'ಬಡವ ರಾಸ್ಕಲ್' ಅನ್ನೋದು ಮುದ್ದಾದ ಬೈಗುಳ: 50 ದಿನದ ಸಂಭ್ರಮ

ಡಾಲಿ ಧನಂಜಯ್ ನಿರ್ಮಾಣದ ಸಿನಿಮಾ 'ಬಡವ ರಾಸ್ಕಲ್'. ಕಳೆದ ವರ್ಷ ಡಿಸೆಂಬರ್‌ನಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಕ್ರಿಸ್‌ಮಸ್ ಹಬ್ಬದಂದೆ ಈ ಸಿನಿಮಾ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕೆಆರ್‌ಜಿ ಸ್ಟುಡಿಯೋ ಈ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಿತ್ತು. ಈಗ ಈ ಸಿನಿಮಾ 50 ದಿನಗಳನ್ನು ಪೂರೈಸಿದ್ದು, ಚಿತ್ರತಂಡ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿದೆ.

ಅಂದ್ಹಾಗೆ 'ಬಡವ ರಾಸ್ಕಲ್' ಟೈಟಲ್ ಅಣ್ಣಾವ್ರ ಸಿನಿಮಾದ ಫೇಮಸ್ ಡೈಲಾಗ್. ಮೊದಲು 'ಬಡವ ರಾಸ್ಕಲ್' ಟೈಟಲ್ ಹೇಳಿ ಇದೂ ಕೂಡ ರೌಡಿಸಂ ಸಿನಿಮಾ ಅಂದುಕೊಳ್ಳಲಾಗಿತ್ತು. ಮೊದಲೇ ಧನಂಜಯ್ ಬರೀ ರೌಡಿಸಂ ಸಿನಿಮಾ ಮಾಡ್ತಾರೆ ಅನ್ನುವ ಆರೋಪವಿತ್ತು. 'ಬಡವ ರಾಸ್ಕಲ್' ಅಂತ ಟೈಟಲ್ ಇಟ್ಟಾಗ, ಈ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟ ಆಗುತ್ತೋ ಇಲ್ಲವೋ ಅನ್ನುವ ಗೊಂದಲವಿತ್ತು. ಅದೆಲ್ಲಾ ಈಗ ನಿವಾರಣೆಯಾಗಿ ಈಗ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೇ ವೇಳೆ ಸಿನಿಮಾ ಬಗ್ಗೆ ಧನಂಜಯ್ ಮನಬಿಚ್ಚಿ ಮಾತಾಡಿದ್ದಾರೆ.

ಬಡವ ರಾಸ್ಕಲ್ ಮುದ್ದಾದ ಬೈಗುಳ

ಬಡವ ರಾಸ್ಕಲ್ ಮುದ್ದಾದ ಬೈಗುಳ

" ಟೈಟಲ್ ಯಾಕೆ ಅಂದರೆ, ಅದು ಅಣ್ಣಾವ್ರ ಬಾಯಲ್ಲಿ ಅಷ್ಟು ಚೆನ್ನಾಗಿ ಕೇಳಿಸುತ್ತಿತ್ತು. ಮನೆ ಮನೆಗೆ ತಲುಪಿದ್ದಂತಹ ಟೈಟಲ್. ಸಿನಿಮಾಗೆ, ಆ ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಿತ್ತು. ಪ್ರೀತಿಯಿಂದ ಬಡವ ರಾಸ್ಕಲ್ ಅಂತ ಬೈತಾರಲ್ಲಾ. ತಮಿಳು, ತೆಲುಗಿನಲ್ಲೂ ಕೂಡ ಅದೇ ಅರ್ಥ ಈ ಟೈಟಲ್‌ಗೆ. ಮುದ್ದಾದ ಬೈಗುಳ ಅದಕ್ಕೆ ಟೈಟಲ್ ಇಟ್ವಿ. ನಾನೊಂದಿಷ್ಟು ನೆಗೆಟಿವ್ ಟೈಟಲ್ ಇಟ್ಕೊಂಡು ತುಂಬಾ ಒಳ್ಳೆ ಹುಡುಗ ಅಂತ ಇಡುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಆ ಟೈಟಲ್ ಬೇಕು ಅಂತಾನೇ ಇಟ್ಟಿದ್ದು." ಎಂದು ಡಾಲಿ ಧನಂಜಯ್ ಟೈಟಲ್ ಬಗ್ಗೆ ರವೀಲ್ ಮಾಡುತ್ತಾರೆ.

