ಡ್ಯಾಡಿಯಾದ ಡಾಲಿ; ಗಂಡು ಮಗುವಿಗೆ ಜನ್ಮ ನೀಡಿದ ಧನಂಜಯ್ ದಂಪತಿ

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಧನಂಜಯ್ ಪತ್ನಿ ಡಾ.ಧನ್ಯತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂಭ್ರಮದ ಸುದ್ದಿಯನ್ನು ಡಾಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗ ತಾನೇ ಜನಿಸಿದ ತಮ್ಮ ಪುತ್ರನ ಕೈ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆನೇ ಧನಂಜಯ್ ತಂದೆಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು. ಜೊತೆಗೆ ಪತ್ನಿ ಡಾ.ಧನ್ಯತಾ ಅವರೊಂದಿಗಿನ ಮೆಟರ್ನಿಟಿ ಫೋಟೋಶೂಟ್ ಮಾಡಿಸಿ, ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳನ್ನು ತಿಳಿಸಿದ್ದರು. ಈಗ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಸಂತಸವನ್ನು ಅವರೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

Daali Dhananjay and Dr Dhanyatha blessed with Baby Boy actor shared photo

ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ 2025 ಫೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನಲ್ಲಿ ಈ ಜೋಡಿ ಅದ್ಧೂರಿಯಾಗಿ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಅದಾದ ಒಂದು ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೇ ವರ್ಷ ಜನವರಿ ತಿಂಗಳಲ್ಲಿ ತಂದೆಯಾಗುತ್ತಿರುವ ಸುದ್ದಿಯನ್ನು ನೀಡಿದ್ದರು.

ಈಗ ಡಾಲಿ ಧನಂಜಯ್ ತಮ್ಮ ಪುತ್ರನ ಕೈನ ಫೋಟೋವನ್ನ ಶೇರ್‌ ಮಾಡಿ "As the sun rose, so did our greatest joy, our baby boy. ನಿಮ್ಮ ಪ್ರೀತಿ ಆಶೀರ್ವಾದವಿರಲಿ" ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಡಾಲಿ ಧನಂಜಯ್‌ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಂತೆ ಚಿತ್ರರಂಗದ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ತಂದೆಯಾಗಿರುವ ಖುಷಿಯಲ್ಲಿರುವ ಡಾಲಿ ಧನಂಜಯ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಅಣ್ಣಾ ಫ್ರಮ್ ಮೆಕ್ಸಿಕೋ', 'ಮದರ್ ಪ್ರಾಮೀಸ್', 'ಜಿಂಗೋ', 'ಡಾಲಿ', 'ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾಗಳು ಕೈಯಲ್ಲಿವೆ. ಇದರೊಂದಿಗೆ ಡಾಲಿ ಧನಂಜಯ್ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 'ಬಡವ ರಾಸ್ಕಲ್', 'ಟಗರು ಪಲ್ಯ'ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಇತ್ತೀಚೆಗೆ ಡಾಲಿ ಧನಂಜಯ್ ವೆಬ್ ಸೀರಿಸ್‌ಗೂ ಕೈ ಹಾಕಿದ್ದಾರೆ. ಜೀ 5 ನಲ್ಲಿ 'ಜೆರಾಕ್ಸ್' ಅನ್ನೋ ವೆನ್ ಸೀರಿಸ್ ಪ್ರಿಮೀಯರ್ ಆಗುತ್ತಿದೆ. 'ಬ್ಲಿಂಕ್ಸ್' ಸಿನಿಮಾವನ್ನು ನಿರ್ದೇಶಿಸಿದ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ನಾಗಭೂಷಣ, ಪಾಯಲ್ ಚಂಗಪ್ಪ, ಓಂ ಪ್ರಕಾಶ್ ರಾವ್, ಮಂಜು ಪಾವಗಡ ಸೇರಿದಂತೆ ಹಲವು ಮಂದಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಡಾಲಿ ಧನಂಜಯ್ ವೆಬ್ ಸೀರಿಸ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಅಲ್ಲಿಯೂ ಯಶಸ್ಸಿಗಾಗಿ ಎದುರು ನೋಡುತ್ತಿದ್ದಾರೆ. ನಟನೆ, ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಧನಂಜಯ್ ತಂದೆಯಾಗಿಯೂ ಹೊಸ ಜವಾಬ್ದಾರಿ ಸೇರಿಕೊಂಡಿದೆ. ಸದ್ಯ ತಂದೆಯಾದ ಖುಷಿಯಲ್ಲಿ ಇರುವ ಧನಂಜಯ್ ಸಿನಿಮಾ ಕೆಲಸಗಳಿಗೆ ಸ್ವಲ್ಪ ಕಾಲ ಬ್ರೇಕ್ ಕೊಡುತ್ತಾರೋ.. ಇಲ್ಲ ಕೆಲಸದಲ್ಲಿ ಬ್ಯುಸಿಯಾಗುತ್ತಾರೋ ಅನ್ನೋದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

English summary
Daali Dhananjay and Dr Dhanyatha blessed with Baby Boy actor shared photo.
Read more about: dhananjay baby boy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X