'ರಣಂ' ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟ, ಇಬ್ಬರು ಸಾವು?

ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಚೇತನ್ ಅಭಿನಯಿಸುತ್ತಿರುವ ರಣಂ ಸಿನಿಮಾ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟವಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಚಿತ್ರದ ಸಾಹಸ ದೃಶ್ಯ ಚಿತ್ರೀಕರಣ ಮಾಡುವ ವೇಳೆ ಸ್ಫೋಟ ಆಗಿದೆ ಎನ್ನಲಾಗಿದೆ.

ಈ ದುರ್ಘಟನೆಯಲ್ಲಿ ಸುಮೈರಾ (28) ಎಂಬ ಮಹಿಳೆ ಮತ್ತು ಆಯಿತಾ (8) ಎಂಬ ಮಗು ಸಾವನ್ನಪಿದ್ದಾರೆ. ಇನ್ನೊಂದು ಮಗುವನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟಕ್ಕೆ ಸ್ಥಳದಲ್ಲೇ ದೇಹಗಳು ಛಿದ್ರ ಛಿದ್ರವಾಗಿದೆ ಎಂದು ಸ್ಥಳಿಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Cylinder blast in ranam shooting set

ಕಳೆದ ಮೂರು ದಿನದಿಂದ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ವಿಜಯನ್ ಎಂಬ ಸಾಹಸ ನಿರ್ದೇಶಕ ಕೆಲಸ ಮಾಡುತ್ತಿದ್ದರಂತೆ. ಶೆಲ್ ಕಂಪನಿ ಬಳಿ ಕಾರ್ ಬ್ಲಾಸ್ಟ್ ಮಾಡುವ ದೃಶ್ಯದ ಚಿತ್ರೀಕರಣ ಆಗಬೇಕಿತ್ತಂತೆ. ಬಾಗಲೂರಿನಿಂದ ಸೂಲಿಬೆಲೆಗೆ ಹೋಗುತ್ತಿದ್ದ ಸಂಧರ್ಭದಲ್ಲಿ ಚಿತ್ರೀಕರಣ ನಡೆಯುತ್ತಿದ್ದನ್ನ ಗಮನಿಸಿ ಆ ತಾಯಿ ಮತ್ತು ಮಕ್ಕಳು ಶೂಟಿಂಗ್ ನೋಡಲು ನಿಂತರು. ಅದೇ ವೇಳೆಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ.

ಈ ಸ್ಫೋಟ ಸಂಭವಿಸದಾಗ ನಟ ಚೇತನ್ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ವಿಷ್ಯ ತಿಳಿದ ಕೂಡಲೇ ಚೇತನ್ ಘಟನಾ ಸ್ಥಳಕ್ಕೆ ಹೋಗುತ್ತಿದ್ದಾರಂತೆ. ಚಿರಂಜೀವಿ ಸರ್ಜಾ ಅವರು ಭಾಗದ ಶೂಟಿಂಗ್ ಮುಗಿದು ಹೋಗಿದ್ದು, ಇಂದಿನ ಚಿತ್ರೀಕರಣದ ಬಗ್ಗೆ ಮಾಹಿತಿಯೇ ಇಲ್ಲ ಎಂದಿದ್ದಾರೆ. ಕನಕಪುರ ಶ್ರೀನಿವಾಸ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ವಿ ಸಮುದ್ರ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾ ಚಿತ್ರೀಕರಣದ ಸಂದರ್ಭಗಳಲ್ಲಿ ಈ ರೀತಿ ದುರ್ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ನವೆಂಬರ್ 8, 2016ರಲ್ಲಿ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಖಳನಟರಾದ ಅನಿಲ್ ಮತ್ತು ಉದಯ್ ಚಿತ್ರೀಕರಣ ನಡೆಯಬೇಕಾದರೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

More from Filmibeat

English summary
Cylinder blast happened near while shooting of Ranam movie near Bagalur. One woman and one child died in incident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X