆ. 40 ರಿಂದ 50 ಸೆಟ್ಟುಗಳಲ್ಲಿ ಸಿನಿಮಾ ಶೂಟಿಂಗ್ ಆಗುತ್ತೆ ಅನ್ನೋದನ್ನು ಈಗಾಗಲೇ ಕ್ರೇಜಿಸ್ಟಾರ್ ರಿವೀಲ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು 'ಪ್ರೇಮಲೋಕ 2' ಮುಹೂರ್ತದಂದು ರಿವೀಲ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ನಾಲ್ಕು ವರ್ಷಗಳ ಹಿಂದೆ ಸಿನಿಮಾ ಪತ್ರಿಕಾಗೋಷ್ಠಿಯೊಂದರಲ್ಲಿ ಈ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದರು.

"15-20 ವರ್ಷಗಳ ಹಿಂದೆ ಹುಟ್ಟಿಕೊಂಡ ಕಥೆ"

'ಪ್ರೇಮಲೋಕ 2' ಸಿನಿಮಾ ಬಗ್ಗೆ ನಾಲ್ಕು ವರ್ಷಗಳ ಹಿಂದೆ ಕ್ರೇಜಿಸ್ಟಾರ್ ಮಾಹಿತಿ ಹಂಚಿಕೊಂಡಿದ್ದರು. 15 ರಿಂದ 20 ವರ್ಷಗಳ ಕಥೆಯಿದು ಎಂದು ಹೇಳಿಕೊಂಡಿದ್ದರು. ಅಲ್ಲಿಂದ ಇಲ್ಲಿವರೆಗೂ ಸಾಕಷ್ಟು ಬದಲಾವಣೆಗಳು ಆಗಿರಬಹುದು. ಇಲ್ಲವೇ ಬದಲಾವಣೆ ಆಗಿಲ್ಲದೆನೂ ಇರಬಹುದು. ಆದರೆ, ಅಂದು 'ಪ್ರೇಮಲೋಕ 2' ಬಗ್ಗೆ ಬಿಟ್ಟು ಕೊಟ್ಟ ಮಾಹಿತಿ ಹೀಗಿದೆ.

"ಪ್ರೇಮಲೋಕ ಹೇಗೆ ಹುಟ್ಟಿತ್ತೋ.. ಹಾಗೇ ಹುಟ್ಟಿಕೊಳ್ಳಬೇಕಿತ್ತು. 15-20 ವರ್ಷಗಳ ಹಿಂದೆ ಹುಟ್ಟಿಕೊಂಡ ಕಥೆ ಅದು. ಅದು ಎಷ್ಟೋ ಬಾರಿ ಕೂತಾಗ ಕಥೆ ಆಗಿರಲಿಲ್ಲ ಅದು. ನನ್ನ ಮಗಳ ಬರ್ತ್‌ಡೇ ದಿನ ಒಂದು ಸ್ಪಾರ್ಕ್ ಸಿಕ್ತು. ಒಂದು ದಾರಿ ಸಿಕ್ಕಿತು. ಹೀಗೆ ಮಾಡಬಹುದು ಅಂತ ಐಡಿಯಾ ಬಂತು. " ಎಂದು ಅಂದು ಕ್ರೇಜಿಸ್ಟಾರ್ ಮಾಹಿತಿ ಹಂಚಿಕೊಂಡಿದ್ದರು.

Crazy star Ravichandran said Premaloka 2 has more than 50 sets bigg budget

ಯಾರಿಗೆ ಯಾವ್ಯಾವ ಪಾತ್ರ?

ಸಿನಿಮಾ ಪತ್ರಿಕಾಗೋಷ್ಠಿಯೊಂದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪಾತ್ರಗಳ ಬಗ್ಗೆನೂ ಮಾತಾಡಿದ್ದರು. "ಅಲ್ಲಿ ನಾನು ಇದ್ದೆ. ಇಲ್ಲಿ ನಾನು ಮತ್ತು ನನ್ನ ಮಕ್ಕಳು ಇರುತ್ತೇವೆ. ಬಹುಶ: ಪ್ರಮುಖ ಪಾತ್ರದಲ್ಲಿ ದೊಡ್ಡವನು ಮನು ಇರುತ್ತಾನೆ. ನಾವು ಮೂರು ಜನ ಇದ್ದರೂ ಇರುತ್ತೇವೆ. ಅದು ಮ್ಯೂಸಿಕಲಿ ಡಿಸೈಡ್ ಆಗುತ್ತೆ. ಆದರೆ, ಪ್ರಮುಖವಾಗಿ ಮನು ಇರುತ್ತಾನೆ" ಎಂದು ಸ್ಟಾರ್ ಕಾಸ್ಟ್‌ ಬಗ್ಗೆ ಹೇಳಿದ್ದರು.

ಹಾಗೇ ತಂದೆ ಹಾಗೂ ಮಗನ ಪಾತ್ರದ ಬಗ್ಗೆನೂ ರಿವೀಲ್ ಮಾಡಿದ್ದರು. "ನನ್ನದು ಒಂದು ವಯಸ್ಸಾಗಿರುವ ಪಾತ್ರ. ಸಾಫ್ಟ್ ಆಗಿರುವ ಪಾತ್ರ ಅವನದ್ದು. ಆದರೆ, ಮನುದು ಸ್ಟ್ರಿಕ್ಟ್ ಆಗಿ ಓಡಾಡಿಕೊಂಡಿರುವ ಪಾತ್ರವದು. ರವಿಚಂದ್ರನ್‌ ವೀವ್ ಪಾಯಿಂಟ್‌ಯಿಂದ ಸಿನಿಮಾ ನೋಡಿ ಬೇರೆತರ ಕಾಣಿಸುತ್ತೆ. ಡೈರೆಕ್ಟರ್ ವೀವ್ ಪಾಯಿಂಟ್‌ಯಿಂದ ಸಿನಿಮಾ ನೋಡಿ ಬೇರೆತರ ಕಾಣಿಸುತ್ತೆ. ಕ್ಲೈಮ್ಯಾಕ್ಸ್‌ನಲ್ಲಿ ನಾವು ಹೇಳಿದ್ದೇ ಅದು. ಒಂದು ಘಟನೆಯಿಂದ ಇನ್ನೊಂದು ಘಟನೆ ಹೇಗೆ ಬೆಳೆದುಕೊಳ್ಳುತ್ತಾ ಹೋಗುತ್ತೆ ಅಂತ." ಹೇಳಿದ್ದೇವೆ ಎಂದು ಕ್ರೇಜಿಸ್ಟಾರ್ ಮಾಹಿತಿ ಕೊಟ್ಟಿದ್ದರು.

More from Filmibeat

English summary
Ravichandran Premaloka 2 has more than 50 sets:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X