ಕಾಸು ತಗೊಂಡು ಸಿನಿಮಾ ಮಾಡೋ ವಂಶದಲ್ಲಂತೂ ನಾವು ಹುಟ್ಟಿಲ್ಲ: ರವಿಚಂದ್ರನ್ ಪುತ್ರ ವಿಕ್ರಮ್!

ಇತ್ತೀಚೆಗಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ 'ರವಿ ಬೋಪಣ್ಣ' ರಿಲೀಸ್ ಆಗಿದೆ. ಇದು ಈಶ್ವರಿ ಪ್ರೊಡಕ್ಷನ್‌ನಲ್ಲಿ ನಿರ್ಮಾಣ ಆಗಿರುವ 50ನೇ ಸಿನಿಮಾ ಆಗಿತ್ತು. ಈ ಹಿಂದೆನೇ ರವಿಚಂದ್ರನ್ ತಮ್ಮ ಮೊದಲನೇ ಮಗನ ಮದುವೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಈಗಾಗ್ಲೇ ಕ್ರೇಜಿಸ್ಟಾರ್ ಇಬ್ಬರು ಪುತ್ರರೂ ಸ್ಯಾಂಡಲ್‌ವುಡ್‌ ಎಂಟ್ರಿಕೊಟ್ಟಿದ್ದಾರೆ. ಅದರಲ್ಲೂ ವಿಕ್ರಮ್ ಅಭಿನಯದ ಮೊದಲ ಸಿನಿಮಾ 'ತ್ರಿವಿಕ್ರಮ್' ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿತ್ತು. ಆದರೂ, ಅದು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿಲ್ಲ. ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿರೋ ವಿಕ್ರಮ್ ತಮ್ಮ ಹೊಸ ಸಿನಿಮಾಗಳ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

'ತ್ರಿವಿಕ್ರಮ್' ಬಳಿಕ ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ಹೊಸ ಸಿನಿಮಾಗಳ ಆಯ್ಕೆಯಲ್ಲಿ ಹುಷಾರಾಗಿದ್ದಾರೆ. ಸಿನಿಮಾ ಸ್ಟ್ರಾಟಜಿಯನ್ನು ಬದಲಾಯಿಸಿದ್ದಾರೆ. ಅಲ್ಲದೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿ ಕಾಸು ಮಾಡೋ ವಂಶದಲ್ಲಿ ಹುಟ್ಟಿಲ್ಲ ಅಂತ ಹೇಳಿದ್ದಾರೆ. ಅಸಲಿಗೆ 'ತ್ರಿವಿಕ್ರಮ್' ಬಳಿಕ ವಿಕ್ರಮ್ ತೆಗೆದುಕೊಂಡ ನಿರ್ಧಾರವೇನು? ಸಿನಿಮಾಗಳ ಆಯ್ಕೆ ಬಗ್ಗೆ ಏನಂದಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ತ್ರಿವಿಕ್ರಮ್' ಬಳಿಕ ಒಳ್ಳೆ ಆಫರ್ ಇದೆ

'ತ್ರಿವಿಕ್ರಮ್' ಬಳಿಕ ಒಳ್ಳೆ ಆಫರ್ ಇದೆ

ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಬಳಿಕ ಹೊಸ ಹೊಸ ಆಫರ್‌ಗಳಿವೆಯಂತೆ. 'ತ್ರಿವಿಕ್ರಮ್' ಬಳಿಕ ಪ್ರೊಡಕ್ಷನ್ ಹೌಸ್‌ಗಳು ಸಿನಿಮಾ ಮಾಡುವುದಕ್ಕೆ ಮುಂದೆ ಬರುತ್ತಿವೆ, ಆದರೆ, ಮಾತುಕತೆ ನಡೆದಿಲ್ಲ ಅಂತ ಯೂಟ್ಯೂಬ್ ಚಾನೆಲ್‌ಗಳಿಗೆ ಸ್ಪಷ್ಟಪಡಿಸಿದ್ದಾರೆ. "ಒಳ್ಳೆ ಕಂಟೆಂಡ್ ಇರುವ ಸಿನಿಮಾ ಮಾಡುತ್ತೇವೆ. ಒಂದೆರಡು ಅಂತಲ್ಲಾ ಒಳ್ಳೆ ಆಫರ್‌ಗಳು ಕೈಯಲ್ಲಿ ಇವೆ. ಆದರೆ ಪ್ರೊಡಕ್ಷನ್ ಜೊತೆ ನಾವು ಸ್ಕ್ರಿಪ್ಟ್, ಡೈರೆಕ್ಟರ್ ಅನ್ನುಫೈನಲ್ ಮಾಡುತ್ತಿದ್ದೇವೆ. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇವೆ. ಪ್ರತಿಯೊಂದು ಪ್ರೊಡಕ್ಷನ್ ಹೌಸ್‌ನಿಂದಲೂ ಆಫರ್ ಇದೆ. ಆದರೆ ಯಾವುದನ್ನೂ ಮಾತುಕತೆ ಮಾಡಿಲ್ಲ. ಎಲ್ಲರೂ ಸ್ನೇಹಿತರಾಗಿರುವುದರಿಂದ ಒಳ್ಳೆ ಸ್ಕ್ರಿಪ್ಟ್ ಅನ್ನು ತೆಗೆದುಕೊಂಡು ಹೋಗಬೇಕು ಅನ್ನುವ ನಿರ್ಧಾರಕ್ಕೆ ಬಂದಿದ್ದೀವಿ." ಎಂದಿದ್ದಾರೆ ವಿಕ್ರಮ್.