ವಿಲನ್ ಆಗಿ ದುಡಿದ್ದನ್ನು ಸಿನಿಮಾ ಮಾಡಿದ್ದೇನೆ

ವಿಲನ್ ಆಗಿ ದುಡಿದ್ದನ್ನು ಸಿನಿಮಾ ಮಾಡಿದ್ದೇನೆ

" ನಾವು ಸಿನಿಮಾ ಶುರು ಮಾಡುವಾಗ ನಮ್ಮ ಬಳಿ ದುಡ್ಡಿರಲಿಲ್ಲ. ತುಂಬಾನೇ ಕಮ್ಮಿ ದುಡ್ಡಿದ್ದಿದ್ದು. ವಿಲನ್ ಆಗಿ ದುಡಿದ್ದನ್ನೆಲ್ಲಾ ಸಿನಿಮಾಗೆ ಹಾಕಿ. ಎಲ್ಲರೊಂದಿಗೂ ಸೇರಿಕೊಂಡು ಸಿನಿಮಾ ಮಾಡಿದೆ. ದುಡ್ಡಿದ್ದಾಗ ಎಲ್ಲರೂ ಆಸ್ತಿ ಮೇಲೆ ಹಾಕುತ್ತಾರೆ. ನಾನು ನನ್ನ ಟ್ಯಾಲೆಂಟ್ ಮೇಲೆ ಹಾಕಿದೆ. ಆ ಎಲ್ಲಾ ಪ್ರತಿಭೆಗಳೂ ಸಿನಿಮಾವನ್ನು ದುಡಿದುಕೊಟ್ಟಿದ್ಧಾರೆ. ಇನ್ನೊಂದಿಷ್ಟು ಸಿನಿಮಾ ಮಾಡುವ ಶಕ್ತಿ ಕೊಟ್ಟಿದ್ದಾರೆ. ಇವರೆಲ್ಲರೂ ಸ್ವತಂತ್ರರಾಗಿ ಬೆಳೆಯಲು ತಾಕತ್ತಿರುವ ಶಕ್ತಿಗಳು." ಎನ್ನುತ್ತಾರೆ ಡಾಲಿ ಧನಂಜಯ್.

ಟೀ ಅಂಗಡಿಯಲ್ಲೂ ನನ್ನ ನಂಬರ್ ಸಿಗುತ್ತೆ

ಟೀ ಅಂಗಡಿಯಲ್ಲೂ ನನ್ನ ನಂಬರ್ ಸಿಗುತ್ತೆ

"ನಂದೊಂದು ನಂಬರ್ ಇದೆ. ಅದು ಎಲ್ಲರ ಹತ್ತಿರನೂ ಇದೆ. ಅಲ್ಲಿ ಫೋಟೊ ತಗೊಂಡು ಅಲ್ಲೇ ವಾಟ್ಸಾಪ್ ಕಳಿಸಿರುತ್ತಾರೆ. ಶಿವಮೊಗ್ಗದಲ್ಲಿ ಶೂಟಿಂಗ್ ಮಾಡಬೇಕಾದರೂ ಅಷ್ಟೆನೇ. ಫೋಟೊ ತಗೊಂಡು ತಕ್ಷಣ ನನಗೆ ವಾಪಾಸ್ ಕಳುಹಿಸಿದ್ದರು. ಆತರ ಸರ್ಕ್ಯೂಲೆಟ್ ಆಗಿದೆ. ಟೀ ಅಂಗಡಿಯಲ್ಲಿ ಹೋಗಿ ಕೇಳಿದರೂ ನಂಬರ್ ಕೊಡುತ್ತಾರೆ." ಎಂದು ತನ್ನ ನಂಬರ್ ಬಗ್ಗೆ ಧನಂಜಯ್ ರಿವೀಲ್ ಮಾಡಿದ್ದಾರೆ.

 ತೆಲುಗಿನಲ್ಲೂ 'ಬಡವ ರಾಸ್ಕಲ್'

ತೆಲುಗಿನಲ್ಲೂ 'ಬಡವ ರಾಸ್ಕಲ್'

ಕರ್ನಾಟಕದಲ್ಲಿ 'ಬಡವ ರಾಸ್ಕಲ್' ಬಿಡುಗಡೆಯಾಗಿ ಹಿಟ್ ಆಗಿದೆ. ಈ ಸಿನಿಮಾ ಗೆಲ್ಲುತ್ತಿದ್ದಂತೆ ತೆಲುಗಿನಲ್ಲೂ ಬಿಡುಗಡೆ ಮಾಡಲು ಧನಂಜಯ್ ನಿರ್ಧರಿಸಿದ್ದಾರೆ. ನಿನ್ನೆ (ಫೆ 15) 'ಬಡವ ರಾಸ್ಕಲ್' ತೆಲುಗು ಅವತರಣಿಕೆ ಬಿಡುಗಡೆ ಬಗ್ಗೆ ಪ್ರಚಾರ ಮಾಡಿದ್ದಾರೆ. ಧನಂಜಯ್‌ಗೆ ರಾಮ್ ಗೋಪಾಲ್ ವರ್ಮಾ ಜೊತೆಯಾಗಿದ್ದರು. ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್ ಕೂಡ ತೆಲುಗು ಬಡವ ರಾಸ್ಕಲ್ ಪ್ರಚಾರದಲ್ಲಿ ಭಾಗಿಯಾಗಿದ್ದರು.

More from Filmibeat

English summary
Daali Dhanajay Starrer Badava Rascal completed 50 days. He revealed why he take Badava Rascal title.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X