ಕಾಸು ತಗೊಂದು ಸಿನಿಮಾ ಮಾಡೋ ವಂಶ ಅಲ್ಲ

ಕಾಸು ತಗೊಂದು ಸಿನಿಮಾ ಮಾಡೋ ವಂಶ ಅಲ್ಲ

ಇದೇ ವೇಳೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವುದಿಲ್ಲ ಅನ್ನೋದನ್ನು ವಿಕ್ರಮ್ ಸ್ಪಷ್ಟ ಪಡಿಸಿದ್ದಾರೆ. ಜನರು ಪ್ರೀತಿ ತೋರಿಸ್ತಿದ್ದಾರೆ ಕಾಸು ತಗೊಂಡು ಸಿನಿಮಾ ಮಾಡೋದಿಲ್ಲ ಎಂದಿದ್ದಾರೆ. "ಏನೇ ಯೋಚನೆ ಮಾಡಿದರೂ ಒಂದು ವರ್ಷ ಆದ್ಮೇಲೆ ನನ್ನ ಸಿನಿಮಾ ರಿಲೀಸ್ ಆಗುತ್ತೆ. ಆವತ್ತು ಯಾವ ಸಿನಿಮಾ ಸೆಟ್ ಆಗುತ್ತೆ ಅನ್ನೋದನ್ನು ನೋಡಿಕೊಂಡು ಸಿನಿಮಾ ಮಾಡಬೇಕು ಅನ್ನುವ ನಿರ್ಧಾರಕ್ಕೆ ಬಂದಿದ್ದೀವಿ. ಏನೂ ಅವಸರವಿಲ್ಲ. ಏನೋ ಪ್ರೀತಿ ತೋರಿಸುತ್ತಿದ್ದಾರೆ ಅಂತ ಒಂದು ಮೂರು ಸಿನಿಮಾ ಸೈನ್ ಮಾಡಿ, ಕಾಸು ತಗೊಂಡು ಸಿನಿಮಾ ಮಾಡೋ ವಂಶದಲ್ಲಂತೂ ನಾವು ಹುಟ್ಟಿಲ್ಲ. ಒಳ್ಳೆ ಸಿನಿಮಾ ಮಾಡಬೇಕು ಅನ್ನೋ ಕಾಳಜಿ ಜಾಸ್ತಿ ಇದೆ." ಎಂದಿದ್ದಾರೆ ವಿಕ್ರಮ್.

ಮನು ಬಳಿ ಎರಡು ಸಿನಿಮಾಗಳಿವೆ

ಮನು ಬಳಿ ಎರಡು ಸಿನಿಮಾಗಳಿವೆ

"ಮನು ಅವರ ಬಳಿ ಎರಡು ಪ್ರಾಜೆಕ್ಟ್ ಲೈನಪ್‌ನಲ್ಲಿ ಇದೆ. ಅದನ್ನು ಅವರೇ ಅನೌನ್ಸ್ ಮಾಡುತ್ತಾರೆ. ಅದರಲ್ಲಿ ಒಂದು ನಾನು ಫುಲ್ ಆಗಿ ನಾನು ಹ್ಯಾಂಡಲ್‌ ಮಾಡುತ್ತೇನೆ. ಅದನ್ನು ನಾನೇ ಅನೌನ್ಸ್ ಮಾಡುತ್ತೇನೆ. ಇನ್ನೊಂದನ್ನು ಬೇರೆ ಯಾರೋ ಬಂದಿದ್ದಾರೆ ಅವರು ಮಾಡುತ್ತಾರೆ. " ಅಂತ ಅಣ್ಣನ ಸಿನಿಮಾ ಬಗ್ಗೆನೂ ಮಾಹಿತಿ ನೀಡಿದ್ದಾರೆ.

ಮದುವೆ ಬಳಿಕ ಶುಭ ಸುದ್ಧಿ

ಮದುವೆ ಬಳಿಕ ಶುಭ ಸುದ್ಧಿ

ಸದ್ಯ ಕ್ರೇಜಿ ಸ್ಟಾರ್ ಕುಟುಂಬ ಮನೋರಂಜನ್ ರವಿಚಂದ್ರನ್ ಅವರ ಮದುವೆ ಸಮಾರಂಭದಲ್ಲಿ ಬ್ಯುಸಿಯಾಗಿದೆ. ಸಿನಿಮಾ ಮುಗಿದ ಬಳಿಕ ರವಿಚಂದ್ರನ್, ಮನೋರಂಜನ್ ಹಾಗೂ ವಿಕ್ರಮ್ ಅವರಿಂದ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. " ಡ್ಯಾಡಿದೂ ಇನ್ನೂ ಏನೂ ಅಪ್‌ಡೇಟ್ ಇಲ್ಲ. ನಂದೂ ಅಪ್‌ಡೇಟ್ ಇಲ್ಲ. ಮನು ಅವರದ್ದೂ ಅಪ್‌ಡೇಟ್ ಇಲ್ಲ. ಮೂರು ಜನರದ್ದೂ ಅಪ್‌ಡೇಟ್ ಮದುವೆ ಬಳಿಕ ಸೆಪ್ಟೆಂಬರ್‌ ತಿಂಗಳಿಂದ ಗೊತ್ತಾಗುತ್ತೆ. " ಎಂದು ಹೇಳಿದ್ದಾರೆ.

More from Filmibeat

English summary
Crazy Star Ravichandran Second Son Vikram About His Next Movie After Trivikram, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X